Shruti Haasan: ಅವನಿದ್ರೆ ಸಾಕು ಅಂತಿದ್ದ ನಟಿಯ ಸಂಬಂಧ ಈಗ ಸೂತ್ರ ಹರಿದ ಗಾಳಿಪಟ; ಶೃತಿ ಹಾಸನ್ ಬದುಕಲ್ಲಿ ಬಿರುಗಾಳಿ

Written by Soma Shekar

Published on:

---Join Our Channel---

Shruti Haasan Break up : ದಕ್ಷಿಣದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಹಿರಿಯ ನಟ ಕಮಲ ಹಾಸನ್ ಪುತ್ರಿ ಶೃತಿ ಹಾಸನ್ (Shruti Haasan break up) ಸದ್ಯಕ್ಕಂತೂ ಭರ್ಜರಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ (Prabhas) ಜೊತೆಗೆ ನಟಿಸಿದ ಸಲಾರ್ (Salaar) ಸಿನಿಮಾದ ಯಶಸ್ಸಿನ ನಂತರ ಹೊಸ ಹೊಸ ಆಫರ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ನಟಿ. ಶೃತಿ ಹಾಸನ್ ಸಿನಿಮಾ ವಿಚಾರಗಳಿಗೆ ಮಾತ್ರವೇ ಅಲ್ಲದೇ ತಮ್ಮ ಖಾಸಗೀ ಜೀವನದ ವಿಚಾರವಾಗಿಯೂ ಸುದ್ದಿಗಳಲ್ಲಿ ಇರುತ್ತಾರೆ. ಅವರ ಪ್ರೇಮ, ಲೀವ್ ಇನ್ ರಿಲೇಶನ್ ಶಿಪ್ ವಿಚಾರ ಆಗಾಗ ಮುನ್ನೆಲೆಗೆ ಬರುತ್ತದೆ. ಈಗ ಮತ್ತೊಮ್ಮೆ ನಟಿಯ ಖಾಸಗಿ ಜೀವನದ ವಿಚಾರವೇ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

ನಟಿ ಶೃತಿ ಹಾಸನ್ ಬದುಕಲ್ಲಿ ಮೊದಲು ಇದ್ದವರು ಮೈಕಲ್ ಕರ್ನಾಲೆ (Michale Karnale). ಅವರ ಜೊತೆಗೆ ಬ್ರೇಕಪ್ ಆದ ನಂತರ ನಟಿಯ ಜೀವನಕ್ಕೆ ಎಂಟ್ರಿ ಕೊಟ್ಟವರು ಟ್ಯಾಟೂ ಕಲಾವಿದನಾಗಿರುವ ಶಂತನು (Shantanu Hazarika). ಮುಂಬೈನಲ್ಲಿ ಒಂದೇ ಅಪಾರ್ಟ್ಮೆಂಟ್ ನಲ್ಲಿ ಜೊತೆಯಾಗಿದ್ದ ಶೃತಿ ಮತ್ತು ಶಂತನು ಆಗಾಗ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಇಬ್ಬರೂ ಲಿವಿನ್ ರಿಲೇಶನ್ ಶಿಪ್ ನಲ್ಲಿ ಇರುವ ವಿಚಾರ ತಿಳಿದೇ ಇತ್ತು.

ಆದರೆ ಈಗ ಶೃತಿ ಹಾಸನ್ ಶಂತನು ಜೊತೆಗಿನ ತಮ್ಮ ಪ್ರೇಮ ಸಂಬಂಧಕ್ಕೆ ಪೂರ್ಣ ವಿರಾಮವನ್ನು ಹಾಕಿದ್ದಾರೆ. ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರವೊಂದು ಸಿಕ್ಕಾಪಟ್ಟೆ ವೈರಲ್ ಸುದ್ದಿಯಾಗಿದೆ. ಶೃತಿ ಮತ್ತು ಶಂತನು ಬ್ರೇಕಪ್ ಮಾಡಿಕೊಂಡಿದ್ದಾರೆನ್ನುವುದಕ್ಕೆ ಸಾಕ್ಷಿ ಎನ್ನುವ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರು ಮತ್ತೊಬ್ಬರನ್ನು ಅನ್ ಫಾಲೋ ಮಾಡಿದ್ದಾರೆ. ವಿಷಯ ಇಷ್ಟಕ್ಕೇ ಮುಗಿದಿದ್ದರೆ ಒಂದಷ್ಟು ಅನುಮಾನಗಳಿಗೆ ಕಾರಣವಾಗಬಹುದಿತ್ತು.

ಆದರೆ ಬ್ರೇಕಪ್ ಆಗಿದೆ ಅನ್ನೋದಕ್ಕೆ ಸ್ಪಷ್ಟನೆ ನೀಡುವಂತೆ ಶೃತಿ ಹಾಸನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಹಿಂದೆ ಹಂಚಿಕೊಂಡಿದ್ದ ಶಂತನು ಹಜಾರಿಕಾ ಜೊತೆಗಿರುವ ಎಲ್ಲಾ ಫೋಟೋಗಳನ್ನು ಸಹಾ ಡಿಲೀಟ್ ಮಾಡಿದ್ದಾರೆ. ಸದಾ ಖುಷಿಯಿಂದ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಶೃತಿ ಹಾಸನ್ ಈಗ ಬಾಯ್ ಫ್ರೆಂಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿರೋದ್ಯಾಕೆ ಅನ್ನೋ ಕಾರಣ ಮಾತ್ರ ಇನ್ನೂ ಹೊರಗೆ ಬಂದಿಲ್ಲ.

ಶಂತನು ಹಜಾರಿಕಾ ಮತ್ತು ಶೃತಿ ಹಾಸನ್ ಜೊತೆಯಾಗಿ ಇದ್ದ ಹಿನ್ನೆಲೆಯಲ್ಲಿ ಈಗಾಗಲೇ ಅವರ ಮದುವೆ ನಡೆದಿದೆ ಎನ್ನುವ ಒಂದಷ್ಟು ಸುದ್ದಿಗಳು ಸಹಾ ಹರಿದಾಡಿದ್ದವು. ಹರಿಡಿದ್ದ ಸುದ್ದಿಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದ ಶೃತಿ ಹಾಸನ್ ಅವರು ಮದುವೆ ವಿಚಾರವಗನು ಮುಚ್ಚಿಡುವ ಅವಶ್ಯಕತೆ ತನಗಿಲ್ಲ ಎನ್ನುವ ಮಾತನ್ನ ಹೇಳಿದ್ದರು. ಶಂತನು ಜೊತೆ ಖುಷಿಯಾಗಿದ್ದೇನೆ, ಮದುವೆಗಿಂತ ಇದೇ ಸಂಬಂಧವೇ ಚೆನ್ನಾಗಿದೆ ಎಂದು ಅವರು ಹೇಳಿದ್ದರು.

Leave a Comment