Kollywood: ರಜನೀಕಾಂತ್ ಗೆ ವಿಲನ್ ಆಗ್ತಾರಾ ಸ್ಟಾರ್ ಹೀರೋ ನಾಗಾರ್ಜುನ? ಸಂಚಲನ ಸುದ್ದಿಗೆ ನಡುಗಿದ ಟಾಲಿವುಡ್

Written by Soma Shekar

Published on:

---Join Our Channel---

Kollywood: ಸಿನಿಮಾ‌ ರಂಗದಲ್ಲಿ ಸೂಪರ್‌ ಸ್ಟಾರ್‌ ಎಂದೇ ಹೆಸರನ್ನು ಪಡೆದುಕೊಂಡಿರುವ ನಟ ರಜಿನಿಕಾಂತ್‌ (Rajanikanth) ಮತ್ತು ನಿರ್ದೇಶಕ ಲೋಕೇಶ್‌ ಕನಗರಾಜ್‌ ( Lokesh Kanagaraj) ಕಾಂಬಿನೇಷನ್ ನಲ್ಲಿ ʼಕೂಲಿʼ (Coolie) ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ‌ದ ಅಪ್ಡೇಟ್ ಗಳು ಆಗಾಗ ಭರ್ಜರಿ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆನ್ನುವ ವಿಷಯ ಕುತೂಹಲವನ್ನು ಮೂಡಿಸಿದೆ.

ಕಾಲಿವುಡ್‌ ನಲ್ಲಿ (kollywood) ಕೂಲಿ ಅಭಿಮಾನಿಗಳ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಅಲ್ಲದೇ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗೋದು ಸಹಾ ಖಚಿತ ಎಂದು ಹೇಳಲಾಗಿದೆ.‌ ಟೈಟಲ್ ಟೀಸರ್ ಅನ್ನು ನೋಡಿದ ಮೇಲೆ ಸಿನಿಮಾದಲ್ಲಿ ರಜನೀಕಾಂತ್ ಡಿಫರೆಂಟ್ ಲುಕ್ ನಲ್ಲಿ ತಮ್ಮ ಅಭಿಮಾನಿಗಳ ಮುಂದೆ ಬರ್ತಾರೆ ಅನ್ನೋದು ಗೊತ್ತಾಗಿದೆ.

ಲೋಕೇಶ್ ಕನಗರಾಜ್ ಅವರ ಸಿನಿಮಾಗಳ ವಿಶೇಷತೆ ಏನೆಂದರೆ ತಮ್ಮ ಸಿನಿಮಾದಲ್ಲಿ ಕಲಾವಿದರ ಆಯ್ಕೆ ಎನ್ನುವುದಾಗಿದೆ. ಇವರ ಸಿನಿಮಾಗಳಲ್ಲಿ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಸೆಳೆಯುವಂತೆ ತಾರಾ ಬಳಗ ಇರುವುದು ಸಹಜವಾಗಿಯೇ ಸಿನಿ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತದೆ.

ಇದೀಗ ಹೊಸ ಅಪ್ಡೇಟ್ ಪ್ರಕಾರ ತೆಲುಗಿನ ಸ್ಟಾರ್ ನಟ, ಹಿರಿಯ ನಟ ನಾಗಾರ್ಜುನ (Nagarjuna) ಅವರು ಕೂಲಿ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡ್ತಾರೆ ಅನ್ನೋದಾಗಿದೆ. ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ಹೀರೋ ಆಗಿ ದಶಕಗಳ ಕಾಲ ಮಿಂಚಿರುವ ನಾಗಾರ್ಜುನ ಈಗ ವಿಲನ್ ಅನ್ನೋ ವಿಚಾರವೇ ಶಾಕ್ ಎನಿಸಿದ್ದು, ಈ ವಿಚಾರ ಅಧಿಕೃತವಾಗುತ್ತಾ ಕಾದು ನೋಡಬೇಕಾಗಿದೆ.

Vijay Devarakonda: ಫೋಟೋ ವೈರಲ್ ಬೆನ್ನಲ್ಲೇ ಪ್ಲೀಸ್ ಆ ಕೆಲ್ಸ ಮಾಡ್ಬೇಡಿ ಅಂತ ವಿಜಯ ದೇವರಕೊಂಡ ಮನವಿ

Leave a Comment