Nethra Jadhav: ಶಾರ್ವರಿ ಪಾತ್ರದಿಂದ ಹೊರ ಬಂದು ಯಕ್ಷಗಾನದಲ್ಲಿ ಮಿಂಚಿದ ಶ್ರೀರಸ್ತು ಶುಭಮಸ್ತು ನಟಿ

Written by Soma Shekar

Published on:

---Join Our Channel---

Nethra Jadhav: ಶ್ರೀರಸ್ತು ಶುಭಮಸ್ತು ಸೀರಿಯಲ್ ನ (Srirastu Shubhamastu) ಶಾರ್ವರಿ ಪಾತ್ರ ಅಂದರೆ ಪ್ರೇಕ್ಷಕರ ಮನಸ್ಸಿನಲ್ಲಿ ಸೀರಿಯಲ್ ನ ವಿಲನ್ ನೆನಪಾಗುತ್ತಾರೆ. ಇತ್ತೀಚಿಗಷ್ಟೇ ವೀಕ್ಷಕರಿಗೆ ಶಾಕ್ ಅನ್ನೋ ಹಾಗೆ ಶಾರ್ವರಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ನೇತ್ರ ಜಾಧವ್ (Nethra Jadhav) ಅವರ ಜಾಗಕ್ಕೆ ಮತ್ತೊಬ್ಬ ನಟಿ ಸ್ವಪ್ನಾ ದೀಕ್ಷಿತ್ ಅವರ ಎಂಟ್ರಿಯಾಗಿದೆ. ಈ ಬದಲಾವಣೆ ನೋಡಿದ ಪ್ರೇಕ್ಷಕರು ಶಾಕ್ ಆಗಿದ್ದು ಮಾತ್ರವೇ ಅಲ್ಲದೇ ನೇತ್ರ ಅವರೇ ಆ ಪಾತ್ರಕ್ಕೆ ಸೂಕ್ತವಾಗಿದ್ದರು ಎಂದು ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಶಾರ್ವರಿ (Sharwari) ಪಾತ್ರದಲ್ಲಿ ಆರಂಭದಿಂದಲೂ ಸಹಾ ನೇತ್ರ ಅವರನ್ನು ನೋಡಿದ್ದ ಪ್ರೇಕ್ಷಕರು ಈಗ ಹೊಸ ಎಂಟ್ರಿಯನ್ನು ಒಪ್ಪಿಕೊಳ್ಳಲು ಒಂದಷ್ಟು ಸಮಯ ಹಿಡಿಯುವುದು ಸಹಜ. ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಶಾರ್ವರಿ ಪಾತ್ರದಲ್ಲಿ ನೇತ್ರ ಅವರು ಕಣ್ಣಲ್ಲೇ ಅದ್ಭುತವಾಗಿ ನಟಿಸುತ್ತಿದ್ದರು, ಮುಗುಳ್ನಗೆಯಲ್ಲೇ ಕುತಂತ್ರ ಹೆಣೆಯುತ್ತಾ ವಿಭಿನ್ನವಾದ ವಿಲನ್ ಆಗಿ ಮಿಂಚಿದ್ದರು ಎಂದು ಮೆಚ್ಚುಗೆ ನೀಡಿದ್ದರು.

ಈಗ ನಟಿಯು ಸೀರಿಯಲ್ ನಿಂದ ಹೊರ ಬಂದಿರುವುದರ ಕಾರಣ ಇನ್ನೂ ಗೊತ್ತಿಲ್ಲವಾದರೂ, ಇದರ ಬೆನ್ನಲ್ಲೇ ನಟಿ ತೆಲಂಗಾಣದಲ್ಲಿ ಅಮ್ಮಂದಿರ ದಿನ ಪ್ರಯುಕ್ತ ಯಕ್ಷಗಾನ ಕಲಾವಿದೆಯಾಗಿ ಕಾಣಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಫೋಟೋಗಳನ್ನು ಶೇರ್ ಮಾಡಿಕೊಂಡು, ಕರ್ನಾಟಕದ ಸಾಂಸ್ಕೃತಿಕ ಪ್ರದರ್ಶನವಾದ ಯಕ್ಷಗಾನವನ್ನು ತೆಲಂಗಾಣದಲ್ಲಿ ತಾಯಂದಿರ ವಿಶೇಷ ದಿನದಿಂದು ಪ್ರದರ್ಶಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ಮೇಲೆ ನಟಿ ಒಬ್ಬ ಯಕ್ಷಗಾನ ಕಲಾವಿದೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಾಗಿದೆ‌‌. ಇನ್ನು ನಟಿ ತೆಲುಗು ಸೀರಿಯಲ್ ನಲ್ಲಿ ಸಹಾ ನಟಿಸುತ್ತಿದ್ದಾರೆ. ನಟಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ ವೀಡಿಯೋವೊಂದರಲ್ಲಿ ತೆಲುಗು ಸೀರಿಯಲ್ ನ ದೃಶ್ಯವೊಂದನ್ನೂ ಸಹಾ ಶೇರ್ ಮಾಡಿಕೊಂಡಿದ್ದಾರೆ. ಕಿರುತೆರೆ ಪ್ರೇಕ್ಷಕರು ಮಾತ್ರ ಶಾರ್ವರಿ ಪಾತ್ರದಲ್ಲಿ ನೇತ್ರ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Leave a Comment