Chanakya Niti : ಚಾಣಾಕ್ಯ ನೀತಿಯು (Chanakya Niti) ಎಲ್ಲಾ ಕಾಲಗಳಿಗೂ ಅನ್ವಯ ಆಗುವಂತಹ ಅದೆಷ್ಟೋ ಉತ್ತಮ ವಿಚಾರಧಾರೆಗಳನ್ನು ಹೊಂದಿದೆ. ಚಾಣಾಕ್ಯರು ಜೀವನದುದ್ದಕ್ಕೂ ಸಮಸ್ಯೆಗಳನ್ನು ಎದುರಿಸುವಂತಹ ವ್ಯಕ್ತಿಗಳ ಕುರಿತಾಗಿಯೂ ಹೇಳಿದ್ದಾರೆ. ಇಂತಹವರು ತಮ್ಮ ಕುಟುಂಬಕ್ಕೆ ಸದಾ ನೋವನ್ನು ನೀಡುತ್ತಾರೆ ಎಂದೂ ಸಹಾ ಹೇಳಿದ್ದು, ಯಾರು ಆ ವ್ಯಕ್ತಿಗಳು ಅನ್ನೋದನ್ನ ತಿಳಿಯೋಣ ಬನ್ನಿ.
ಸುಳ್ಳು ಹೇಳುವವನು, ಆಚಾರ್ಯ ಚಾಣಕ್ಯರ ಪ್ರಕಾರ ಯಾವ ವ್ಯಕ್ತಿ ಸುಳ್ಳು ಹೇಳುತ್ತಾನೋ ಆತ ಸುಳ್ಳನ್ನು ಸತ್ಯವೆಂದು ನಂಬಿಸಲು, ಸುಳ್ಳು ಸಾಕ್ಷ್ಯಗಳನ್ನು ನೀಡುತ್ತಾನೆ. ಇಂತಹ ಜನರು ಜೀವನದಲ್ಲಿ ಅತೃಪ್ತರಾಗಿರುತ್ತಾರೆ. ಏಕೆಂದರೆ ಹೇಳುವ ಸುಳ್ಳುಗಳನ್ನು ಸಾಬೀತು ಮಾಡಲು ಮತ್ತಷ್ಟು ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ.
ಅಪರಾಧಕ್ಕೆ ಶಿಕ್ಷೆ, ಸುಳ್ಳು ಹೇಳುವುದು ಅದನ್ನ ಸಾಬೀತು ಮಾಡಲು ಸುಳ್ಳು ಸಾಕ್ಷ್ಯ ನೀಡುವುದು ಎಲ್ಲವೂ ಸಹಾ ಅಪರಾಧವಾಗಿರುತ್ತದೆ. ಅವರು ಮಾಡಿದ ಅಪರಾಧಕ್ಕೆ ಒಂದಲ್ಲಾ ಒಂದು ದಿನ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಇಂತಹವರು ಸಾವಿನ ನಂತರ ನರಕಕ್ಕೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ.
ಕುಟುಂಬದವರಿಗೂ ಸಮಸ್ಯೆ ತಪ್ಪಿದ್ದಲ್ಲ
ಸುಳ್ಳು ಹೇಳಿ, ಅಪರಾಧ ಮಾಡುವ ಜನರು ತಾವು ಮಾಡುವ ತಪ್ಪುಗಳಿಂದಾಗಿ ತಮ್ಮ ಮನೆಯವರನ್ನೂ ಸಹಾ ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಅವರು ದುಃಖ ಪಡುವುದಲ್ಲದೇ ಕುಟುಂಬದವರಿಗೂ ದುಃಖ ಪಡುವಂತೆ ಮಾಡುತ್ತಾರೆ.
ಸುಳ್ಳನ್ನ ಬೆಂಬಲಿಸಬೇಡಿ, ಸುಳ್ಳು ಹೇಳುವವರಿಗೆ ಯಾವುದೇ ಕಾರಣಕ್ಕೂ ಬೆಂಬಲವನ್ನು ನೀಡಬಾರದು. ಇದರಿಂದ ಬೆಂಬಲ ನೀಡಿದವರೂ ಸಮಸ್ಯೆಗೆ ಸಿಲುಕಬಹುದು. ಅದಕ್ಕೆ ಪದೇ ಪದೇ ಸುಳ್ಳು ಹೇಳುವವರಿಗೆ ತಿದ್ದಿ ಬುದ್ಧಿಯನ್ನು ಹೇಳುವುದು ಉತ್ತಮವಾದ ಕೆಲಸವಾಗಿರುತ್ತದೆ.
ಸತ್ಯದ ಹಾದಿಯಲ್ಲಿ ನಡೆಯಿರಿ, ಸತ್ಯದ ಮಾರ್ಗದಲ್ಲಿ ನಡೆಯುವವರು ಯಶಸ್ಸನ್ನು ಪಡೆಯುವುದು ಸದಾ ಸಾಧ್ಯವಿಲ್ಲವಾದರೂ, ಈ ಮಾರ್ಗದಲ್ಲಿ ನಡೆಯುವುದರಿಂದ ಅವರಿಗೆ ತೊಂದರೆಗಳು ಎದುರಾಗುವುದಿಲ್ಲ ಎನ್ನುವುದು ಸತ್ಯ.
Evol Movie : ಸೆನ್ಸಾರ್ ಬ್ಯಾನ್ ಮಾಡಿದ ಬೋಲ್ಡ್ ಕಂಟೆಂಟ್ ಸಿನಿಮಾ ಈಗ OTT ಯಲ್ಲಿ ಬಿಡುಗಡೆ, ಯಾವುದು ಈ ಸಿನಿಮಾ