Salaar 2 : ಬಾಹುಬಲಿ ಸಿನಿಮಾದ ಬಹಳ ದೊಡ್ಡ ಗೆಲುವಿನ ನ ನಂತರ ಸಾಹೋ, ರಾಧೇಶ್ಯಾಮ್ ಮತ್ತು ಆದಿಪುರುಷ್ ಹೀಗೆ ಮೂರು ಸಿನಿಮಾಗಳಲ್ಲೂ ನಟ ಪ್ರಭಾಸ್ ಗೆ (Prabhas) ಸೋಲು ಎದುರಾಗಿತ್ತು. ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದ ನಟ ಮತ್ತು ಅವರ ಅಭಿಮಾನಿಗಳ ನಿರೀಕ್ಷೆಯನ್ನು ನಿಜ ಮಾಡಿದ್ದು ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಸಲಾರ್ (Salaar) ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸಲಾರ್ ಸಿನಿಮಾದ ಗೆಲುವು ನಟನ ಅಭಿಮಾನಿಗಳಿಗೆ ದೊಡ್ಡ ಸಂಭ್ರಮವನ್ನೇ ತಂದು ಕೊಟ್ಟಿತ್ತು.
ಸಲಾರ್ ಸಿನಿಮಾದ ಗೆಲುವಿನ ನಂತರ ಎಲ್ಲರ ದೃಷ್ಟಿ ಸಲಾರ್ 2 (Salaar 2) ಸಿನಿಮಾದ ಕಡೆಗೆ ಇದೆ. ಆದರೆ ಇವೆಲ್ಲವುಗಳ ನಡುವೆಯೇ ಟಾಲಿವುಡ್ ನಲ್ಲೊಂದು ಹೊಸ ಸುದ್ದಿ ಹರಿದಾಡಿ ಎಲ್ಲರಿಗೂ ಶಾಕ್ ನೀಡಿದೆ. ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಪ್ರಭಾಸ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದು, ಈ ಕಾರಣದಿಂದಾಗಿ ಸಲಾರ್ 2 ಸಿನಿಮಾದ ಚಿತ್ರೀಕರಣ ನಿಂತು ಹೋಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಸಿನಿಮಾ ನಿಂತೇ ಹೋಯ್ತು ಎನ್ನುವ ಸುದ್ದಿಯು ಬಂದ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟನ್ನ ನೀಡಿದ್ದಾರೆ. ಸಲಾರ್ 2 ಸಿನಿಮಾ ನಿಂತೇ ಹೋಯ್ತು ಎನ್ನುವ ಸುದ್ದಿಯನ್ನು ನೋಡಿ ನಗುತ್ತಿದೆ ಎನ್ನುವಂತೆ ಪೋಸ್ಟ್ ಅನ್ನು ಮಾಡಲಾಗಿದೆ. ಇದನ್ನೇ ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ರೆಡ್ಡಿ (Likhita Reddy) ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು.
ಈ ಫೋಟೋವನ್ನು ನೋಡಿ, ಏನಾದ್ರು ಭಿನ್ನಾಭಿಪ್ರಾಯ ಕಾಣ್ತಾ ಇದ್ಯಾ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳುವ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬಿಸಿದವರಿಗೆ ಲಿಖಿತಾ ರೆಡ್ಡಿ ಅವರು ತಿರುಗೇಟನ್ನು ನೀಡಿದ್ದಾರೆ. ಅಲ್ಲಿಗೆ ಹರಡಿರುವ ಸುದ್ದಿಗಳು ಕೇವಲ ವದಂತಿಗಳು ಮಾತ್ರವೇ ಹೊರತು ಅದರಲ್ಲಿ ಯಾವುದೇ ತಿರುಳಿಲ್ಲ ಎನ್ನುವುದೀಗ ಸ್ಪಷ್ಟವಾಗಿದೆ. ಪ್ರಸ್ತುತ ನಟ ಪ್ರಭಾಸ್ ತಮ್ಮ ಕಲ್ಕಿ 2898 AD ಸಿನಿಮಾದ ಕುರಿತಾಗಿ ಹೆಚ್ಚು ಗಮನವನ್ನು ನೀಡುತ್ತಿದೆ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.