SeethaRama: ಡಾಕ್ಟರ್ ಹೆಸರು ಕೇಳಿ ಬೆಚ್ಚಿ ಬಿದ್ದ ಸೀತಾ, ಹರಿದ ರಕ್ತ; ಸಿಹಿಯ ಗುಟ್ಟು ರಟ್ಟಾಗೋ ಸಮಯ ಬಂದಾಯ್ತು

Written by Soma Shekar

Published on:

---Join Our Channel---

SeethaRama: ಸೀತಾ ರಾಮ (SeethaRama) ಸೀರಿಯಲ್ ನಲ್ಲಿ ಸೀತಾ ಮತ್ತು ಸಿಹಿಯ ನಡುವಿನ ಗುಟ್ಟು ಏನೆಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಸೀತಾ ರಾಮ್ ಹತ್ತಿರ ಹೇಳುವ ಪ್ರಯತ್ನ ಮಾಡಿದರೂ ರಾಮ್ ಅದನ್ನ ಕೇಳಿಸಿಕೊಂಡಿಲ್ಲ.‌ ಸಿಹಿಯ ಅಪ್ಪ ಯಾರೆನ್ನುವುದು ಇನ್ನೂ ಗೊತ್ತಾಗಿಲ್ಲ.‌ ಅಲ್ಲದೇ ಜ್ಯೋತಿಷಿಯು ಸಿಹಿಯ ಜಾತಕ ನೋಡುವಾಗ ಸೀತಾ ಗಲಿಬಿಲಿಗೊಂಡಿದ್ದು ಸಿಹಿ ಸೀತಾಳ ಮಗಳಲ್ಲ ಎನ್ನುವುದನ್ನ ಸಾಬೀತು ಮಾಡಿದೆ. ಸಿಹಿಯ ಗುಟ್ಟು ಹೊರ ಬರುವ ಸಮಯ ಹತ್ತಿರವಾದ ಹಾಗಿದೆ. ‌

ಭಾರ್ಗವಿ (Bhargavi) ಸಿಹಿಯ (Sihi) ಅಪ್ಪ ಯಾರೆಂದು ತಿಳಿಯುವ ಕೆಲಸವನ್ನು ರುದ್ರಪ್ರತಾಪ್ ನಿಗೆ ನೀಡಿದ್ದಾಳೆ. ಅಲ್ಲದೇ ರಾಮ್ ಮತ್ತು ಅಶೋಕನ ವಿರುದ್ದದ ರುದ್ರಪ್ರತಾಪ್ ನ ಕಾರ್ಯದಲ್ಲಿ ತಾನು ಅವನಿಗೆ ಸಾಥ್ ನೀಡೋದಾಗಿ ಮಾತನ್ನ ಕೊಟ್ಟಿದ್ದಾಳೆ ಭಾರ್ಗವಿ. ಮತ್ತೊಂದು ಕಡೆ ಚಾಂದಿನಿಗೆ ಕೂಡಾ ಭಾರ್ಗವಿ ಅದೇ ಕೆಲಸವನ್ನ ನೀಡಿದ್ದು, ಸೀತಾ ರಹಸ್ಯ ತಿಳ್ಕೊಳ್ಳೋ ಪಣ ತೊಟ್ಟಿದ್ದಾಳೆ.

ಇವೆಲ್ಲವುಗಳ ಮಧ್ಯೆ ಗರ್ಭಿಣಿಯಾಗೋ ಆಸೆ ಹೊಂದಿರುವ ಪ್ರಿಯಾ, ಸೀತಾಳ ಮನೆಗೆ ಬಂದಿದ್ದು, ಅಡುಗೆ ಮನೆಯಲ್ಲಿ ಇಬ್ಬರೂ ಮಾತನಾಡೋವಾಗ, ಹಿಂದೆ ಗರ್ಭಿಣಿ ಅನ್ಕೊಂಡು ಅದು ನಿಜ ಅಲ್ಲ ಪ್ರಿಯಾಗೆ ಗೊತ್ತಾಗಿದ್ದ ವಿಚಾರವನ್ನ ಹೇಳ್ತಾ, ಈ ಸಲ ಹಾಗೆ ಆಗೋದಿಲ್ಲ ಅನ್ನೋದನ್ನ ಹೇಳ್ತಿರ್ತಾಳೆ. ಅಲ್ಲದೇ ನಾನು ಗರ್ಭಿಣಿ ಎಂದೇ ಎನ್ನಿಸುತ್ತಿದೆ ಅಂತಾನೂ ಹೇಳ್ತಾಳೆ.

ಈ ಬಾರಿ ಇದು ಕನ್​ಫರ್ಮ್​. ಅದರೂ ಆಸ್ಪತ್ರೆಯಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು, ಎಲ್ಲಿಗೆ ಹೋಗಬೇಕು ಅಂತ ಕೇಳುವಾಗ ಅಲ್ಲಿಗೆ ಬರುವ ಭಾರ್ಗವಿಗ ಗಂಡ ಡಾ.ಅನಂತಲಕ್ಷ್ಮಿ ಅವರ ಬಳಿಗೆ ಹೋಗಿ. ತುಂಬಾ ಚೆನ್ನಾಗಿ ಟ್ರೀಟ್​ ಮಾಡ್ತಾರೆ ಅಂತಾನೆ. ಡಾಕ್ಟರ್ ಹೆಸರು ಕೇಳಿದ ಕೂಡಲೇ ತರಕಾರಿ ಹಚ್ತಿದ್ದ ಸೀತಾ ಕೈ ಕೊಯ್ದುಕೊಳ್ಳುತ್ತಾಳೆ! ಅಲ್ಲಿಗೆ ಸೀತಾಳ ಮುಚ್ಚಿಟ್ಟ ಸತ್ಯ ಬಯಲಾಗೋ ಹೊತ್ತು ಹತ್ತಿರ ಅಗ್ತಿದೆ ಅನ್ನೋ ಸುಳಿವು ಸಿಕ್ಕಿದೆ.‌

Vinesh Phogat: ನಿವೃತ್ತಿ ನಿರ್ಧಾರದಿಂದ ವಿನೇಶ್ ಯೂಟರ್ನ್ ; 2032 ರವರೆಗೆ ಆಡೋದನ್ನ ನೋಡಬಹುದು ಎಂದ ವಿನೇಶ್

Leave a Comment