Karti Suriya: ತಮಿಳಿನಲ್ಲಿ ಸಹೋದರರ ಕಾದಾಟ; ನಟ ಸೂರ್ಯಗೆ ವಿಲನ್ ಆಗಿ ಬಿಟ್ರಾ ಅವರ ತಮ್ಮ ಕಾರ್ತಿ

Written by Soma Shekar

Published on:

---Join Our Channel---

Karthi Suriya : ತಮಿಳು ಸಿನಿಮಾ ರಂಗದಲ್ಲಿ ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ (Karthi Suriya) ಇಬ್ಬರೂ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಸ್ಟಾರ್ ನಟರಾಗಿರುವುದು ಮಾತ್ರವೇ ಅಲ್ಲದೇ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನೂ ಪಡೆದುಕೊಂಡಿದ್ದಾರೆ. ಇವರ ಹೊಸ ಸಿನಿಮಾಗಳಿಗಾಗಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯೊಂದಿಗೆ ಎದುರು ನೋಡುತ್ತಿರುತ್ತಾರೆ.

ಈಗ ಇಬ್ಬರೂ ನಟರು ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ. ಒಂದೇ ಸಿನಿಮಾದಲ್ಲಿ ಸೂರ್ಯ ಮತ್ತು ಕಾರ್ತಿ ಇಬ್ಬರೂ ಕೂಡಾ ಎದುರಾಳಿಗಳಾಗುತ್ತಿದ್ದು ವಿಷಯ ತಿಳಿದ ಫ್ಯಾನ್ ಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಮತ್ತು ಸಹೋದರರನ್ನು ಒಂದೇ ಸಿನಿಮಾದಲ್ಲಿ ನೋಡುವ ಕನಸು ನನಸಾಗುತ್ತದೆ ಎಂದು ಸಂತೋಷ ಪಡುತ್ತಿದ್ದಾರೆ.

ಹೌದು, ನಟ ಸೂರ್ಯ ಅವರ ಬಹು ನಿರೀಕ್ಷಿತ ಕಂಗುವಾ (Kanguva) ಸಿನಿಮಾಕ್ಕೆ ಕಾರ್ತಿ ಅವರು ಈಗ ಎಂಟ್ರಿಯನ್ನು ನೀಡಿದ್ದಾರೆ. ಬಹು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಕಂಗುವಾ ಸಿನಿಮಾದಲ್ಲಿ ಸೂರ್ಯ ಅವರು ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಣ್ಣನ ಮುಂದೆ ಕಾರ್ತಿ ವಿಲನ್ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ.

ಕಾರ್ತಿ ಸಹಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ಆಸಕ್ತಿಕರ ವಿಷಯವನ್ನು ಚಿತ್ರತಂಡವು ಅಧಿಕೃತವಾಗಿ ತಿಳಿಸಿದೆ. ಅಲ್ಲದೇ ಮತ್ತೊಂದು ಸಿನಿಮಾದಲ್ಲಿ ಕಾರ್ತಿ ಎದುರಲ್ಲಿ ಸೂರ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಂದು ಹೇಳಲಾಗಿದ್ದು, ಈ ವಿಷಯ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ.

Vijay Sethupathi: ಮಹಾರಾಜ ಸಿನಿಮಾ ಪಾತ್ರಕ್ಕೆ ವಿಜಯ್ ಸೇತುಪತಿ ಸಂಭಾವನೆ ಬೇಡ ಎಂದಿದ್ದೇಕೆ? ಶಾಕಿಂಗ್

Leave a Comment