IMDB top 100: ಟಾಪ್ 100 ನಲ್ಲಿ ಸ್ಥಾನ ಪಡೆದ ಏಕೈಕ ಕನ್ನಡ ನಟ ಯಶ್; ರಾಕಿಂಗ್ ಸ್ಟಾರ್ ಗೆ ಎಷ್ಟನೇ ಸ್ಥಾನ ?

Written by Soma Shekar

Published on:

---Join Our Channel---

IMDB top 100: ಕೆಜಿಎಫ್ ಸಿನಿಮಾದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಅವರು. ಕೆಜಿಎಫ್ ಸಿನಿಮಾಗಳು ತಂದುಕೊಟ್ಟ ಗೆಲುವಿನ ನಂತರ ಯಶ್ ಹಲವು ಸೆಲೆಬ್ರಿಟಿಗಳಿಗೆ ಜನಪ್ರಿಯತೆಯ ವಿಚಾರದಲ್ಲಿ ಗಟ್ಟಿ ಪೈಪೋಟಿಯನ್ನು ನೀಡುತ್ತಿದ್ದಾರೆ. ಈಗ ಸ್ಟಾರ್ ಗಳ ಜನಪ್ರಿಯತೆಯನ್ನು ತಿಳಿಸುವಂತಹ ಪಟ್ಟಿಯೊಂದು ಬಿಡುಗಡೆ ಆಗಿದೆ. ಐಎಂಡಿಬಿ (IMDB top 100) ವೆಬ್ ಸೈಟ್ ನಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಪಟ್ಟ ಭಾರತದ ನೂರು ಜನ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಆಗಿದೆ.

ಈ ಪಟ್ಟಿಯಲ್ಲಿ ಸ್ಟಾರ್ ನಟ ಯಶ್ (Yash) ಅವರು ಸಹಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಕನ್ನಡ ಸೆಲೆಬ್ರಿಟಿ ಆಗಿದ್ದಾರೆ ಯಶ್ ಅವರು. ಇದು ಕನ್ನಡಿಗರಿಗೆ ಖಂಡಿತ ಹೆಮ್ಮೆಯ ವಿಚಾರವಾಗಿದೆ. ಟಾಪ್ ನೂರು ಸೆಲೆಬ್ರಿಟಿಗಳ ಈ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ 89 ನೇ ಸ್ಥಾನ ದಕ್ಕಿದೆ.

ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2014 ಏಪ್ರಿಲ್ ನಿಂದ 2024 ಏಪ್ರಿಲ್ ವರೆಗೆ ಐಎಂಡಿಬಿ ವೆಬ್ ಸೈಟ್ ನಲ್ಲಿ ಸೆಲೆಬ್ರಿಟಿಗಳ ಪ್ರೊಫೈಲ್ ಗೆ ಎಷ್ಟು ಜನರು ಭೇಟಿ ನೀಡಿದ್ದಾರೆ ಎಂಬುದರ ಆಧಾರದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಪುಟಕ್ಕೆ ಹೆಚ್ಚು ಜನ ಭೇಟಿ ನೀಡಿದ್ದು ನಟಿ ಮೊದಲ ಸ್ಥಾನವನ್ನ ಪಡೆದುಕೊಂಡಿದ್ದಾರೆ.

ಕನ್ನಡದ ವಿಚಾರಕ್ಕೆ ಬಂದರೆ ಯಶ್ ಅವರನ್ನು ಬಿಟ್ಟು ಬೇರೆ ಯಾವುದೇ ಕನ್ನಡದ ಸೆಲೆಬ್ರಿಟಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ. ನೆರೆಯ ರಾಜ್ಯಗಳ ಸಿನಿಮಾ ಸೆಲೆಬ್ರಿಟಿಗಳು ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದಕ್ಷಿಣದ ಸೆಲೆಬ್ರಿಟಿಗಳಲ್ಲಿ ಸಮಂತಾ 13 ನೇ ಸ್ಥಾನವನ್ನು ಪಡೆದುಕೊಂಡು ಬೇರೆ ಎಲ್ಲರಿಗಿಂತ ಮುಂದೆ ಇದ್ದಾರೆ ಅನ್ನೋದು ವಿಶೇಷವಾಗಿದೆ.

ಇನ್ನುಳಿದಂತೆ 16ನೇ ಸ್ಥಾನದಲ್ಲಿ ತಮನ್ನಾ ಭಾಟಿಯಾ, 18ನೇ ಸ್ಥಾನದಲ್ಲಿ ನಯನತಾರ, 29ನೇ ಸ್ಥಾನದಲ್ಲಿ ಪ್ರಭಾಸ್, 30 ನೇ ಸ್ಧಾನದಲ್ಲಿ ಧನುಷ್, 31 ರಾಮ್ ಚರಣ್, ದಳಪತಿ ವಿಜಯ್ 35, ರಜನೀಕಾಂತ್ 42, ವಿಜಯ್ ಸೇತುಪತಿ 43, ಅಲ್ಲು ಅರ್ಜುನ್ 47, ಮೋಹನ್ ಲಾಲ್ 48 ಮತ್ತು ಆರ್ ಮಾಧವನ್ 50 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Leave a Comment