Actor Nagarjuna: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೆ ವಿಚ್ಚೇದನ ನೀಡಿದ ನಂತರ ನಾಗಚೈತನ್ಯ ಮತ್ತೊಬ್ಬ ನಟಿಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆ ಸುದ್ದಿ ಕೇವಲ ವದಂತಿಗಳು ಎಂದು ಹೇಳಲಾಗುತ್ತಿತ್ತು. ಆದರೆ ಈಗ ವದಂತಿಗಳೇ ನಿಜವಾಗಿದೆ. ನಾಗಚೈತನ್ಯ (Nagachaitanya) ಶೋಭಿತಾ ಧೂಳಿಪಾಳ (Shobhita Dhulipala) ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಮೊನ್ನೆಯಷ್ಟೇ ಶೋಭಿತಾ ಮತ್ತು ನಾಗ ಚೈತನ್ಯ ಅಧಿಕೃತವಾಗಿ ತಮ್ಮ ರಿಲೇಷನ್ ಶಿಪ್ ಬಗ್ಗೆ ತಿಳಿಸಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ಸರಳವಾಗಿ ಸಂಭ್ರಮದಿಂದ ನಡೆದಿದ್ದು, ಅತಿ ಶೀಘ್ರದಲ್ಲೇ ಮದುವೆ ಸಮಾರಂಭವು ನಡೆಯಲಿದೆ ಎನ್ನಲಾಗಿದೆ. ಇವೆಲ್ಲವುಗಳ ನಡುವೆ ನಾಗಾರ್ಜುನ ಭಾವೀ ಸೊಸೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನ ಆಡಿದ್ದಾರೆ.
ನಾಗಾರ್ಜುನ ಅವರು, ನನಗೆ ಶೋಭಿತಾ ಬಹಳ ವರ್ಷಗಳಿಂದ ಗೊತ್ತಿದೆ. ನಿಮಗೆ ಆಶ್ಚರ್ಯವಾಗಬಹುದು, ಚೈತನ್ಯಗಿಂತ ಮೊದಲೇ ನನಗೆ ಶೋಭಿತಾ ಪರಿಚಯ ಇದೆ. ಚೈತನ್ಯಗೆ ಶೋಭಿತಾ ಪರಿಚಯವಾಗಿ 2 ವರ್ಷಗಳಾಗಿವೆ. ನನಗೆ ಆರು ವರ್ಷಗಳಿಂದ ಪರಿಚಯವಿದೆ ‘ಗೂಢಚಾರಿ’ ಸಿನಿಮಾದಲ್ಲಿ ಶೋಭಿತಾ ನಟನೆ ನನಗೆ ಬಹಳ ಇಷ್ಟವಾಗಿತ್ತು.
ಆ ವಿಷಯವನ್ನು ಅಂದೇ ನಾನು ಹೇಳಿದ್ದೆ. ನಾವಿಬ್ಬರು ಸಿನಿಮಾ, ಜೀವನ, ಫಿಲಾಸಫಿ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಶೋಭಿತಾ ಬಹಳ ತಿಳುವಳಿಕೆಯುಳ್ಳ ಹುಡುಗಿ ಎಂದು ತಮ್ಮ ಭಾವೀ ಸೊಸೆಯ ಬಗ್ಗೆ ನಾಗಾರ್ಜುನ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಾಗಾರ್ಜುನ ಅವರು ಆಡಿದ ಮಾತುಗಳನ್ನ ಕೇಳಿ ಸಮಂತಾ ಫ್ಯಾನ್ಸ್ ಬೇಸರಗೊಂಡಿದ್ದಾರೆ.
Sathya Serial: ಪ್ರೇಕ್ಷಕರ ಅಚ್ಚುಮೆಚ್ಚಿನ ಸತ್ಯ ಸೀರಿಯಲ್ ಇವತ್ತೇ ಮುಕ್ತಾಯ; ವಿಷಯ ಕೇಳಿ ಭಾವುಕರಾದ ಪ್ರೇಕ್ಷಕರು