Salman Khan: ಬಾಲಿವುಡ್ ನ ಮೋಸ್ಟ್ ಎಲಿಜಬೆಲೆ ಬ್ಯಾಚುಲರ್ ಅಂತಾನೇ ಹೆಸರನ್ನ ಪಡೆದಿರುವ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಈಗ ವಯಸ್ಸು 58 ವರ್ಷ. ಇದೇ ವೇಳೆ ಕೊಡಗಿನ ಬೆಡಗಿ ಸದ್ಯಕ್ಕೆ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯನ್ನು ಹೊಂದಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ 28 ವರ್ಷ ವಯಸ್ಸು. ಅಂದರೆ ಇವರಿಬ್ಬರ ನಡುವೆ ಬರೋಬ್ಬರಿ 30 ವರ್ಷಗಳ ವಯಸ್ಸಿನ ಅಂತರ ಇದೆ ಅನ್ನೋದು ತಿಳಿದು ಬರುತ್ತೆ. ಆದರೆ ಈಗ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಅಂತ ಹೇಳಲಾಗಿದ್ದು ಇವರ ರೋಮ್ಯಾನ್ಸ್ ಸಿನಿಮಾದಲ್ಲಿ ನಡೆಯಲಿದೆ.
ಸಲ್ಮಾನ್ ಮುಂದಿನ ಸಿನಿಮಾಕ್ಕೆ ರಶ್ಮಿಕಾ ನಾಯಕಿಯನ್ನು ವಿಚಾರ ಸುದ್ದಿಯಾದ ಮೇಲೆ ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಅಪ್ಪನ ವಯಸ್ಸಿನ ನಟನ ಜೊತೆಗೆ ರೋಮ್ಯಾನ್ಸ್ ಮಾಡಲು ಸಜ್ಜಾಗಿರುವ ರಶ್ಮಿಕಾ ಬಗ್ಗೆ ಸಿನಿ ಪ್ರೇಮಿಗಳು ಸಿಟ್ಟು ಹೊರಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲ್ಮಾನ್ ಖಾನ್ ಅವರನ್ನು ಭರ್ಜರಿಯಾಗಿ ಟ್ರೊಲ್ ಮಾಡುತ್ತಿದ್ದಾರೆ.
ಹೀಗೆ ವಯಸ್ಸಿನಲ್ಲಿ ದೊಡ್ಡ ಅಂತರ ಇರುವ ನಾಯಕ ನಾಯಕಿಯರು ಸಿನಿಮಾ ಮಾಡುವ ವಿಚಾರ ಇದೇ ಮೊದಲಲ್ಲ, ಈ ಹಿಂದೆಯೂ ಬೇರೆ ಬೇರೆ ಸಿನಿಮಾ ರಂಗಗಳಲ್ಲಿ ಸಾಕಷ್ಟು ನಟ ನಟಿಯರು ಹೀಗೆ ನಟಿಸಿರುವ ಬೇಕಾದಷ್ಟು ಉದಾಹರಣೆಗಳಿವೆ. ಬಾಲಿವುಡ್ ನಲ್ಲಿಯೂ ವಯಸ್ಸಿನಲ್ಲಿ ಕಿರಿಯ ನಟಿಯರ ಜೊತೆಗೆ ಹಿರಿಯ ರೋಮ್ಯಾನ್ಸ್ ಮಾಡಿರುವ ಸಿನಿಮಾಗಳು ಇದೆ. ಅಪ್ಪನ ವಯಸ್ಸಿನ ನಟರ ಜೊತೆಗೆ ರೋಮ್ಯಾನ್ಸ್, ಮಾಡಲು, ಲಿಪ್ ಲಾಕ್ ಮಾಡಲು, ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಲು ನಟಿಯರು ಹಿಂದೆಟು ಹಾಕೋದು ನಡೆಯುತ್ತಿರುತ್ತದೆ.
ಆದರೆ ಈಗ ಈಗಾಗಲೇ ದೊಡ್ಡ ಮಟ್ಟದಲ್ಲಿ ಸ್ಟಾರ್ ಡಂ ಪಡೆದಿರುವ ರಶ್ಮಿಕಾ ಈಗ ಹಿರಿಯ ನಟನ ಜೊತೆಗೆ ಇಂತಹ ಪಾತ್ರದಲ್ಲಿ ಮಾಡೋದು ಸರಿಯಲ್ಲ ಎಂದು ನಟಿಯ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಹಣಕ್ಕಾಗಿ ಯಾರ ಜೊತೆ ಬೇಕಾದರೂ ನಟಿಸುತ್ತಾರೆ ಎಂದು ಕೆಲವರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಆದರೆ ಇದೇ ವೇಳೆ ನಟಿಯರೇ ಎಲ್ಲದಕ್ಕೂ ಸೈ ಎಂದುಕೊಳ್ಳುವಾಗ ನಿಮಗೆ ಸಮಸ್ಯೆ ಏನು ಅಂತ ಇನ್ನೂ ಕೆಲವರು ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಹೊರಬಂದವು. ಈ ವಿಷಯವಾಗಿ ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದರು. ಈಗ ಸಿನಿಮಾದ ಹೆಸರು ರಿವೀಲ್ ಆಗಿದೆ. ರಶ್ಮಿಕಾ ಮತ್ತು ಸಲ್ಮಾನ್ ಜೋಡಿಯಾಗಿ ನಟಿಸುತ್ತಿರುವ ಸಿನಿಮಾಕ್ಕೆ ಸಿಕಂದರ್ (Sikandar)ಎನ್ನುವ ಹೆಸರನ್ನ ನೀಡಲಾಗಿದೆ. ಒಟ್ನಲ್ಲಿ ಸಿನಿಮಾ ಘೋಷಣೆಯ ನಂತರ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಟ್ರೋಲ್ ಗೆ ಗುರಿಯಾಗಿದ್ದಾರೆ.