Vinesh Phogat: 100 ಗ್ರಾಂ ತೂಕ ಹೆಚ್ಚವರಿಯ ಕಾರಣದಿಂದಾಗಿ ಒಲಿಂಪಿಕ್ ನಿಂದಲೇ (Olympics) ಅನರ್ಹಗೊಂಡಿರುವ ಕುಸ್ತಿ ಪಟು ವಿನೇಶ್ ಫೋಗಟ್ (Vinesh Phogat) ವಿಚಾರವಾಗಿ ಈಗಾಗಲೇ ಸಾಕಷ್ಟು ಸುದ್ದಿಗಳ ನಡುವೆಯೇ ಅವರ ಪದಕದ ಆಸೆ ಇನ್ನೂ ಜೀವಂತವಾಗಿದೆ ಎನ್ನುವುದು ಅನೇಕರಿಗೆ ಖುಷಿಯನ್ನು ನೀಡಿದೆ. ಫೈನಲ್ ನಿಂದ ತಮ್ಮನ್ನ ಅನರ್ಹಗೊಳಿಸಿದ ನಿರ್ಣಯದ ವಿರುದ್ಧ ವಿನೇಶ್ ಫೋಗಟ್ ಅವರ ಮೇಲ್ಮನವಿಯ ವಿಚಾರವಾಗಿ, ಕ್ರೀಟಾ ನ್ಯಾಯ ಮಂಡಳಿ ತನ್ನ ನಿರ್ಧಾರವನ್ನು ಇಂದು ತಿಳಿಸಲಿದೆ.
ಮಾದ್ಯಮ ವರದಿಗಳ ಪ್ರಕಾರ, ಸಿಎಎಸ್ ನ ತಾತ್ಕಾಲಿಕ ವಿಭಾಗವು ತೀರ್ಮಾನದ ಗಡುವನ್ನು ಆಗಸ್ಟ್ 11 ರಂದು ಸಂಜೆ 6 ಗಂಟೆಯವರೆಗೆ ವಿಸ್ತರಣೆ ಮಾಡಿದೆ ಎನ್ನಲಾಗಿದೆ. ಡಾ. ಅನ್ನಾಬೆಲ್ಲೆ ಬೆನೆಟ್, ವಿನೇಶ್ ಫೋಗಾಟ್ vs ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮತ್ತು ಇಂಟರ್ನ್ಯಾಷನಲ್ ಒಲಂಪಿಕ್ ಸಮಿತಿಯ ಪ್ರಕರಣದಲ್ಲಿ ನಿರ್ಧಾರವನ್ನು ಇಂದು ಪ್ರಕಟಣೆ ಮಾಡಲಿದ್ದಾರೆ.
ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರನ್ನು ಈ ವಿಷಯದಲ್ಲಿ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಸಿಎಎಸ್ ಆಡ್ ಹಾಕ್ ವಿಭಾಗದ ಮುಂದೆ ವಿನೇಶ್ ಫೋಗಟ್ ಅವರ ಪರವಾಗಿ ವಾದವನ್ನು ಮಾಡುವ ಸಲುವಾಗಿ ನಿಯೋಜನೆ ಮಾಡಲಾಗಿದೆ.
ವಿನೇಶ್ ಫೋಗಟ್ ಅನರ್ಹಗೊಂಡ ಸಮಯದಲ್ಲಿ ಅವರಿಗೆ ಚಿನ್ನದ ಪದಕ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮನವಿಯನ್ನು ಮಾಡಲಾಗಿತ್ತು. ಆದರೆ ಸಾಧ್ಯವಾಗದ ಕಾರಣ ಸೆಮಿ ಫೈನಲ್ ನಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಬೆಳ್ಳಿ ಪದಕ ನೀಡುವಂತೆ ಮನವಿಯನ್ನ ಮಾಡಲಾಗಿದೆ.
Samantha : ನಾಗಚೈತನ್ಯ ನಿಶ್ಚಿತಾರ್ಥ ಈಗ ಸಮಂತಾ ಎರಡನೇ ಮದುವೆ ಪ್ರಪೋಸಲ್ ! ಸ್ವತಃ ಸಮಂತಾ ಕೊಟ್ರು ರಿಪ್ಲೈ