Research: ಒಂದು ಬಹಳ ಕುತೂಹಲಕಾರಿ ಅಧ್ಯಯನ (Research) ವರದಿ ಹೊರಬಿದ್ದಿದೆ. ಇದರಲ್ಲಿ ಹೆಚ್ಚಿನ ಜನರು ಯಾವ ಸಮಯದಲ್ಲಿ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆಂದು ತಿಳಿಯಲಾಗಿದೆ. ಯುಕೆ ಐಷಾರಾಮಿ ಒಳಉಡುಪುಗಳ ಬ್ರಾಂಡ್ ಪೌರ್ ಮೊಯ್ (pour moi) ಪುರುಷರ ಲೈಂಗಿಕ ಅಭ್ಯಾಸಗಳನ್ನು ತಿಳಿಯಲು ಸಮೀಕ್ಷೆ ನಡೆಸಿದ್ದು, ಇದರಲ್ಲಿ ಹೆಚ್ಚಿನವರು ಶನಿವಾರ ರಾತ್ರಿ 10.09 ಕ್ಕೆ ಹೆಚ್ಚು ರೋಮ್ಯಾನ್ಸ್ ಮಾಡುತ್ತಾರೆ ಎನ್ನಲಾಗಿದೆ.
ಈ ಸಮೀಕ್ಷೆಯಲ್ಲಿ ನಿಯಮಿತವಾಗಿ ರೋಮ್ಯಾನ್ಸ್ ನಲ್ಲಿ ತೊಡಗುವ 2000 ಜನರು ಭಾಗಿಯಾಗಿದ್ದರು. ಇದರಲ್ಲಿ 43 % ರಷ್ಟು ಜನರು ಶನಿವಾರದಂದು, 22% ಜನರು ಶುಕ್ರವಾರದಂದು, 10% ಜನರು ಭಾನುವಾರದಂದು ರೋಮ್ಯಾನ್ಸ್ ಮಾಡಲು ಇಷ್ಟವೆಂದು ಒಪ್ಪಿಕೊಂಡಿದ್ದಾರೆ. 22 ರಷ್ಟು ಜನರು ಶುಕ್ರವಾರದಂದು ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ ಎಂದು ಹೇಳಿದ್ದಾರೆ.
10 % ಜನರು ಭಾನುವಾರದಂದು ಹೆಚ್ಚು ರೋಮ್ಯಾನ್ಸ್ ಮಾಡುವುದಾಗಿ ಒಪ್ಪಿಕೊಂಡರೆ ಮತ್ತು 6% ಜನರು ಗುರುವಾರ ಹೆಚ್ಚು ಪ್ರಣಯ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಅನೇಕರು ವಾರದ ಆರಂಭದ ದಿನಗಳಲ್ಲಿ ರೋಮ್ಯಾನ್ಸ್ ಗೆ ಆಸಕ್ತಿಯನ್ನು ತೋರಿಸಿಲ್ಲ. ಕೇವಲ 2% ಜನರು ಮಾತ್ರವೇ ಸೋಮವಾರ ರೋಮ್ಯಾನ್ಸ್ ಇಷ್ಟ ಎಂದಿದ್ದಾರೆ.
ಹೆಚ್ಚಿನವರು ತಡರಾತ್ರಿಯಲ್ಲಿ ಲೈಂಗಿಕತೆಯನ್ನು ಹೊಂದುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಹೆಚ್ಚಿನ ಜನರು ರಾತ್ರಿ 10:09 ಕ್ಕೆ ರೋಮ್ಯಾನ್ಸ್ ಗೆ ಒಪ್ಪಿಕೊಂಡರು. ಮಧ್ಯಾಹ್ನದ ಸಮಯದಲ್ಲಿ ಜನ ರೋಮ್ಯಾನ್ಸ್ ಗೆ ಆಸಕ್ತಿ ತೋರಿಸಿಲ್ಲವೆಂದು ಅಧ್ಯಯನಗಳು ತಿಳಿಸಿವೆ. ಅದಕ್ಕಾಗಿಯೇ ಕೆಲಸದ ಸಮಯದಲ್ಲಿ ರೋಮ್ಯಾನ್ಸ್ ಮಾಡುವ ಜನರು ವಿಚಿತ್ರವಾಗಿರುತ್ತಾರೆ.
Shubman Gill: ಗಿಲ್ ದಿಲ್ ಗೆ ಲಗ್ಗೆ ಇಟ್ಟ ಪೋರಿಯರು; ನಾಲ್ವರ ಜೊತೆ ಯುವ ಕ್ರಿಕೆಟಿಗ ಶುಭ್ಮನ್ ಡೇಟಿಂಗ್