Puttakkana Makkalu: ಸಿಂಗಾರಮ್ಮ ಎಂಟ್ರಿ ನೋಡಿ ಕಥೆ ಗೆಸ್ ಮಾಡಿದ ನೆಟ್ಟಿಗರು, ಬೇರೆ ಸೀರಿಯಲ್ ಗೆ ಕೊಟ್ರು ಕನೆಕ್ಷನ್

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ನಿನ್ನೆಯ ಎಪಿಸೋಡ್ ನಲ್ಲಿ ಹೊಸದೊಂದು ತಿರುವು ಪ್ರೇಕ್ಷಕರ ಮುಂದೆ ಬಂದಿದೆ. ಅದೇ ಬಂಗಾರಮ್ಮ (Bangaramma) ಸೋದರಿ ಸಿಂಗಾರಮ್ಮನ ಎಂಟ್ರಿ. ಜೈಲಿನಲ್ಲಿದ್ದ ಸಿಂಗಾರಿ ಈಗ ಬಿಡುಗಡೆ ಆಗಿದ್ದಾಳೆ.‌ ಸಿಂಗಾರಮ್ಮ ಮತ್ತು ಬಂಗಾರಮ್ಮನ ರೂಪ ಒಂದೇ, ತದ್ರೂಪಿಗಳು ಅಂತಾನೇ ಹೇಳಬಹುದು. ಆದರೆ ಗುಣ ಮಾತ್ರ ತದ್ವಿರುದ್ಧ ಅಂತ ಎಪಿಸೋಡ್ ನೋಡಿದವರಿಗೆ ಗೊತ್ತಾಗಿದೆ‌. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಂಗಾರಮ್ಮನ ಪಾತ್ರದ ಎಂಟ್ರಿ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.

ಎಂದಿನಂತೆ ಸೀರಿಯಲ್ ನ ಅಭಿಮಾನಿಗಳಾದರೆ ಹೊಸ ಪಾತ್ರದ ಎಂಟ್ರಿ ನೋಡಿ ಥ್ರಿಲ್ ಆಗಿದ್ದಾರೆ. ವಾಹಿನಿ ಶೇರ್ ಮಾಡಿದ ಪ್ರೊಮೋಗೆ ಮೆಚ್ಚುಗೆಗಳನ್ನು ನೀಡಿ ಕಾಮೆಂಟ್ ಗಳನ್ನು ಸಹಾ ಹಾಕ್ತಿದ್ದಾರೆ. ಆದರೆ ಇದೇ ವೇಳೆ ಒಂದಷ್ಟು ಜನ ಇದನ್ನ ಟೀಕೆ ಮಾಡೋದರ ಜೊತೆಗೆ ಮತ್ತೊಂದು ಖಾಸಗಿ ವಾಹಿನಿಯ ಜನಪ್ರಿಯ ಕಥೆಗೆ ಇದನ್ನ ಲಿಂಕ್ ಮಾಡಿ ಕಾಮೆಂಟ್ ಗಳನ್ನು ಸಹಾ ಮಾಡ್ತಾ ಇದ್ದಾರೆ.

ಏನಿದು ವಿಚಾರ ಅಂತ ನೋಡೋದಾದ್ರೆ, ಕಿರುತೆರೆಯ ಮತ್ತೊಂದು ಜನಪ್ರಿಯ ಸೀರಿಯಲ್ ರಾಮಾಚಾರಿಯಲ್ಲಿ (Ramachari Serial) ಕೆಲವು ತಿಂಗಳುಗಳ ಹಿಂದೆ ರಾಮಾಚಾರಿಯನ್ನ ಹೋಲುವ ಅವರ ತಮ್ಮ ಕೃಷ್ಣ ಅಲಿಯಾಸ್ ರೌಡಿ ಕಿಟ್ಟಿ ಎಂಟ್ರಿ ಕೊಟ್ಟಿದ್ದ. ಅನಂತರ ಅವನು ರಾಮಾಚಾರಿ ಆಗಿ ಮನೆಗೆ ಎಂಟ್ರಿ ಕೊಡೋದು, ತಾನು ಅದೇ ಮನೆಯ ಮಗ ಅಂತ ಗೊತ್ತಾಗಿ, ಒಳ್ಳೆಯದಕ್ಕೆ ಸಾಥ್ ನೀಡೋದು ಎಲ್ಲಾ ಮಾಡ್ತಾನೆ. ಈಗ ರಾಮಾಚಾರಿಯಲ್ಲಿ ಕಿಟ್ಟಿ ಪಾತ್ರ ಸತ್ತು ಹೋಯ್ತು ಅಂತ ತೋರಿಸಲಾಗಿದೆ.

ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸಿಂಗಾರಮ್ಮನ ಎಂಟ್ರಿ ನೋಡಿದ ಪ್ರೇಕ್ಷಕರು ಕಿಟ್ಟಿ ಪಾತ್ರಕ್ಕೆ ಸಿಂಗಾರಿ ಪಾತ್ರವನ್ನು ಹೋಲಿಕೆ ಮಾಡ್ತಾ ಇದ್ದಾರೆ. ಸಿಂಗಾರಮ್ಮ ಹೊರಗೆ ಬಂದ್ಮೇಲೆ ತನ್ನವರ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ಬರ್ತಾಳೆ, ಬಂಗಾರಮ್ಮನ ಜಾಗವನ್ನು ಸೇರ್ಕೊಳ್ತಾಳೆ ಆಮೇಲೆ ಒಂದು ದಿನ ಆಕೆ ಬಂಗಾರಮ್ಮ ಅಲ್ಲ ಅಂತ ಗೊತ್ತಾಗುತ್ತಾ ಅಂತ ನೆಟ್ಟಿಗರು ಕಥೆಯನ್ನು ಊಹೆ ಮಾಡ್ತಾ ಇದ್ದಾರೆ.

ಇನ್ನೂ ಕೆಲವರು ಈ ಪಾತ್ರದ ಅವಶ್ಯಕತೆ ಏನಿತ್ತು ಅಂದ್ರೆ, ನೆಟ್ಟಿಗರೊಬ್ಬರು ರಾಜಿ ಪುಟ್ಟಕ್ಕನ ಮನೆಗೆ ಸಹನಾ ತರ ಇರೋ ಇನ್ನೊಬ್ಬಳನ್ನ ಕರ್ಕೊಂಡು ಬರಬಹುದು ಎಂದು ವ್ಯಂಗ್ಯ ಮಾಡಿದ್ದಾರೆ. ಒಟ್ನಲ್ಲಿ ಈಗ ನೆಟ್ಟಿಗರು ಸಿಂಗಾರಮ್ಮನ ಪಾತ್ರದ ಬಗ್ಗೆ ಕಥೆಯನ್ನು ಏನು ಊಹೆ ಮಾಡಿದ್ದಾರೋ ಸೀರಿಯಲ್ ನಲ್ಲೂ ಹಾಗೇ ಆಗುತ್ತಾ ? ಅಥವಾ ಬೇರೆ ಏನಾದ್ರು ಇರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment