Puttakkana Makkalu: ಸ್ನೇಹ ಪಾತ್ರಕ್ಕೆ ಬರುವ ಹೊಸ ನಟಿ ಯಾರು? ನಿರ್ದೇಶಕರ ಪೋಸ್ಟ್ ಕೊಟ್ಟಿತ್ತಾ ಸುಳಿವು?

Written by Soma Shekar

Published on:

---Join Our Channel---

Puttakkana Makkalu: ಕಿರುತೆರೆಯ ನಂಬರ್ ಒನ್ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಹೊಸ ಹೊಸ ತಿರುವಿನಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಪುಟ್ಟಕ್ಕ ತನ್ನ ಮಗಳು ಸಹನಾಳನ್ನ ಹುಡುಕಿ ಬೆಂಗಳೂರು ಮಹಾನಗರಕ್ಕೆ ಬಂದಿದ್ದಾಳೆ. ಸ್ನೇಹ (Sneha) ಐಎಎಸ್ ಪರೀಕ್ಷೆ ಮುಗಿಸಿ ಸಂದರ್ಶನಕ್ಕೆ ದೆಹಲಿಗೆ ಹೋದರೆ, ಸಿಂಗಾರಮ್ಮ ತನ್ನ ಕುತಂತ್ರಗಳನ್ನ ಮಾಡ್ತಾ ಇದ್ದಾಳೆ. ಆದರೆ ಇವೆಲ್ಲವುಗಳ ನಡುವೆ ಹೊಸ ಅನುಮಾನ ಒಂದು ಮೂಡಿದೆ.

ಕೆಲವೇ ದಿನಗಳ ಹಿಂದೆ ಸೀರಿಯಲ್ ನ ನಿರ್ದೇಶಕರಾದ ಆರೂರು ಜಗದೀಶ್ ಅವರು ಸೀರಿಯಲ್ ನ ಒಂದು ಮುಖ್ಯ ಪಾತ್ರಕ್ಕೆ ಯುವತಿಯರು ಬೇಕಾಗಿದ್ದಾರೆ ಅನ್ನೋ ಪೋಸ್ಟ್ ಅನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಆಗ ಬಹುಶಃ ಹೊಸ ಪಾತ್ರವೊಂದು ಎಂಟ್ರಿ ಕೊಡಬಹುದಾ ಅನ್ನೋ ಅನುಮಾನ ಮೂಡಿತ್ತು. ಆದ್ರೆ ಈಗ ಇರೋ ಪಾತ್ರ ಬದಲಾವಣೆ ಆಗುತ್ತಾ ಅನ್ನೋ ಪ್ರಶ್ನೆ ಸಹಾ ಮೂಡಿದೆ.

ಸೀರಿಯಲ್ ಕಥೆಯಲ್ಲಿ ಸ್ನೇಹ ಐಎಎಸ್ ಪರೀಕ್ಷೆ ಬರೆದ ವಿಚಾರ ಗೊತ್ತೇ ಇದೆ. ಆದರೆ ಇದ್ದಕ್ಕಿದ್ದ ಹಾಗೆ ಪರೀಕ್ಷೆ ಪಾಸ್ ಆಗಿ ದೆಹಲಿಗೆ ಹೋಗೋ ಹಾಗೆ ತೋರಿಸಿದ್ದು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ಪಾತ್ರ ಬದಲಾವಣೆ ಆಗೋ ಸಮಯದಲ್ಲಿ ಬೇರೆ ಊರಿಗೆ ಹೋಗೋ ತರ, ಅಪಘಾತ ಆಗೋ ತರ ತೋರಿಸಲಾಗುತ್ತೆ.

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲೂ ಶಾರ್ವರಿ ಪಾತ್ರ ಹೀಗೆ ಹೊರಗೆ ಹೋದಾಗ ನಟಿಯ ಪಾತ್ರ ಬದಲಾಗಿತ್ತು. ಈಗ ಪುಟ್ಟಕ್ಕನ ಮಕ್ಕಳಲ್ಲೂ ಹೀಗೆ ಆಗಬಹುದಾ? ಸ್ನೇಹ ಪಾತ್ರಕ್ಕೆ ಹೊಸ ನಟಿ ಬರ್ತಾರಾ? ನಿರ್ದೇಶಕರು ಪ್ರಮುಖ ಪಾತ್ರಕ್ಕೆ ನಟಿ ಬೇಕು ಅಂತ ಅದೇ ಕಾರಣಕ್ಕೆ ಜಾಹೀರಾತು ನೀಡಿದ್ರಾ? ಅನ್ನೋ ಪ್ರಶ್ನೆಗಳು ಮೂಡಿದ್ದು, ಉತ್ತರಕ್ಕಾಗಿ ಇನ್ನು ಸ್ವಲ್ಪ ದಿನ ಕಾಯಲೇಬೇಕಾಗಿದೆ.

Raj B Shetty : ಅವರಿಗಾಗಿ ಬಾಲಿವುಡ್ ಸಿನಿಮಾ ಒಪ್ಪಿಕೊಂಡೆ, ರಾಜ್ ಬಿ ಶೆಟ್ಟಿಗೆ ಸ್ಪೂರ್ತಿಯಾದ ಆ ವ್ಯಕ್ತಿ ಯಾರು?

Leave a Comment