Arshad Nadeem: ಚಿನ್ನದ ಪದಕ ಗೆದ್ದ ನದೀಮ್ ಪಾಕ್ ಸರ್ಕಾರದ ಮುಂದಿಟ್ಟ ಬೇಡಿಕೆ ಕೇಳಿ ಭಾವುಕರಾದ ಜನ

Written by Soma Shekar

Published on:

---Join Our Channel---

Arashad Nadeem: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ (Arshad Nadeem) ಒಲಂಪಿಕ್ಸ್ ನಲ್ಲಿ (Olympics) ಚಿನ್ನದ ಪದಕವನ್ನು ಗೆದ್ದ ನಂತರ ತಮ್ಮ ದೇಶಕ್ಕೆ ಮರಳಿದ್ದು ಈ ಕ್ರೀಡಾಪಟುವಿನ‌ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದೆ. ಅಲ್ಲಿನ ಸರ್ಕಾರವು ನದೀಮ್ ಗೆ ಈಗಾಗಲೇ ಒಂದಷ್ಟು ಬಹುಮಾನಗಳನ್ನು ಸಹಾ ಘೋಷಣೆ ಮಾಡಿದ್ದು, ಇವೆಲ್ಲವುಗಳು ನಡುವೆ ನದೀಮ್ ಸರ್ಕಾರದ ಮುಂದೆ ಇಟ್ಟ ಬೇಡಿಕೆಗೆ ವ್ಯಾಪಕ ಮೆಚ್ಚುಗೆಗಳು ಹರಿದು ಬರುತ್ತಿದೆ.

ನದೀಮ್ ತಮ್ಮ ಗ್ರಾಮಕ್ಕೆ ಉತ್ತಮವಾದ ರಸ್ತೆ ಬೇಕಾಗಿದೆ. ತಮ್ಮ ಗ್ರಾಮಕ್ಕೆ ಅಡುಗೆ ಅನಿಲವನ್ನು ಒದಗಿಸಿದರೆ ಅದು ತನಗೆ ಮತ್ತು ತಮ್ಮ ಇಡೀ ಗ್ರಾಮಕ್ಕೆ ನೆರವಾಗಲಿದೆ ಎಂದಿದ್ದಾರೆ. ಅಲ್ಲದೇ ನನ್ನ ಸಹೋದರಿಯರು ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರದ ಮುಲ್ತಾನ್‌ ಗೆ ತೆರಳಬೇಕು. ಅಲ್ಲಿಗೆ ಹೋಗಲು ಒಂದೂವರೆಯಿಂದ ಎರಡು ಗಂಟೆ ಸಮಯ ಹಿಡಿಯುತ್ತದೆ.

ಬದಲಾಗಿ ಮಿಯಾನ್ ಚನ್ನು ನಗರದಲ್ಲಿ ಸರ್ಕಾರವು ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರೆ ಅದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ. ಇದು ನನ್ನ ದೊಡ್ಡ ಕನಸಾಗಿದ್ದು, ಸರ್ಕಾರ ಇಲ್ಲೊಂದು ವಿಶ್ವವಿದ್ಯಾಲಯವನ್ನು ತೆರೆದರೆ ನನ್ನ ಹಳ್ಳಿಗೆ ಮಾತ್ತವೇ ಅಲ್ಲದೇ ನೆರೆಹೊರೆಯವರಿಗೂ ಇದೊಂದು ಸಿಹಿ ಸುದ್ದಿಯಾಗುತ್ತದೆಂದು ನದೀಮ್​ ಪಾಕಿಸ್ತಾನದಲ್ಲಿ ಸುದ್ದಿಗಾರರ ಮುಂದೆ ಮಾತನಾಡಿದ್ದಾರೆ.

ಹೀಗೆ ಸಮಸ್ಯೆಗಳನ್ನು ವಿವರಿಸಿದ್ದು ಮಾತ್ರವೇ ಅಲ್ಲದೇ ನದೀಮ್ ತನಗೆ ಬೆಂಬಲ ನೀಡಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ತನ್ನ ತವರು ನೆಲಕ್ಕಾಗಿ ನದೀಮ್​ ಮನಸ್ಸು ಮಿಡಿದಿದ್ದನ್ನು ನೋಡಿದ ಪಾಕ್ ಜನರು ಅವರಿಗೆ ಜೈ ಕಾರ ಹಾಕಿದ್ದು, ನದೀಮ್ ನಿಸ್ವಾರ್ಥ ಆಲೋಚನೆಗಳಿಗೆ ಅಪಾರ ಮೆಚ್ಚುಗೆಗಳನ್ನು ನೀಡಿದ್ದಾರೆ. ನದೀಮ್ ಮಾತನಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Tirupati: ತಿರುಮಲಕ್ಕೆ ಹರಿದು ಬರ್ತಿದೆ ಭಕ್ತ ಸಾಗರ: ತಿರುಪತಿಗೆ ಹೋಗೋ ಪ್ಲಾನ್ ಇದ್ರೆ ಮೊದಲು ಈ ಸುದ್ದಿ ನೋಡಿ

Leave a Comment