Brundavana Serial: ಕನ್ನಡ ಕಿರುತೆರೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಬೃಂದಾವನ ಸೀರಿಯಲ್ (Brundavana Serial) ಮುಗಿದಿದೆ. ಕಿರುತೆರೆಯಲ್ಲಿ ಸೂಪರ್ ಹಿಟ್ ಸೀರಿಯಲ್ ಗಳನ್ನು ನೀಡಿರುವ ನಿರ್ದೇಶಕ ರಾಮ್ ಜಿ (Ramji) ಅವರ ಬೃಂದಾವನ ಸೀರಿಯಲ್ ಇಷ್ಟು ಬೇಗ ಅಂದರೆ 167 ಎಪಿಸೋಡ್ ಗಳಿಗೆ ಮುಗಿದಿದ್ದು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಬೃಂದಾವನ ಸೀರಿಯಲ್ ಆರಂಭವಾದಾಗ ನಾಯಕ ಆಕಾಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶ್ವನಾಥ್ ಹಾವೇರಿ ಅನಂತರ ಈ ಪಾತ್ರಕ್ಕೆ ಎಂಟ್ರಿ ಕೊಟ್ಟವರು ವರುಣ್ ಆರಾಧ್ಯ.
ಇತ್ತೀಚಿಗೆ ರಾಮ್ ಜಿ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಾವಿರ ಎಪಿಸೋಡ್ ಗಳ ಬೃಂದಾವನ ಇಷ್ಟು ಬೇಗ ಮುಗಿದಿದ್ದು ಯಾಕೆ? ಹೀರೋ ಬದಲಾಗಿದ್ದು ಯಾಕೆ ಎನ್ನುವ ಒಂದಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಧಾರಾವಾಹಿ ಬರೆದಾಗ ಅದು 1000 ಎಪಿಸೋಡ್ ವರೆಗೆ ಇತ್ತು. ನಾನು ಬರೆದ ಬೆಸ್ಟ್ ಟಾಪ್ 5 ರಲ್ಲಿ ಇದೂ ಒಂದು. ಆದರೆ ಅನಿವಾರ್ಯ ಕಾರಣಗಳಿಂದ ಬೃಂದಾವನ ಸೀರಿಯಲ್ ನ ನಿಲ್ಲಿಸಬೇಕಾಗಿ ಬಂತು ಎಂದಿದ್ದಾರೆ.
ಇದೇ ವೇಳೆ ಅವರು ಮೊದಲು ಹೀರೋ ಆಗಿದ್ದ ವಿಶ್ವನಾಥ್ (Vishwanath Haveri) ಒಳ್ಳೆ ಹುಡುಗ. ಕ್ಯಾರೆಕ್ಟರ್ ಗೆ ತುಂಬಾ ಸೂಕ್ತವಾಗಿದ್ದ, ಆದ್ರೆ ಆರೋಗ್ಯ ಸಮಸ್ಯೆ ಇಂದ ತುಂಬಾ ಸಣ್ಣ ಆಗಿ ಬಿಟ್ಟ. ಎಷ್ಟು ಸಣ್ಣ ಅಂದ್ರೆ ಮದುವೆ ಗೆಟಪ್ ನಲ್ಲಿ ತೋರಿಸೋಕೆ ಆಗಲಿಲ್ಲ.ದ ಮದುವೆ ಶೂಟಿಂಗ್ ಟೈಮ್ ನಲ್ಲಿ ಆರು ದಿನ ಡೇ ಅಂಡ್ ನೈಟ್ ಶೂಟ್ ಇತ್ತು. ವಿಶ್ವನಾಥ್ ಗೆ ಹುಷಾರಿರಲಿಲ್ಲ, ರೆಸ್ಟ್ ಕೊಡದೇ ಶೂಟ್ ಮಾಡೋದು ತಪ್ಪಾಗುತ್ತೆ. ಆದ ಕಾರಣ ರಾತ್ರೋ ರಾತ್ರಿ ವರಣ್ ಆರಾಧ್ಯ (Varun Aradhya) ನಮಗೆ ಸಿಕ್ಕಿದ್ದು ಎಂದು ಹೇಳಿದ್ದಾರೆ.
ಈ ಮೂಲಕ ಅವರು ವಿಶ್ವನಾಥ್ ಸೀರಿಯಲ್ ನ ನಾಯಕನ ಪಾತ್ರದಿಂದ ಬದಲಾಗಿದ್ದು ಯಾಕೆ ಅನ್ನೋ ವಿಚಾರವಾಗಿ ಇಷ್ಟು ದಿನಗಳ ಕಾಲ ಇದ್ದ ಪ್ರಶ್ನೆಗಳಿಗೆ ಸ್ಪಷ್ಟನೆಯನ್ನ ನೀಡಿದ್ದಾರೆ. ಇನ್ನೊಂದು ಕಡೆ ಬೃಂದಾವನ ಸೀರಿಯಲ್ ಇಷ್ಟು ಬೇಗ ಮುಗಿದಿದ್ದು ಅನೇಕರಿಗೆ ಬೇಸರವನ್ನು ಉಂಟು ಮಾಡಿದೆ. ಮೆಗಾ ಸೀರಿಯಲ್ ಆಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಇದ್ದವರಿಗೆ ಸೀರಿಯಲ್ ಮುಗಿದಿದ್ದು ಅಚ್ಚರಿಯನ್ನು ಸಹಾ ಮೂಡಿಸಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.