Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ ದೇವರಕೊಂಡ ಇಬ್ಬರೂ ಸೌತ್ ಸಿನಿಮಾ ರಂಗದಲ್ಲಿ ಸ್ಟಾರ್ ಗಳು, ಇವರಿಬ್ಬರ ನಡುವೆ ಒಂದು ಆತ್ಮೀಯತೆಯ ಸ್ನೇಹ ಸಂಬಂಧವಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಲ್ಲದೇ ಆಗಾಗ ಇವರ ಕುರಿತಾಗಿ ಒಂದಷ್ಟು ಗಾಸಿಪ್ ಗಳು ಸಹಾ ಹರಿದಾಡುತ್ತಾ ಸುದ್ದಿಯಾಗುವುದು ಸಹಾ ನಡೆಯುತ್ತಲೇ ಇರುತ್ತದೆ. ರಶ್ಮಿಕಾ ಮತ್ತು ವಿಜಯ ದೇವರಕೊಂಡ ಗೀತಾ ಗೋವಿಂದಂ ನಲ್ಲಿ ಜೋಡಿಯಾಗಿ ನಟಿಸಿದ್ದರು. ಅಲ್ಲಿಂದಲೇ ಶುರುವಾಯ್ತು ಅವರ ನಡುವಿನ ಸ್ನೇಹ. ತೆರೆಯ ಮೇಲೆ ಇವರ ಕೆಮಿಸ್ಟ್ರಿ ನೋಡಿದ ಪ್ರೇಕ್ಷಕರು ತೆರೆಯ ಹಿಂದೆ ಸಹಾ ಇವರ ನಡುವೆ ಏನೋ ಇದೆ ಎಂದು ಮಾತನಾಡಿಕೊಂಡರು.
ಎಷ್ಟೇ ಸುದ್ದಿ ಹರಿದಾಡಿದರೂ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಅವರು ಹರಿಡುವ ಗಾಸಿಪ್ ಗಳಿಗೆ ಸ್ಪಷ್ಟನೆ ನೀಡುವ ಬಗ್ಗೆ ಆಲೋಚನೆ ಮಾಡುವುದಿಲ್ಲ ಬದಲಾಗಿ ನಾವು ಫ್ರೆಂಡ್ಸ್ ಅಷ್ಟೇ ಅಂತ ಹೇಳಿ ಸುಮ್ಮನಾಗುತ್ತಾರೆ. ನಾಳೆ ಅಂದರೆ ಏಪ್ರಿಲ್ 5 ರಂದು ನಟಿ ರಶ್ಮಿಕಾ ಮಂದಣ್ಣ ಅವರ ಜನ್ಮದಿನ. ಈ ಬಾರಿ ಜನ್ಮದಿನ ಆಚರಿಸಲು ನಟಿ ಅಬುದಾಬಿಗೆ ಹೋಗುತ್ತಿರುವ ವಿಚಾರವನ್ನ ಈಗಾಗಲೇ ತಿಳಿಸಿದ್ದಾರೆ.
ಇವೆಲ್ಲವುಗಳ ನಡುವೆ ರಶ್ಮಿಕಾ ಜನ್ಮದಿನಕ್ಕೆ ವಿಜಯ ದೇವರಕೊಂಡ (Vijaya Devarakonda) 50 ಕೋಟಿ ಬೆಲೆಯ ಉಡುಗೊರೆ ಕೊಡ್ತಿದ್ದಾರೆ ಅಂತ ಒಂದು ಸುದ್ದಿಯಾಗಿದೆ. ಏನದು ಅಷ್ಟೊಂದು ದುಬಾರಿ ಉಡುಗೊರೆ ಎಂದರೆ ನಾಳೆ ಏಪ್ರಿಲ್ ಐದರಂದು ನಟನ ಫ್ಯಾಮಿಲಿ ಸ್ಟಾರ್ (Family Star) ಸಿನಿಮಾ ಬಿಡುಗಡೆ ಆಗ್ತಿದ್ದು, ನಟನ ಅಭಿಮಾನಿಗಳು ಇದೇ ವಿಜಯ ದೇವರಕೊಂಡ ರಶ್ಮಿಕಾಗೆ ಕೊಡ್ತಿರೋ ದೊಡ್ಡ ಗಿಫ್ಟ್ ಅಂತ ಹೇಳಿದ್ದಾರೆ.
ಇನ್ನು ಇದೇ ವೇಳೆ ನಟ ತಮ್ಮ ಸಿನಿಮಾ ಪ್ರಚಾರ ಕಾರ್ಯ ಮುಗಿಸಿ ಅಬುದಾಬಿಗೆ (Abudabi) ಹಾರಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡಿದ್ದು, ರಶ್ಮಿಕಾ ಒಂದು ನವಿಲಿನ ಫೋಟೋ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದು, ವಿಜಯ ದೇವರಕೊಂಡ ಸಹಾ ಒಂದು ಪೋಸ್ಟ್ ಹಾಕಿದ್ದು ಅದರಲ್ಲೂ ನವಿಲು ಕಂಡಿದೆ. ಇದನ್ನು ನೋಡಿ ನೆಟ್ಟಿಗರು ರಶ್ಮಿಕಾ ಮತ್ತು ವಿಜಯ ದೇವರಕೊಂಡ ಇಬ್ಬರೂ ಕೂಡಾ ಅಬುದಾಬಿಯಲ್ಲೇ ಇದ್ದಾರೆ ಅಂತ ಗೆಸ್ ಮಾಡಿದ್ದಾರೆ.