Bollywood Actress: ಸಿನಿಮಾ ರಂಗದಲ್ಲಿ ಇರುವವರಲ್ಲಿ ವಿವಾಹ, ವಿಚ್ಛೇದನ, ಬ್ರೇಕಪ್ ಗಳು ಅನ್ನೋದು ತೀರಾ ಸಾಮಾನ್ಯವಾದಂತಹ ವಿಚಾರವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬ್ರೇಕಪ್ ಮತ್ತು ಡಿವೋರ್ಸ್ ಗಳ ಸಂಖ್ಯೆಯಂತೂ ಹೆಚ್ಚಾಗುತ್ತಲೇ ಇದೆ. ಸ್ಟಾರ್ ಜೋಡಿಗಳೇ ವಿಚ್ಚೇದನ ಮತ್ತು ಬ್ರೇಕಪ್ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ ಎನ್ನುವುದು ಸುಳ್ಳಲ್ಲ.
ತೆರೆ ಮೇಲೆ ಅದ್ಭುತವಾಗಿ ನಟಿಸಿ ಜನರ ಮನಸ್ಸನ್ನು ಗೆಲ್ಲುವು ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಮಾತ್ರ ಖಂಡಿತ ಅಷ್ಟೊಂದು ಸಂತೋಷದಿಂದ ಇರುವುದಿಲ್ಲ. ಹಿಂದಿ ಕಿರುತೆರೆಯಲ್ಲಿ (Bollywood Actress) ಜನಪ್ರಿಯ ನಟಿಯಾಗಿರುವ ಜೆನ್ನಿಫರ್ ವಿಂಗೆಟ್ ಸೀರಿಯಲ್ ನಟಿಯಾದರೂ ಸಿನಿಮಾ ನಟಿಯಷ್ಟೇ ಜನಪ್ರಿಯತೆ ಪಡೆದಿದ್ದಾರೆ.
ಜೆನ್ನಿಫರ್ ವಿಂಗೆಟ್ (Jennifer Winget) ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ನಾಯಕಿಯಾಗಿ ಹೆಸರನ್ನು ಪಡೆದವರು. ಕಿರುತೆರೆಯಲ್ಲಿ ನಟಿಸುವಾಗಲೇ ನಟ ಕರಣ್ ಸಿಂಗ್ ಗ್ರೋವರ್ (Karan Singh Grover) ಜೊತೆಗೆ ಪರಿಚಯ ಏರ್ಪಟ್ಟಿತು. ಇಬ್ಬರೂ ಸೀರಿಯಲ್ ನಲ್ಲಿ ನಟಿಸುವಾಗಲೇ ಪರಿಚಿತರಾದರು.
ಜೆನ್ನಿಫರ್ ಮತ್ತು ಕರಣ್ ನಡುವಿನ ಪರಿಚಯ ಸ್ನೇಹವಾಗಿ, ನಂತರ ಅದು ಪ್ರೀತಿಯಾಗಿ ಬದಲಾಯಿತು. ಜೆನ್ನಿಫರ್ ಕೆರಿಯರ್ ನಲ್ಲಿ ಬ್ಯುಸಿಯಾಗಿರುವಾಗಲೇ ಕರಣ್ ಸಿಂಗ್ ಗ್ರೋವರ್ ಜೊತೆಗೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು.
ಪ್ರೀತಿಸಿ ಮದುವೆಯಾದ ಈ ಜೋಡಿಯ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲೇ ಇಲ್ಲ. ಜೆನ್ನಿಫರ್ ಗೆ ತಮ್ಮ ಪತಿ ಕರಣ್ ಗೆ ಬೇರೊಬ್ಬ ನಟಿಯ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆ ಎನ್ನುವ ವಿಚಾರವನ್ನು ಕೇಳಿ ಶಾಕ್ ಆಗಿದ್ದರು.
ಅಲ್ಲದೇ ಜೆನ್ನಿಫರ್ ಕರಣ್ ಗೆ ಸೆಟ್ ನಲ್ಲೇ ಕಪಾಳಕ್ಕೆ ಹೊಡೆದ ವಿಚಾರ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಇದಾದ ನಂತರ ಕರಣ್ ಮತ್ತು ಜೆನ್ನಿಫರ್ ವಿಚ್ಚೇದನ ಪಡೆದುಕೊಂಡರು. ಆದರೆ ಜೆನ್ನಿಫರ್ ತಮಗಾದ ನೋವಿನಿಂದ ಜೀವನದಲ್ಲಿ ಒಂಟಿಯಾಗಿ ಉಳಿದು ಬಿಟ್ಟರು.
ಕರಣ್ ಸಿಂಗ್ ವಿಚ್ಚೇದನದ ನಂತರ ಶ್ರದ್ಧಾ ನಿಗಮ್ ಜೊತೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಅನಂತರ ಶ್ರದ್ಧಾ ಅವರಿಂದಲೂ ದೂರದರು. ಕೊನೆಗೆ ಬಾಲಿವುಡ್ ನಟಿ ಬಿಪಾಶ ಬಸು ಜೊತೆಗೆ ಮೂರನೇ ಮದುವೆಯಾದ ನಟ ಪ್ರಸ್ತುತ ಬಿಪಾಶ ಜೊತೆಗೆ ಜೀವನವನ್ನು ನಡೆಸುತ್ತಿದ್ದಾರೆ.