Vinesh Phogat: ಬಿಜೆಪಿ ನಮ್ಮ ಜೊತೆ ಇರಲಿಲ್ಲ, ಕಾಂಗ್ರೆಸ್ ಗೆ ಧನ್ಯವಾದಗಳು, ವಿನೇಶ್ ಫೋಗಟ್

Written by Soma Shekar

Published on:

---Join Our Channel---

Vinesh Phogat: ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಮತ್ತು ಬಜರಂಗ್ ಪೂನಿಯಾ (Bajrang Punia) ಇಬ್ಬರೂ ಸಹಾ ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರಿದ ನಂತರ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ನೀಡಿರುವ ಇವರು ಎಐಸಿಸಿ (AICC) ಕೇಂದ್ರ ಕಛೇರಿಯಲ್ಲಿ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.

ವಿನೇಶ್ ಫೋಗಟ್ ಮಾತನಾಡುತ್ತಾ,
ನಮ್ಮನ್ನು ರಸ್ತೆಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಬೇರೆಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತಿದ್ದವೆಂದು ಹೇಳಿದ್ದಾರೆ.‌ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದ ವಿನೇಶ್, ಕುಸ್ತಿಪಟುವಾಗಿ ನನ್ನ ಪ್ರಯಾಣವು ನನ್ನ ಅನುಭವವನ್ನು ಹೆಚ್ಚಿಸಿದೆ.

ನಾನು ಪ್ರತಿ ಅಸಹಾಯಕ ಮಹಿಳೆಯೊಂದಿಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದಾರೆ. ಬಿಜೆಪಿ ನಮ್ಮೊಂದಿಗೆ ನಿಂತಿಲ್ಲ, ಬಿಜೆಪಿ ನಮ್ಮನ್ನು ಟೀಕಿಸಿದೆ, ನಾವು ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದೆ ಎಂದಿದ್ದಾರೆ. ಇದೇ ವೇಳೆ ಬಜರಂಗ್ ಪೂನಿಯಾ, ಒಲಿಂಪಿಕ್ಸ್ ಪಯಣದಲ್ಲಿ ಎಲ್ಲರೂ ವಿನೇಶ್ ಅವರನ್ನು ಬೆಂಬಲಿಸಿದ್ದಾರೆ.

ಆದರೆ ಕೆಲವು ಐಟಿ ಸೆಲ್‌ಗಳು ಆಕೆಯನ್ನು ಅನರ್ಹಗೊಳಿಸಿದಾಗ ಸಂಭ್ರಮ ಪಟ್ಟಿದ್ದವೆಂದು ಹೇಳಿದ್ದು, ಕಾಂಗ್ರೆಸ್ ಮೂಲಕ ನಾನು ದೇಶದ ಮಹಿಳೆಯರಿಗಾಗಿ, ಪಕ್ಷಕ್ಕಾಗಿ ಮತ್ತು ತಳಮಟ್ಟದ ಜನರಿಗೆ ಸಹಾಯ ಮಾಡಲು ಶ್ರಮಿಸುತ್ತೇನೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

Ravi Teja: ಮಿ.ಬಚ್ಚನ್ ಹೀನಾಯ ಸೋಲು, ನಟ ರವಿತೇಜ ಶಾಕಿಂಗ್ ಘೋಷಣೆ, ಹರಿದು ಬರ್ತಿದೆ ಅಪಾರ ಮೆಚ್ಚುಗೆ

Leave a Comment