Actress Anjali: ಅದರ ಬಗ್ಗೆ ಈಗ ನಾನು ತುಟಿ ಬಿಚ್ಚುವ ಹಾಗಿಲ್ಲ, ನಟಿ ಅಂಜಲಿ ಮಾತಿಗೆ ಅಭಿಮಾನಿಗಳು ಶಾಕ್

Written by Soma Shekar

Published on:

---Join Our Channel---

Actress Anjali: ಟಾಲಿವುಡ್ ನ (Tollywood) ಜನಪ್ರಿಯ ನಟಿಯರಲ್ಲಿ ಅಂಜಲಿ (Actress Anjali) ಒಬ್ಬರಾಗಿದ್ದಾರೆ. ಮೂಲತಃ ತೆಲುಗಿನವರೇ ಆದ ಈ ನಟಿ ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಹೆಸರನ್ನು ಮಾಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಅವರ ರಣವಿಕ್ರಮ ಸಿನಿಮಾದಲ್ಲಿ ಅಂಜಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿ ಅಂಜಲಿ ಅವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸ್ಟಾರ್ ಹೀರೋಗಳ ಜೊತೆಗೆ ಇಡೀ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು.

ಅಂಜಲಿ ಪ್ರಸ್ತುತ ರಾಮ್ ಚರಣ್ (Ram Charan) ಅವರ ಗೇಮ್ ಚೇಂಜರ್ (Game Changer) ಸಿನಿಮಾದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಸ್ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಭಾರತೀಯ ಸಿನಿಮಾ ರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಅಭಿಮಾ‌ನಿಗಳು ಸಿನಿಮಾ ಬಿಡುಗಡೆಯ ದಿನಕ್ಕಾಗಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.

ಈ ಸಿನಿಮಾದಲ್ಲಿ ಅಂಜಲಿ ಬಹಳ ಪ್ರಮುಖವಾದ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತಾಗಿ ಅಂಜಲಿ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.‌ ನಟಿಯು ಮಾತನಾಡುತ್ತಾ ಪ್ರಸ್ತುತ ನಾನು ಗೇಮ್ ಚೇಂಜರ್ ಸಿನಿಮಾದಲ್ಲಿನ ನನ್ನ ಪಾತ್ರದ ಕುರಿತಾಗಿ ತುಟಿ ಬಿಚ್ಚುವ ಹಾಗಿಲ್ಲ.

ಆದರೆ ಅದೊಂದು ಸರ್ಪ್ರೈಸ್ ಆಗಿರಲಿದ್ದು, ಮುಂದಿನ ದಿನಗಳಲ್ಲಿ ನೀವು ನೋಡುವಿರಿ ಎಂದು ಹೇಳುವ ಮೂಲಕ ಅಭಿಮಾನಿಗಳ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಗೇಮ್ ಚೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಹಿಂದೆ ಒಂದು ಸಿನಿಮಾದಲ್ಲಿ ಕಿಯಾರಾ ರಾಮ್ ಚರಣ್ ಜೊತೆ ನಟಿಸಿದ್ದರು. ಇದು ನಾಯಕಿಯಾಗಿ ರಾಮ್ ಚರಣ್ ಜೊತೆಗೆ ಕಿಯಾರ ಅವರ ಎರಡನೇ ಸಿನಿಮಾ ಆಗಿದೆ.

Kareena Kapoor: ಸಂಭಾವನೆ ಕುರಿತು ಶಾಕಿಂಗ್ ಮಾತುಗಳನ್ನು ಶೇರ್ ಮಾಡಿದ ಕರೀನಾ ಕಪೂರ್ ಖಾನ್

Leave a Comment