Abhishek Bachchan: ಬಾಲಿವುಡ್ ನ ಸಾಕಷ್ಟು ಜನಪ್ರಿಯ ಹಾಗೂ ಹೆಸರಾಂತ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯ ರೈ (Aishwarya Rai) ಅವರ ನಡುವೆ ಎಲ್ಲವೂ ಸರಿಯಾಗಿಲ್ಲ, ಅವರು ವಿಚ್ಛೇದನ (Divorce) ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವದಂತಿಗಳು ಇತ್ತೀಚಿನ ದಿನಗಳಲ್ಲಿ ಹಲವು ಮಾದ್ಯಮಗಳ ಸುದ್ದಿಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಎಷ್ಟೇ ಸುದ್ದಿಗಳು ಹರಿದಾಡಿದರೂ ಐಶ್ವರ್ಯ ರೈ ಆಗಲಿ ಅಭಿಷೇಕ್ ಆಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ.
ಅಲ್ಲದೇ ಈ ವದಂತಿಗಳು ಹರಿದಾಡುವ ಸಮಯದಲ್ಲೇ ಸಾಕಷ್ಟು ಬಾರಿ ಐಶ್ವರ್ಯ ಮತ್ತು ಅಭಿಷೇಕ್ ಕೆಲವು ಕಾರ್ಯಕ್ರಮಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಆದರೂ ಕೂಡಾ ಅವರ ನಡುವೆ ಯಾವುದೋ ಒಂದು ಸಮಸ್ಯೆ ಇದೆ ಎನ್ನುವ ಸುದ್ದಿಗಳು ಮಾತ್ರ ಇನ್ನು ಕೇಳಿ ಬರುತ್ತಲೇ ಇದೆ. ಈಗ ಇವೆಲ್ಲವುಗಳ ನಡುವೆ ಅಭಿಷೇಕ್ ಬಚ್ಚನ್ ಮಾಡಿರುವ ಹಳೆಯ ಟ್ವೀಟ್ ಒಂದು ಭರ್ಜರಿ ವೈರಲ್ ಆಗ್ತಿದೆ.
ವರ್ಷಗಳ ಹಿಂದೆ ಈಗ ಹರಡಿರುವಂತೆ ಅಭಿಷೇಕ್ ಮತ್ತು ಐಶ್ವರ್ಯ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿ ಯೊಂದು ಸಾಕಷ್ಟು ಸದ್ದನ್ನ ಮಾಡಿತ್ತು.ಆಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬಚ್ಚನ್ ಅವರು ಬಹಳ ವ್ಯಂಗ್ಯವಾಗಿ ಒಂದು ಪೋಸ್ಟನ್ನ ಶೇರ್ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದರು ಮತ್ತು ಹರಡಿರುವ ವದಂತಿಗಳ ಕುರಿತಾಗಿ ತಮ್ಮ ಸ್ಪಷ್ಟನೆ ಅಥವಾ ಪ್ರತಿಕ್ರಿಯೆಯನ್ನು ತಮ್ಮದೇ ಸ್ಟೈಲ್ ನಲ್ಲಿ ನೀಡಿದ್ದರು.
ಅಭಿಷೇಕ್ ಆಗ ತಮ್ಮ ಟ್ವೀಟ್ ನಲ್ಲಿ, ಸರಿ ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ನನಗೆ ಈ ವಿಷಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಅಂದ ಹಾಗೆ ನಾನು ಮರು ಮದುವೆ ಯಾವಾಗ ಆಗುತ್ತೇನೆ ಅನ್ನೋದನ್ನ ಸಹಾ ನನಗೆ ತಿಳಿಸಿಬಿಡಿ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ನನಗೂ ಮತ್ತು ಐಶ್ವರ್ಯಾಗೆ ಜೀವನ ಹೇಗೆ ನಡೆಸಬೇಕು ಅನ್ನೋದು ಗೊತ್ತಿದೆ. ಮೂರನೇ ವ್ಯಕ್ತಿ ಅದರ ಬಗ್ಗೆ ತಿಳಿಸಿಕೊಡುವ ಅಗತ್ಯ ಇಲ್ಲ.
ನಾನವಳನ್ನ ಎಷ್ಟು ಪ್ರೀತಿಸುತ್ತೇನೆ ಮತ್ತು ಅವಳು ನನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎನ್ನುವುದು ನನಗೆ ತಿಳಿದಿದೆ. ನೀವು ನಿಮ್ಮ ಅನುಕೂಲಕ್ಕಾಗಿ ಏನನ್ನಾದರೂ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಅದನ್ನ ಮುಂದುವರೆಸಿ. ನಾನು ಸಾರ್ವಜನಿಕ ವ್ಯಕ್ತಿ. ಎಲ್ಲ ಸಮಯದಲ್ಲೂ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ನನ್ನ ಮದುವೆ ಮತ್ತು ನನ್ನ ಜೀವನ ಮಾದ್ಯಮಗಳು ಏನು ಹೇಳುತ್ತವೆ ಎನ್ನುವುದನ್ನು ಅನುಸರಿಸಲ್ಲ. ಹಾಗಾಗಿ ಇದು ನನ್ನ ಸಮಸ್ಯೆಯಲ್ಲ ಎಂದಿದ್ದರು.