Roja Selvamani: ಜಬರ್ದಸ್ತ್ ಕರೀತಿದೆ ಎದ್ದು ಬಾ, ಸೋತ ನಟಿ ರೋಜಾ ಬಗ್ಗೆ ನಿರ್ಮಾಪಕನ ಸಂಚಲನ ಹೇಳಿಕೆ

Written by Soma Shekar

Published on:

---Join Our Channel---

Roja Selvamani: ಆಂಧ್ರಪ್ರದೇಶದ ವಿಧಾನ ಸಭಾ ಚುನಾವಣಾ ಫಲಿತಾಂಶ (Andhra Pradesh Legislative Assembly Elections) ಹೊರಬಂದಾಗಿದೆ. ಈ ಬಾರಿ ಅಲ್ಲಿನ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಾರ್ಟಿ, ಬಿಜೆಪಿ ಮತ್ತು ಜನಸೇನಾ ಪಾರ್ಟಿಗಳ ಮೈತ್ರಿಕೂಟ ಅತಿಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಜಯಭೇರಿಯನ್ನು ಬಾರಿಸುತ್ತಿವೆ. 160 ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿರುವ ಮೈತ್ರಿ ಕೂಟ ಹೊಸ ಸರ್ಕಾರದ ರಚನೆಗೆ ಮುಂದಾಗಿದೆ.

ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ತೆಲುಗಿನ ಜನಪ್ರಿಯ ನಟಿ ರೋಜಾ (Roja Selvamani) ಅವರು ಚುನಾವಣೆಯಲ್ಲಿ ಸೋಲುಂಡ ಬೆನ್ನಲ್ಲೇ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ತೆಲುಗು ಸಿನಿಮಾ ನಿರ್ಮಾಪಕ ಬಂಡ್ಲ ಗಣೇಶ್ ಈಗ ನಟಿ ರೋಜಾ ಬಗ್ಗೆ ಸಂಚಲನ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಬಂಡ್ಲ ಗಣೇಶ್ (Bandla Ganesh) ತಮ್ಮ ಎಕ್ಸ್ ಖಾತೆಯಲ್ಲಿ ರೋಜಾ ಫೋಟೋ ಶೇರ್ ಮಾಡಿ ಸಾಲೊಂದನ್ನು ಬರೆದುಕೊಂಡಿದ್ದಾರೆ.

ನಟಿ ರೋಜಾ ಈ ಹಿಂದೆ ತೆಲುಗಿನ ಜನಪ್ರಿಯ ಕಾಮಿಡಿ ಶೋ ಜಬರ್ದಸ್ತ್ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಆ ಶೋ ನಲ್ಲಿ ಇರುವಾಗಲೇ ಎಂಎಲ್ಎ ಆಗಿದ್ದ ನಟಿ, ಅನಂತರ ಸಚಿವೆಯಾದ ಮೇಲೆ ಶೋ ನಿಂದ ಹೊರಗೆ ಬಂದಿದ್ದರು, ಎಂಎಲ್ಎ ಆದರೂ ಶೋನಲ್ಲಿ ಭಾಗವಹಿಸುತ್ತಿದ್ದ ನಟಿಯನ್ನು ಸಾಕಷ್ಟು ಟೀಕೆ ಮಾಡಲಾಗಿತ್ತು. ಈಗ ಬಂಡ್ಲ ಗಣೇಶ್ ಅವರು ನಟಿ ಚುನಾವಣೆಯಲ್ಲಿ ಸೋತಿದ್ದನ್ನು ವ್ಯಂಗ್ಯ ಮಾಡುತ್ತಾ, ‘ಜಬರ್ದಸ್ತ್ ಕರೀತಿದೆ ಬಾ’ ಎಂದು ಟ್ವೀಟ್ ಮಾಡಿದ್ದಾರೆ.

ವೈಎಸ್ಆರ್ ಕಾಂಗ್ರೆಸ್ ನಲ್ಲಿ ಸಚಿವೆಯಾಗಿದ್ದ ರೋಜಾ ಅವರು ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಮಾತ್ರವೇ ಅಲ್ಲದೇ ನಟ ಚಿರಂಜೀವಿ ಬಗ್ಗೆ ಸಹಾ ಬಹಿರಂಗವಾಗಿ ಕಟುವಾದ ಮಾತುಗಳನ್ನು ಆಡಿದ್ದರು. ಈ ಬಾರಿ ನಟಿ ನಗರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಟಿಡಿಪಿಯ ಗಾಲಿ ಭಾನುಪ್ರಕಾಶ್ ವಿರುದ್ಧ ಸೋಲನ್ನು ಕಂಡಿದ್ದಾರೆ.

Leave a Comment