Kalki 2898 AD: ಪ್ರಭಾಸ್, ದೀಪಿಕಾ ಪಡುಕೋಣೆ, ಹಿರಿಯ ನಟರಾದ ಅಮಿತಾಬ್ ಬಚ್ಚನ್ ಮತ್ತು ಕಮಲ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಕಲ್ಕಿ 2898 AD (Kalki 2898 AD) ಬೆಳ್ಳಿತೆರೆಯ ಮೇಲೆ ತನ್ನ ಕಮಾಲ್ ಮಾಡಿದೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪೌರಾಣಿಕ ಮತ್ತು ವೈಜ್ಞಾನಿಕ ಆ್ಯಕ್ಷನ್ ಡ್ರಾಮ್ ಆಗಿ ಮೂಡಿ ಬಂದಿರುವ ಕಲ್ಕಿ ಪ್ರೇಕ್ಷಕರಿಗೊಂದು ಹೊಸ ಅನುಭೂತಿಯನ್ನು ನೀಡಿದೆ.
ಕಲ್ಕಿ ಸಿನಿಮಾ ಬಾಕ್ಸಾಫೀಸಿನಲ್ಲಿ ಏಳು ನೂರು ಕೋಟಿಗೂ ಅಧಿಕ ಗಳಿಕೆಯನ್ನು ಕಂಡಿದೆ. ಸಿನಿಮಾ ಥಿಯೇಟರ್ ಗಳಲ್ಲಿ ಜನರನ್ನ ರಂಜಿಸುತ್ತಿರೋ ಈ ಸಿನಿಮಾ ಓಟಿಟಿಗೆ ಯಾವಾಗ ಬರುತ್ತೆ ಅನ್ನೋ ನಿರೀಕ್ಷೆಗಳು ಸಹಾ ಈಗ ಅನೇಕರಿಗೆ ಇದೆ. ಹಾಗಾದ್ರೆ ಕಲ್ಕಿ 2898 AD ಸಿನಿಮಾದ ಓಟಿಟಿ ಸ್ಟ್ರೀಮಿಂಗ್ ಯಾವಾಗ ಅನ್ನೋದಕ್ಕೆ ಇಲ್ಲಿದೆ ಉತ್ತರ.
ಕಲ್ಕಿ ಸಿನಿಮಾ ಅಮೆಜಾನ್ ಪ್ರೈಮ್ (Amazon Prime) ಮತ್ತು ನೆಟ್ ಫ್ಲಿಕ್ಸ್ ನಲ್ಲಿ (Netflix) ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಅಮೆಜಾನ್ ನಲ್ಲಿ ಇಂಗ್ಲೀಷ್ ಸಬ್ ಟೈಟಲ್ ಜೊತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ಬರಲಿದ್ದು, ಹಿಂದಿ ವರ್ಷನ್ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಾಗಲಿದೆ ಎನ್ನುವ ಮಾಹಿತಿಗಳು ಹೊರ ಬಂದಿದೆ.
ಆರಂಭದಲ್ಲಿ ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಜುಲೈ ಅಂತ್ಯದ ವೇಳೆಗೆ ನೀಡುವ ನಿರ್ಧಾರವನ್ನು ಮಾಡಲಾಗಿತ್ತು. ಆದರೆ ಥಿಯೇಟರ್ ನಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಮತ್ತು ಕಲೆಕ್ಷನ್ ಮಾಡುತ್ತಿರುವ ಕಾರಣದಿಂದ ಸಿನಿಮಾ ಪ್ರದರ್ಶನದ ಅವಧಿಯನ್ನು ವಿಸ್ತರಿಸಿದ್ದು, ಈಗ ಕಲ್ಕಿ ಸೆಪ್ಟೆಂಬರ್ ಎರಡನೇ ವಾರದಲ್ಲಿ ಓಟಿಟಿಗೆ ಬರುವ ನಿರೀಕ್ಷೆ ಇದೆ.
ಕಲ್ಕಿ 2898 AD ಸಿನಿಮಾ ಬರೋಬ್ಬರಿ 600 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾದ ಅದ್ದೂರಿ ಸಿನಿಮಾ ಆಗಿದೆ. ವೈಜಯಂತಿ ಮೂವೀಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಓಟಿಟಿಗೆ ಬರುವ ವೇಳೆಗೆ ಸಾವಿರ ಕೋಟಿಗಳನ್ನು ಗಳಿಸುವ ನಿರೀಕ್ಷೆ ಇದೆ. ಥಿಯೇಟರ್ ನಲ್ಲಿ ನೋಡುಗರಿಗೆ ಹೊಸ ಅನುಭವವನ್ನು ನೀಡುತ್ತಿದೆ.