Rajamouli : ರಾಜಮೌಳಿ ಸಿನಿಮಾನ ಮುಲಾಜಿಲ್ಲದೇ ರಿಜೆಕ್ಟ್ ಮಾಡಿದ್ರು ತ್ರಿಷಾ, ಅಚ್ಚರಿ ಆದ್ರು ಇದು ನಿಜ

Written by Soma Shekar

Published on:

---Join Our Channel---

Rajamouli: ನಿರ್ದೇಶಕ ರಾಜಮೌಳಿ (Rajamouli) ಅವರ ಹೆಸರಿಗೆ ಇಂದು ಪರಿಚಯದ ಅಗತ್ಯ ಇಲ್ಲ. ವಿಶ್ವ ಸಿನಿಮಾ ರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರುವ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು. ರಾಜಮೌಳಿ ಸಿನಿಮಾ ಮಾಡ್ತಾರೆ ಅಂದಾಗ್ಲೇ ಅಲ್ಲೊಂದು ಕ್ರೇಜ್ ಸೃಷ್ಟಿಯಾಗುತ್ತೆ ಮತ್ತು ಅದರ ನಾಯಕ, ನಾಯಕಿ ಯಾರನ್ನೋ ಚರ್ಚೆ ಆರಂಭವಾಗುತ್ತೆ. ರಾಜಮೌಳಿ ಸಿನಿಮಾದಲ್ಲಿ ಆವಕಾಶ ಸಿಕ್ರೆ ಅದು ತಮ್ಮ ಅದೃಷ್ಟ ಅಂತಾನೇ ಭಾವಿಸ್ತಾರೆ ಕಲಾವಿದರು.

ರಾಜಮೌಳಿ ಸಿನಿಮಾದಲ್ಲೊಂದು ಸಣ್ಣ ಪಾತ್ರ ಸಿಕ್ಕರೂ ಅದೃಷ್ಟ ಎಂದು ಹಲವು ಕಲಾವಿದರು ಭಾವಿಸುತ್ತಾರೆ. ಆದರೆ ಇಂತಹ ನಿರ್ದೇಶಕನ ಸಿನಿಮಾವನ್ನು ಸೌತ್ ಬ್ಯೂಟಿ ತ್ರಿಶಾ (Trisha Krishnan) ತಿರಸ್ಕರಿಸಿದ್ದರು ಅಂದ್ರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಈ ವಿಷಯ ಖಂಡಿತ ಸತ್ಯ. ರಾಜಮೌಳಿ ಅವರು ಸಿಂಹಾದ್ರಿ, ಛತ್ರಪತಿ, ವಿಕ್ರಮಾರ್ಕುಡು, ಮಗಧೀರದಂತಹ ಸೂಪರ್ ಹಿಟ್ ಸಿನಿಮಾಗಳ ನಂತರ ಮರ್ಯಾದ ರಾಮನ್ನ ಸಿನಿಮಾ ನಿರ್ದೇಶನ ಮಾಡಿ ಅಚ್ಚರಿ ಮೂಡಿಸಿದ್ದರು.

ದೊಡ್ಡ ಬ್ಲಾಕ್ ಬಸ್ಟರ್ ಗಳನ್ನು ನೀಡಿದ್ದ ನಿರ್ದೇಶಕ ಇದ್ದಕ್ಕಿದ್ದ ಹಾಗೆ ಸ್ಟಾರ್ ನಟರನ್ನು ಬಿಟ್ಟು ಹಾಸ್ಯ ನಟನಾಗಿದ್ದ ಸುನೀಲ್ (Actor Sunil) ಅವರನ್ನು ನಾಯಕನನ್ನಾಗಿ ಮಾಡಿ ಮರ್ಯಾದ ರಾಮನ್ನ ಹೆಸರಿನ ಹಾಸ್ಯ, ಪ್ರೇಮ ಮತ್ತು ಆ್ಯಕ್ಷನ್ ಸಿನಿಮಾ ನಿರ್ದೇಶನಕ್ಕೆ ಮುಂದಾದರು. ಈ ಸಿನಿಮಾ ಕೂಡಾ ದೊಡ್ಡ ಯಶಸ್ಸು ಪಡೆದು ನಿರ್ಮಾಪಕರಿಗೆ ಭರ್ಜರಿ ಲಾಭವನ್ನು ತಂದು ಕೊಟ್ಟಿದ್ದು ಮಾತ್ರವೇ ಅಲ್ಲದೇ ಸುನೀಲ್ ಅವರಿಗೆ ಸಹಾ ಒಳ್ಳೆಯ ಹೆಸರನ್ನ ನೀಡಿತ್ತು.

ಈ ಸಿನಿಮಾಕ್ಕೆ ನಾಯಕಿಯಾಗಿ ನಟಿ ತ್ರಿಶಾ ಅವರನ್ನು ಸಂಪರ್ಕಿಸಿದಾಗ ತ್ರಿಶಾ ಈ ಅವಕಾಶ ತಿರಸ್ಕರಿಸಿದ್ದರು. ತ್ರಿಶಾ ಅದಾಗಲೇ ಸ್ಟಾರ್ ನಟಿಯಾಗಿದ್ದರು. ಸುನೀಲ್ ಒಬ್ಬ ಕಮಿಡಿಯನ್ ಆಗಿ ಜನಪ್ರಿಯತೆ ಪಡೆದಿದ್ದರು. ಸ್ಟಾರ್ ನಟರ ಜೊತೆಗೆ ನಟಿಸುತ್ತಿದ್ದ ತ್ರಿಶಾ ಸಹಜವಾಗಿಯೇ ಸುನೀಲ್ ಅವರ ಜೊತೆಗೆ ನಟಿಸಿದರೆ ತಮ್ಮ ಕೆರಿಯರ್ ಮೇಲೆ ಅದು ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಸಿನಿಮಾ ರಿಜೆಕ್ಟ್ ಮಾಡಿದರು.

ಅನಂತರ ಸ್ಟಾರ್ ನಟಿಯರ ಗೋಜಿಗೆ ಹೋಗದ ರಾಜಮೌಳಿ ಅವರು ಹೊಸ ಹುಡುಗಿ ಸಲೋನಿಯನ್ನು (Saloni) ನಾಯಕಿಯಾಗಿ ಪರಿಚಯಿಸಿದರು. ಸಲೋನಿಗೆ ಮರ್ಯಾದ ರಾಮನ್ನ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತಾದರೂ ನಂತರ ನಟಿಗೆ ಮತ್ತೆ ಅಂತಹ ದೊಡ್ಡ ಸಕ್ಸಸ್ ನೀಡುವ ಬೇರೊಂದು ಸಿನಿಮಾ ಸಿಗಲೇ ಇಲ್ಲ. ಬಹಳ ಬೇಗ ಸಲೋನಿ ಸಿನಿಮಾಗಳಿಂದ ಬೇಡಿಕೆ ಕಳೆದುಕೊಂಡರು.

Leave a Comment