Srirastu Shubhamastu: ತುಳಸಿಗೆ ಭಯ, ಮುಜುಗರ ಆದ್ರೆ ಪ್ರೇಕ್ಷಕರಿಗೆ ಅಸಮಾಧಾನ, ಇದೆಲ್ಲಾ ಬೇಕಾ, ಅಸಹ್ಯ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Srirastu Shubhamastu: ಶ್ರೀರಸ್ತು ಶುಭಮಸ್ತು (Srirastu Shubhamastu) ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಾಂಧವ್ಯಗಳ ಕುರಿತಾಗಿ ಹೊಸದೊಂದು ಕಥೆಯನ್ನು ಹೇಳಲು ಹೊರಟ್ಟಿದ್ದ ಈ ಸೀರಿಯಲ್ ಜನರ ಮನಸ್ಸನ್ನು ಗೆದ್ದಿತ್ತು. ಆದರೆ ಇತ್ತೀಚಿನ ಎಪಿಸೋಡ್ ಗಳಲ್ಲಿನ ಒಂದು ಟ್ವಿಸ್ಟ್ ಈಗ ಪ್ರೇಕ್ಷಕರಿಗೆ ತೀವ್ರ ಅಸಮಾಧಾನ ಉಂಟು ಮಾಡಿರೋ ಹಾಗೆ ಕಂಡಿದೆ.

ಹೌದು, ಸೀರಿಯಲ್ ನಲ್ಲಿ ನಾಯಕಿ ತುಳಸಿ (Tulasi) ಗರ್ಭಿಣಿ ಅಂತ ಕೊಟ್ಟಿರೋ ಟ್ವಿಸ್ಟ್ ನೋಡಿ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾಗಿತ್ತಾ ಅಂತ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಮಕ್ಕಳ ಜೊತೆ ಕೂತು ಸೀರಿಯಲ್ ನೋಡೋಕೆ ಮುಜುಗರ ಅನಿಸ್ತಿದೆ ಎಂದು ಕೆಲವರು ಹೇಳಿದ್ದಾರೆ.

ಒಂದು ಕಡೆ ಮಾಧವನ (Madhava) ಹಿರಿ ಮಗ ಮತ್ತು ಸೊಸೆ ಅವಿನಾಶ್ ಮತ್ತು ಪೂರ್ಣಿ ಮಕ್ಕಳಿಲ್ಲ ಅಂತ ಕೊರಗೋವಾಗ ತುಳಸಿ ಮತ್ತು ಮಾಧವ ಅಪ್ಪ ಅಮ್ಮ ಆಗ್ತಾರೆ ಅನ್ನೋದು ಯಾಕೋ ಕೇಳೋಕೆ, ನೋಡೋಕೆ ಸಹಾ ಕಷ್ಟ ಆಗ್ತಿದೆ, ಒಳ್ಳೆ ಕಥೆಯ ಸೀರಿಯಲ್ ಈ ಒಂದು ಟ್ವಿಸ್ಟ್ ನಿಂದ ಹಾಳಾಗ್ತಿದೆ ಎಂದು ಅನೇಕರು ಬೇಸರ ಹೊರ ಹಾಕ್ತಾ ಇದ್ದಾರೆ.‌

ಈಗ ತುಳಸಿ ಸಹಾ ಮಾಧವ್ ಗೆ ತಾನು ಗರ್ಭಿಣಿ ಅಂತ ಹೇಳೋಕೂ ಮುಜುಗರ ಪಡೋ ಹಾಗೆ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರವಾಗಿ ನೆಟ್ಟಿಗರಿಂದ ಬಹುತೇಕ ನೆಗೆಟಿವ್ ಕಾಮೆಂಟ್ ಗಳೇ ಹರಿದು ಬರುತ್ತಿದ್ದು ಕಥೆಯಲ್ಲಿ ಏನಾದರೂ ಬದಲಾವಣೆ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Lakshmi Nivasa: ಕೊನೆಗೂ ಭಾವನಾ ನೋವಿಗೆ ಉತ್ತರ ಕೊಡಲು ಬಂದೇ ಬಿಟ್ರು ಸಿದ್ಧೇಗೌಡ್ರು; ಕಥೆಯಲ್ಲಿ ಹೊಸ ಟ್ವಿಸ್ಟ್

Leave a Comment