Actress Anjali: ಅಂತಹ ದೃಶ್ಯದಲ್ಲಿ ನಟಿಸುವಾಗ ಎಲ್ಲರನ್ನೂ ಹೊರಗೆ ಕಳಿಸುತ್ತಿದ್ದೆ; ಮೊದಲ ಬಾರಿಗೆ ಮೌನ ಮುರಿದ ಅಂಜಲಿ

Written by Soma Shekar

Published on:

---Join Our Channel---

Actress Anjali: ಟಾಲಿವುಡ್ ನಟಿ ಅಂಜಲಿ (Actress Anjali) ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈ ನಟಿ ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneet Rajkumar) ಅವರ ಜೊತೆಗೆ ರಣವಿಕ್ರಮ ಸಿನಿಮಾದಲ್ಲಿ ತೆರೆಯನ್ನು ಹಂಚಿಕೊಳ್ಳುವ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ಸಿನಿಮಾಗಳಲ್ಲಿ ನಾಯಕಿಯಾಗಿ ಮಾತ್ರವಲ್ಲದೇ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕವೂ ಈ ನಟಿ ಗಮನ ಸೆಳೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಯಕಿ ಪಾತ್ರಕ್ಕೆ ಮಾತ್ರವೇ ಕಾದು ಕೂರದ ಈ ನಟಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಸಾಲು ಸಾಲು ಸಿನಿಮಾದಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಸಿನಿಮಾಗಳು ಮಾತ್ರವೇ ಅಲ್ಲದೇ ವೆಬ್ ಸೀರೀಸ್ ಗಳಲ್ಲಿಯೂ ಮಿಂಚುತ್ತಿರುವ ಈ ನಟಿ ತನ್ನ ಅಂದ ಮತ್ತು ಅಭಿನಯ ಎರಡರಿಂದಲೂ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೋಮ್ಲಿ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟಿ ಅಂಜಲಿ ಇತ್ತೀಚಿನ ದಿನಗಳಲ್ಲಿ ಬೋಲ್ಡ್ ಪಾತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದಲ್ಲಿನ ಅವರ ಪಾತ್ರ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದೆ. ಅವರ ಬೋಲ್ಡ್ ಅಭಿನಯ ಕಂಡು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಬಹಿಷ್ಕರಣ (Bahishkarana) ಹೆಸರಿನ ವೆಬ್ ಸೀರೀಸ್ ನಲ್ಲಿ ನಟಿ ಚಳಿ ಬಿಟ್ಟು ನಟಿಸಿದ್ದಾರೆ.

ಮೊದಲ ಬಾರಿಗೆ ಅಂಜಲಿ ಇಂಟಿಮೇಟ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದು ಅಂತಹ ದೃಶ್ಯಗಳಲ್ಲಿ ನಟಿಸುವಾಗ ತಮ್ಮ ಆಲೋಚನೆಗಳು ಹೇಗಿತ್ತು ಎನ್ನುವುದನ್ನು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಅಂಜಲಿ ಅವರು ಮಾತನಾಡುತ್ತಾ, ನಾನು ಬಹುತೇಕ ನಟನೆಗೆ ಆದ್ಯತೆ ಇರುವ ಪಾತ್ರಗಳನ್ನ ಮಾತ್ರವೇ ಆರಿಸಿಕೊಂಡು ಸಿನಿಮಾಗಳಲ್ಲಿ ನಟಿಸಿಕೊಂಡು ಬಂದಿದ್ದೇನೆ. ಡ್ಯೂಪ್ ಗಳಿಲ್ಲದೇ ಆ್ಯಕ್ಷನ್ ದೃಶ್ಯಗಳನ್ನೂ ಮಾಡಿದ್ದೇನೆ.

ವೃತ್ತಿ ಜೀವನದ ಆರಂಭದಿಂದಲೂ ಬಹಳ ಅತ್ಯುತ್ತಮ ಪಾತ್ರಗಳು ನನಗೆ ಸಿಕ್ಕಿದೆ. ಬಹಿಷ್ಕರಣ ವೆಬ್ ಸೀರೀಸ್ ನಲ್ಲಿ ನಟಿಸುವಾಗ ಅದು ನನಗೆ ಬಹಳ ಹೊಸದಾಗಿತ್ತು. ಇದರಲ್ಲಿನ ಇಂಟಿಮೇಟ್ ದೃಶ್ಯಗಳ ಚಿತ್ರೀಕರಣ ಮಾಡುವಾಗ ತುಂಬಾ ಮುಜುಗರ ಆಗ್ತಿತ್ತು. ಅದಕ್ಕೆ ಶೂಟಿಂಗ್ ನಡೆಯುವಾಗ ಎಲ್ಲರನ್ನ ಹೊರಗೆ ಕಳುಹಿಸಿದ್ದೆ. ಈವರೆಗೆ ನಾನು ಇಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಗೊಂದಲವಾಯಿತು ಎಂದಿದ್ದಾರೆ.

ತನ್ನ ಕುರಿತಾಗಿ ಬರುವ ನೆಗೆಟಿವ್ ಕಾಮೆಂಟ್ ಗಳ ವಿಚಾರವಾಗಿ ಮಾತನಾಡಿದ ಅಂಜಲಿ ಅವರು, ಸೋಶಿಯಲ್ ಮೀಡಿಯಾಗಳ ನೆಗೆಟಿವಿಟಿ ಬಗ್ಗೆ ನಾನು ಅಷ್ಟಾಗಿ ಚಿಂತೆ ಮಾಡೋದಿಲ್ಲ. ನನ್ನ ಬಗ್ಗೆ ಯಾರಾದ್ರೂ ತಪ್ಪಾಗಿ ಬರೆದಾಗ ಆ ಕ್ಷಣಕ್ಕೆ ಬೇಸರವಾಗುತ್ತೆ.‌ ನಂತರ ನಾನು ಅದನ್ನು ಅಲ್ಲೇ ಮರೆತು ಬಿಡ್ತೇನೆ ಎನ್ನುವ ಮಾತುಗಳನ್ನು ಸಹಾ ಹೇಳಿಕೊಂಡಿದ್ದಾರೆ.‌

Yash Toxic : ಯಶ್ ಸಿನಿಮಾದಲ್ಲಿ ನಾಲ್ಕು ಜನ ಸ್ಟಾರ್ ಹೀರೋಯಿನ್ ಗಳು, ಅಪ್ಡೇಟ್ ಕೇಳಿ ಥ್ರಿಲ್ ಆದ ಫ್ಯಾನ್ಸ್

Leave a Comment