Aamir Khan: ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi) ಅವರ ಐವತ್ತನೇ ಸಿನಿಮಾ ಮಹಾರಾಜ (Maharaja) ದೊಡ್ಡ ಹಿಟ್ ಆಗಿದೆ, ತಮಿಳುನಾಡಿನಲ್ಲಿ ಈ ಸಿನಿಮಾವನ್ನು ಜನರು ಆದರಿಸಿ ಮೆಚ್ಚುಗೆಗಳನ್ನು ನೀಡಿದ್ದಾರೆ. ಓಟಿಟಿಯಲ್ಲಿ ಈ ಸಿನಿಮಾವನ್ನು ನೋಡಿದ ಮೇಲೆ ನೆಟ್ಟಿಗರು ಸಹಾ ಈ ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ವಿಜಯ್ ಸೇತುಪತಿ ಅವರ ಅಭಿನಯಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ.
ಓಟಿಟಿಯಲ್ಲಿ ಕಮಾಲ್ ಮಾಡುತ್ತಿರುವ ಈ ಸಿನಿಮಾವನ್ನು ಇದೀಗ ಹಿಂದಿ ಭಾಷೆಯಲ್ಲಿ ರೀಮೇಕ್ ಮಾಡೋದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಮಹಾರಾಜ ಸಿನಿಮಾ ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ನೂರು ಕೋಟಿ ಗಳಿಸಿರುವುದು ಅದರ ಯಶಸ್ಸಿಗೆ ಸಾಕ್ಷಿಗಾಗಿದೆ. ಇದರಿಂದ ಸಹಜವಾಗಿಯೇ ರಿಮೇಕ್ ಕಡೆಗೆ ಗಮನ ನೀಡಿದ್ದಾರೆ.
ಮಹಾರಾಜ ಸಿನಿಮಾವನ್ನು ನಿಥಿಲನ್ ಸ್ವಾಮಿನಾಥನ್ ನಿರ್ದೇಶಿಸಿದ್ದು, ಈ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿ, ಓಟಿಟಿಯಲ್ಲಿ ಅದ್ಭುತ ಪ್ರತಿಕ್ರಿಯೆಗಳನ್ನ ಪಡೆದಿದೆ. ನೆಟ್ ಫ್ಲಿಕ್ ನಲ್ಲಿ ಈ ಸಿನಿಮಾ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡು ಸದ್ದು ಮಾಡುತ್ತಿದೆ. ಆದ ಕಾರಣ ರೀಮೇಕ್ ಗೆ ರೈಟ್ಸ್ ಪಡೆಯೋದಕ್ಕೆ ಬಹಳಷ್ಟು ಜನ ಟ್ರೈ ಮಾಡಿದ್ದಾರೆ.
ಮಾದ್ಯಮವೊಂದರ ವರದಿಯ ಪ್ರಕಾರ ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಅವರ ನಿರ್ಮಾಣ ಸಂಸ್ಥೆ ಮಹಾರಾಜ ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಅಮೀರ್ ಖಾನ್ ಸಿನಿಮಾ ಮಾಡುವುದು ಮಾತ್ರವಲ್ಲದೇ ವಿಜಯ್ ಸೇತುಪತಿ ಪಾತ್ರವನ್ನ ಸಹಾ ಮಾಡಲಿದ್ದಾರೆ ಎನ್ನುವುದು ಸುದ್ದಿಯಾಗಿದೆ.
Bhagyalakshmi: ಶ್ರೇಷ್ಠಾ ಬಂದ್ಲು ಮಂತ್ರವಾದಿ ಹತ್ರ; ಇದೆಂತಾ ಹುಚ್ಚರ ಸಂತೆ ಅಂತ ಸಿಟ್ಟಾದ್ರು ಪ್ರೇಕ್ಷಕರು