Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕೆ ಬಹುಬೇಡಿಕೆಯ ನಟಿ. ಪ್ಯಾನ್ ಇಂಡಿಯಾ ಸಿನಿಮಾ ಎಂದ ಕೂಡಲೇ ಪ್ರಸ್ತುತ ನಿರ್ಮಾಪಕ ಮತ್ತು ನಿರ್ದೇಶಕರ ಮೊದಲ ಆಯ್ಕೆ ರಶ್ಮಿಕಾ ಮಂದಣ್ಣ ಆಗಿದ್ದಾರೆ. ಹೀಗೆ ಜನಪ್ರಿಯತೆಯ ಉತ್ತುಂಗವನ್ನು ಏರುತ್ತಿರುವ ರಶ್ಮಿಕಾಗೆ ಡೀಪ್ ಫೇಕ್ ವೀಡಿಯೋಗಳ ಕಾಟ ಹೆಚ್ಚಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ರಶ್ಮಿಕಾ ಡೀಪ್ ಫೇಕ್ ವೀಡಿಯೋ (Rashmika Mandanna Deep fake video) ವೈರಲ್ ಆಗುವ ಮೂಲಕ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು.
ಅನಂತರ ಡೀಪ್ ಫೇಕ್ ವೀಡಿಯೋ ಮಾಡಿದವರನ್ನು ಪೊಲೀಸರು ತನಿಖೆ ಮತ್ತು ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಿದ್ದರು. ಆದರೆ ನಟಿಗೆ ಡೀಪ್ ಫೇಕ್ ವೀಡಿಯೋ ಕಾಟ ಮಾತ್ರ ಇನ್ನೂ ನಿಂತಿಲ್ಲ. ಈಗ ಮತ್ತೊಮ್ಮೆ ರಶ್ಮಿಕಾ ಡೀಪ್ ಫೇಕ್ ವೀಡಿಯೋ ವೈರಲ್ ಆಗಿದೆ. ಈ ಬಾರಿ ರಶ್ಮಿಕಾನ ಬಹಳ ಹಾಟ್ ಮತ್ತು ಬೋಲ್ಡ್ ಆಗಿ ಕಾಣುವಂತೆ ಕಿಡಿಗೇಡಿಗಳು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.
ರಶ್ಮಿಕಾ ಒಂದು ಕೆಂಪು ಬಿಕಿನಿ ಧರಿಸಿದ್ದು, ಜಲಪಾತದ ಎದುರು ಹಾಟ್ ಆಗಿ ಪೋಸ್ ನೀಡಿರುವುದನ್ನು ಈ ಹೊಸ ವೀಡಿಯೋದಲ್ಲಿ ನೋಡಬಹುದಾಗಿದೆ. ವೀಡಿಯೋ ಹೊರ ಬಂದ ಮೇಲೆ ಇದನ್ನ ನೋಡಿದ ನಟಿಯ ಅಭಿಮಾನಿಗಳು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳು ಸಿಕ್ಕಾಪಟ್ಟೆ ಪರಿಣಾಮಕಾರಿ ಆಗಿರುವ ಈ ದಿನಗಳಲ್ಲಿ ವೀಡಿಯೋಗಳು ಬಹಳ ಬೇಗ ವೈರಲ್ ಆಗಿ ಬಿಡುತ್ತವೆ.
ಸೋಶಿಯಲ್ ಮೀಡಿಯಾಗಳಲ್ಲಿ ಫೇಕ್ ನ್ಯೂಸ್, ನಕಲಿ ವೀಡಿಯೋಗಳು, ಫೋಟೋಗಳು ಬಹಳ ಬೇಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ಜನ ಇಂತಹ ಫೋಟೋಗಳನ್ನು ನೋಡಿದ ಕೂಡಲೇ ಅದು ಅಸಲಿಯೋ ಅಥವಾ ನಕಲಿಯೋ ಎನ್ನುವ ಆಲೋಚನೆಯನ್ನು ಸಹಾ ಮಾಡದೇ ನಿರ್ಧಾರವನ್ನು ಮಾಡಿಬಿಡುತ್ತಾರೆ. ಈಗ ರಶ್ಮಿಕಾ ಹೊಸ ಡೀಪ್ ಫೇಕ್ ವೀಡಿಯೋ ಬಗ್ಗೆ ಕೂಡಾ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.