Kajal Aggarwal: ಕೇವಲ ಜೂ. ಎನ್ ಟಿ ಆರ್ ಗಾಗಿ ಆ ಕೆಲಸ ಮಾಡಿದ್ದೆ; ನಟಿ ಕಾಜಲ್ ಅಗರ್ವಾಲ್ ಬಾಯ್ಬಿಟ್ಟ ಸತ್ಯ

Written by Soma Shekar

Published on:

---Join Our Channel---

Kajal Aggarwal: ತೆಲುಗು ಸಿನಿಮಾ ರಂಗದಲ್ಲಿ (Tollywood) ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿ ಕಾಜಲ್ ಅಗರವಾಲ್ (Kajal Aggarwal) ಪ್ರಸ್ತುತ ದಿನಗಳಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರೂ ಮೊದಲಿನಷ್ಟು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬಹಳ ದಿನಗಳ ನಂತರ ನಟಿಯು ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದು ಸಾಕಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು, ಇತ್ತೀಚಿಗೆ ನಟಿ ತೆಲುಗಿನ ಹಿರಿಯ ಹಾಸ್ಯ ನಟ ಆಲಿ (Comedian Ali) ಅವರು ನಡೆಸಿಕೊಡುವ ಸೆಲೆಬ್ರಿಟಿ ಟಾಕ್ ಶೋ ಆಲಿತೋ ಸರದಾಗ ಸೀಸನ್ 2ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.

ಕಾಜಲ್ ಅಗರ್ವಾಲ್ ಅವರು ನಿರ್ದೇಶಕ ತೇಜ ಅವರ ಲಕ್ಷ್ಮೀ ಕಲ್ಯಾಣಂ (Lakshmi Kalyanam) ಸಿನಿಮಾದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಅಡಿಯನ್ನು ಇಟ್ಟರು. ಆದರೆ ಈ ನಟಿಗೆ ದೊಡ್ಡ ಹೆಸರಿನ ತಂದು ಕೊಟ್ಟಿದ್ದು ಎಸ್ ಎಸ್ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ನಾಯಕನಾಗಿದ್ದ ಮಗಧೀರ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆ ಸಿನಿಮಾದ ದೊಡ್ಡ ಯಶಸ್ಸಿನ ನಂತರ ನಟಿ ಕಾಜಲ್ ಅಗರವಾಲ್ ಮತ್ತೆ ಹಿಂತಿರುಗಿ ನೋಡದಷ್ಟು ಸಿನಿಮಾರಂಗದಲ್ಲಿ ಬ್ಯುಸಿಯಾಗಿ ಬಿಟ್ಟರು.

ತೆಲುಗು ಮಾತ್ರವೇ ಅಲ್ಲದೇ ತಮಿಳಿನಲ್ಲೂ ಈ ನಟಿಯು ಅಲ್ಲಿನ ಸ್ಟಾರ್ ಗಳ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ತೆಲುಗು, ತಮಿಳಿನ ಯುವ ಸ್ಟಾರ್ ನಟರಷ್ಟೇ ಅಲ್ಲದೇ ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣರಂತಹ ಹಿರಿಯ ನಟರ ಜೊತೆಗೂ ನಾಯಕಿಯಾಗಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಈಗ ಕಮಲಹಾಸನ್ ಅವರ ಇಂಡಿಯನ್ 2 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವೃತ್ತಿ ಜೀವನದಲ್ಲಿ (Career) ಸ್ಟಾರ್ ನಟಿಯಾಗಿ (Star Heroin) ಇರುವಾಗಲೇ ನಟಿ ಒಂದು ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆಯನ್ನು ಹಾಕಿದ್ದರು. ಅವರು ವೃತ್ತಿ ಜೀವನದಲ್ಲಿ ಅದೊಂದೇ ಸಿನಿಮಾದಲ್ಲಿ ಐಟಂ ಹಾಡಿಗೆ ನೃತ್ಯವನ್ನು ಮಾಡಿರುವುದು. ಅಲ್ಲದೇ ಆ ಸಿನಿಮಾದ ನಂತರ ಇನ್ನು ಮುಂದೆ ತಾನು ಯಾವುದೇ ಸಿನಿಮಾದಲ್ಲೂ ಐಟಂ ಹಾಡುಗಳಿಗೆ ಹೆಜ್ಜೆಯನ್ನು ಹಾಕುವುದಿಲ್ಲ ಎನ್ನುವ ಮಾತನ್ನು ಸಹಾ ನಟಿ ಹೇಳಿದ್ದರು.

ಆ ಒಂದು ಸಿನಿಮಾದಲ್ಲಿ ನಟಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಕಾರಣ ಏನು ಎನ್ನುವ ಪ್ರಶ್ನೆಯನ್ನು ಟಾಕದ ಶೋನಲ್ಲಿ ಆಲಿ ಕೇಳಿದ್ದಾರೆ. ನಟ ಆಲಿಯವರು ಸಂದರ್ಶನ ಮಾಡುವ ವೇಳೆಯಲ್ಲಿ, ಜೂನಿಯರ್ ಎನ್ಟಿಆರ್ (Jr NTR) ನಾಯಕನಾಗಿರುವ ಜನತಾ ಬಜಾರ್ ಸಿನಿಮಾದಲ್ಲಿ ನೀವು ಐಟಂ ಹಾಡಿಗೆ ಹೆಜ್ಜೆಯನ್ನ ಹಾಕೋದಕ್ಕೆ ಯಾರು ಕಾರಣ? ನಟ, ನಿರ್ಮಾಪಕ ಅಥವಾ ನಿರ್ದೇಶಕ ಯಾರಿಗಾಗಿ ನೀವು ಆ ಹಾಡನ್ನು ಒಪ್ಪಿಕೊಂಡಿರಿ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರವನ್ನು ಕೊಟ್ಟ ಕಾಜಲ್ ಅಗರ್ವಾಲ್, ಕೇವಲ ಎನ್ಟಿಆರ್ ಕಾರಣದಿಂದ ಆ ಹಾಡಿನಲ್ಲಿ ಅವರೊಂದಿಗೆ ಹೆಜ್ಜೆ ಹಾಕುವುದಕ್ಕೆ ಒಪ್ಪಿಕೊಂಡೆ ಎನ್ನುವ ಮಾತನ್ನು ಹೇಳಿದ್ದಾರೆ. ಕಾಜಲ್ ಮತ್ತು ಎನ್ ಟಿ ಆರ್ ಬೃಂದಾವನಂ, ಬಾದ್ ಶಾ ಮತ್ತು ಟೆಂಪರ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದು ಈ ಮೂರು ಚಿತ್ರಗಳು ಯಶಸ್ವಿ ಸಿನಿಮಾಗಳ ಕಾಲಿಗೆ ಸೇರಿವೆ. ಎನ್ಟಿಆರ್ ಜೊತೆಗಿನ ಸ್ನೇಹ ಮತ್ತು ಆತ್ಮೀಯತೆಯ ಕಾರಣಕ್ಕಾಗಿ ನಟಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.

Leave a Comment