Sreeleela: ವಿಜಯ್ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಔಟ್; ಶ್ರೀಲೀಲಾ ಜಾಗಕ್ಕೆ ಬೇರೆ ನಟಿ ಎಂಟ್ರಿ

Written by Soma Shekar

Published on:

---Join Our Channel---

Sreeleela : ಕಿಸ್ ಬೆಡಗಿ ಶ್ರೀಲೀಲಾ (Sreeleela) ಟಾಲಿವುಡ್ ನಲ್ಲಿ (Tollywood) ಬ್ಯುಸಿಯಿದ್ದಾರೆ ಅನ್ನೋದು ಗೊತ್ತಿರೋ ವಿಚಾರ. ಕಳೆದ ವರ್ಷ ಶ್ರೀಲೀಲಾ ನಟಿಸಿರೋ ಆರು ಸಿನಿಮಾಗಳು ತೆರೆ ಕಂಡಿದ್ದಾವೆ. ಆದ್ರೆ ಅದರಲ್ಲಿ ಹಿಟ್ ಆಗಿದ್ದು ಮಾತ್ರ ಎರಡೇ ಸಿನಿಮಾ. ಧಮಾಕಾ ಮತ್ತು ಭಗವಂತ್ ಕೇಸರಿ ಸಿನಿಮಾಗಳು. ಇನ್ನುಳಿದವು ದೊಡ್ಡ ಮಟ್ಟದಲ್ಲಿ ಸಕ್ಸಸ್ ಅನ್ನ ಪಡೆಯಲಿಲ್ಲ ಅನ್ನೋದು ವಾಸ್ತವ. ಆದ್ರೆ ನಟಿ ಶ್ರೀಲೀಲಾ ಅದೃಷ್ಟ ಏನಂದ್ರೆ ಆರಂಭದಲ್ಲೇ ನಟಿಗೆ ಸ್ಟಾರ್ ನಟರುಗಳ ಜೊತೆಗೆ ತೆರೆ ಹಂಚಿಕೊಳ್ಳೋ ಸಾಲು ಸಾಲು ಅವಕಾಶ ಗಳು ದೊರೆತಿವೆ.

ಕಳೆದೊಂದು ವರ್ಷದಿಂದ ಒಂದರ ನಂತರ ಮತ್ತೊಂದು ಅನ್ನೊ ಹಾಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದ ಶ್ರೀಲೀಲಾ ಈ ವರ್ಷ ಸ್ವಲ್ಪ ಸ್ಲೋ ಡೌನ್ ಆಗಿದ್ದಾರೆ ಅನ್ನೋದಂತೂ ನಿಜವಾಗಿದೆ. ಸದ್ಯಕ್ಕೆ ಶ್ರೀಲೀಲಾ ಕೈಯಲ್ಲಿ ಇರೋದು ಒಂದು ಸಿನಿಮಾ ಮಾತ್ರ. ಅದು ಪವನ್ ಕಲ್ಯಾಣ್ ಜೊತೆಯಲ್ಲಿ ನಟಿಸ್ತಾ ಇರೋ ಉಸ್ತಾದ್ ಭಗತ್ ಸಿಂಗ್ (Ustad Bhagath Singh). ಅದು ಬಿಟ್ರೆ ಹೊಸದು ಅಂತ ಯಾವುದೇ ಸಿನಿಮಾದ ಘೋಷಣೆ ಖಂಡಿತ ಆಗಿಲ್ಲ.

ಹಾಗಾದ್ರೆ ವಿಜಯ ದೇವರಕೊಂಡ (Vijay Devarakonda) ಜೊತೆಗಿನ ಸಿನಿಮಾ ಏನಾಯ್ತು?? ಅನ್ನೋ ಪ್ರಶ್ನೆ ಎಲ್ಲರಿಗೂ ಮೂಡುತ್ತೆ. ಹೌದು ವಿಡಿ 12 ಎನ್ನುವ ವರ್ಕಿಂಗ್ ಟೈಟಲ್ ಅಡಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಹೊಸ ಸಿನಿಮಾದ ಮುಹೂರ್ತ ನಡೆದಿತ್ತು. ಈ ಸಿನಿಮಾದಲ್ಲಿ ವಿಜಯ ದೇವರಕೊಂಡ ಜೊತೆಗೆ ಶ್ರೀಲೀಲಾ ನಾಯಕಿಯಾಗಿದ್ದರು. ನಟಿಯು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲೂ ಸಹಾ ಭಾಗಿಯಾಗಿದ್ದರು.

ಆದರೆ ಈಗ ಬಂದಿರುವ ಹೊಸ ಅಪ್ಡೇಟ್ ಗಳ ಪ್ರಕಾರ ಶ್ರೀಲೀಲಾ ಈ ಸಿನಿಮಾದಿಂದ ಹೊರ ಬಂದಿದ್ದು, ಅವರ ಜಾಗಕ್ಕೆ ಮಲೆಯಾಳಂ ಸಿನಿಮಾ ಪ್ರೇಮುಲು ಖ್ಯಾತಿಯ ನಟಿ ಮಮಿತಾ ಬೈಜು (Mamita Baiju) ಎಂಟ್ರಿ ಕೊಡ್ತಾರೆ ಅನ್ನೋ ವಿಷಯ ಹರಿದಾಡಿದೆ. ಶ್ರೀಲೀಲಾ ಈ ಸಿನಿಮಾದಿಂದ ಹೊರಗಡೆ ಬಂದಿರುವುದಕ್ಕೆ ಕಾರಣ, ವಿಡಿ 12 ಸಿನಿಮಾದ ಕೆಲಸಗಳು ನಿರೀಕ್ಷಿತ ಸಮಯದಲ್ಲಿ ನಡೆಯದೇ ತಡವಾಗುತ್ತಿರುವುದಿಂದ ಶ್ರೀಲೀಲಾ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

Leave a Comment