Trisha : ಬರೋಬ್ಬರಿ 16 ವರ್ಷಗಳ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಪ್ರಭಾಸ್ ತ್ರಿಶಾ ಜೋಡಿ; ಆದ್ರೆ ದೊಡ್ಡ ಟ್ವಿಸ್ಟ್ ಕೂಡಾ ಇದೆ

Written by Soma Shekar

Published on:

---Join Our Channel---

Trisha : ತೆಲುಗು ಸಿನಿಮಾ ರಂಗದಲ್ಲಿ ಪ್ರಭಾಸ್ (Prabhas) ಮತ್ತು ತ್ರಿಷಾ (Trisha) ಜೋಡಿ ವರ್ಷಂ (Varsham) ಸಿನಿಮಾ ಮೂಲಕ ಸಿನಿ ಪ್ರೇಮಿಗಳ ಮೇಲೆ ಮಾಡಿದ್ದ ಮೋಡಿ ಅಷ್ಟಿಷ್ಟಲ್ಲ. ನಂತರ ಈ ಜೋಡಿ ಪೌರ್ಣಮಿ ಮತ್ತು ಬುಜ್ಜಿಗಾಡು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ವರ್ಷಂ ನಲ್ಲಿ ಪ್ರಭಾಸ್ ಮತ್ತು ತ್ರಿಷಾ ನಡುವಿನ ಕೆಮಿಸ್ಟ್ರಿ ಕಂಡು ಫ್ಯಾನ್ಸ್ ಫಿದಾ ಆಗಿದ್ದರು ಅನ್ನೋದ್ರಲ್ಲಿ ಎರಡು ಮಾತಿಲ್ಲ. 2008 ರಲ್ಲಿ ಬುಜ್ಜಿಗಾಡು ಸಿನಿಮಾದಲ್ಲಿ ನಟಿಸಿದ ನಂತರ ಈ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿಲ್ಲ.

ಪ್ರಸ್ತುತ ನಟ ಪ್ರಭಾಸ್ ತಮ್ಮ ಕಲ್ಕಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ನಟಿ ತ್ರಿಷಾ ಕೂಡಾ ನವ ನಟಿಯರಿಗೆ ಸವಾಲು ಎನ್ನುವಂತೆ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.‌ ಈಗ ಇವೆಲ್ಲವುಗಳ ನಡುವೆ ಬರೋಬ್ಬರಿ 16 ವರ್ಷಗಳ ನಂತರ ಪ್ರಭಾಸ್ ಮತ್ತು ತ್ರಿಷಾ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.‌

ಹೌದು, ಪ್ರಭಾಸ್ ತಮ್ಮ ಮುಂಬರುವ ಸ್ಪಿರಿಟ್ (Spirit Movie) ಸಿನಿಮಾದಲ್ಲಿ ದ್ವಿಪಾತ್ರ ಅಂದರೆ ಹೀರೋ ಮತ್ತು ವಿಲನ್ ಪಾತ್ರ ಮಾಡುತ್ತಿದ್ದು, ಈ ಸಿನಿಮಾದಲ್ಲಿ ವಿಲನ್ ಪ್ರಭಾಸ್ ಗೆ ಜೋಡಿಯಾಗಿ ನಟಿ ತ್ರಿಷಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ವಿಶೇಷ ಏನೆಂದರೆ ತ್ರಿಷಾ ಸಹಾ ಈ ಸಿನಿಮಾದಲ್ಲಿ ಲೇಡಿ ವಿಲನ್ ಆಗಿ ಮಿಂಚುತ್ತಾರೆ ಎನ್ನುವ ವಿಷಯ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.

ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಈಗಾಗಲೇ ನಟಿ ತ್ರಿಷಾರನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನಲಾಗಿದ್ದು, ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಘೋಷಣೆ ಮಾಡಲಾಗುವುದು ಎನ್ನುವ ನಿರೀಕ್ಷೆಗಳಿದ್ದು, ಅಭಿಮಾನಿಗಳು ಅದಕ್ಕಾಗಿ ಸಾಕಷ್ಟು ಕಾತರರಾಗಿ ಕಾಯುತ್ತಿದ್ದಾರೆ.‌

Puttakkana Makkalu: ಸ್ನೇಹ ಪಾತ್ರಕ್ಕೆ ಬರುವ ಹೊಸ ನಟಿ ಯಾರು? ನಿರ್ದೇಶಕರ ಪೋಸ್ಟ್ ಕೊಟ್ಟಿತ್ತಾ ಸುಳಿವು?

Leave a Comment