SeethaRama Serial : ಸೀತಾರಾಮ ಸೀರಿಯಲ್ (SeethaRama Serial) ಅಂದ್ರೆ ಅಲ್ಲಿ ಎಲ್ಲರ ಗಮನ ಸೆಳೆಯೋ ಪಾತ್ರ ಅಂದ್ರೆ ಅದು ಸಿಹಿಯ ಪಾತ್ರ. ಸೀತಾರಾಮ ಜೀವನದಲ್ಲಿ ಸಂಗಾತಿಗಳಾಗೋದಕ್ಕೆ ಮುಖ್ಯ ಕಾರಣ ಸಹಾ ಸಿಹಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದರೆ ಈಗ ಸಿಹಿ ಸೀತಾರಾಮ್ ನಿಂದ ದೂರ ಅಂದ್ರೆ ಬೋರ್ಡಿಂಗ್ ಸ್ಕೂಲ್ ಗೆ ಹೋಗೋದಕ್ಕೆ ಸಿದ್ಧವಾಗಿದ್ದಾಳೆ. ಮನಸ್ಸಲ್ಲಿ ನೋವಿದ್ರು ಅಪ್ಪ ಅಮ್ಮ ಖುಷಿಯಾಗಿರಬೇಕು ಅನ್ನೋದು ಸಿಹಿಯ ಆಲೋಚನೆ.
ರಾಮ್ ಗೆ ಸೀತಾಗೆ ಇಷ್ಟ ಇಲ್ಲದೇ ಹೋದರೂ ಸೀತಾ ರಾಮ್ ಗೆ ಹತ್ತಿರ ಆಗಬೇಕನ್ನೋ ತಾತಾ ಸೂರ್ಯಪ್ರಕಾಶ್ ಆಸೆಯನ್ನ ನಿಜ ಮಾಡೋಕೆ ಸಿಹಿ ಬೋರ್ಡಿಂಗ್ ಸ್ಕೂಲ್ ಗೆ ಹೊರಟಿದ್ದಾಳೆ. ಆದರೆ ಕಥೆಯಲ್ಲಿನ ಈ ಟ್ವಿಸ್ಟ್ ಪ್ರೇಕ್ಷಕರಿಗೆ ಸಾಕಷ್ಟು ಅನುಮಾನ ಮೂಡಿಸಿದೆ. ಸಿಹಿ ಪಾತ್ರಕ್ಕೆ ಬ್ರೇಕ್ ಕೊಡ್ತಾ ಇದ್ದಾರಾ? ಇನ್ಮುಂದೆ ಸಿಹಿ ಪಾತ್ರ ಕಾಣಿಸೋದಿಲ್ವಾ ಅನ್ನೋ ಒಂದಷ್ಟು ಪ್ರಶ್ನೆಗಳು ವೀಕ್ಷಕರನ್ನ ಕಾಡಿದೆ.
ಸಿಹಿ ಪಾತ್ರಧಾರಿ ರೀತು ಸಿಂಗ್ ಗೆ ಈಗ ಆರು ವರ್ಷ. ಸೀರಿಯಲ್ ಜೊತೆಗೆ ಡಿಕೆಡಿಯಲ್ಲೂ ಸ್ಪರ್ಧಿಯಾಗಿದ್ದಾಳೆ. ಆದ್ದರಿಂದ ಸೀರಿಯಲ್, ರಿಯಾಲಿಟಿ ಶೋ ಮತ್ತು ಶಾಲೆ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಸೀರಿಯಲ್ ನಲ್ಲಿ ಸಿಹಿಯ ಪಾತ್ರಕ್ಕೆ ಎಪಿಸೋಡ್ ಗಳ ಸಂಖ್ಯೆ ಕಡಿಮೆ ಮಾಡುತ್ತಿರಬಹುದೆ ಎನ್ನುವ ಅನುಮಾನ ಶುರುವಾಗಿದೆ.
ಆದರೆ ಈ ವಿಷಯವಾಗಿ ವಾಹಿನಿಯಾಗಲೀ ಅಥವಾ ಸೀರಿಯಲ್ ತಂಡವಾಗಲೀ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸೀರಿಯಲ್ ನಲ್ಲೂ ಸಹಾ ಸಿಹಿ ಜನ್ಮ ರಹಸ್ಯ ಶೀಘ್ರದಲ್ಲೇ ಹೊರ ಬರುತ್ತಾ ಅನ್ನೋ ಅನುಮಾನ ಸಹಾ ಮೂಡಿದೆ. ಎಲ್ಲಾ ಅನುಮಾನಗಳ ಉತ್ತರಕ್ಕೆ ಮುಂದಿನ ಎಪಿಸೋಡ್ ಗಳವರೆಗೆ ಕಾದು ನೋಡಬೇಕಾಗಿದೆ.
Sheelu Abraham: ಮದುವೆ ನಂತರ ಅಕ್ರಮ ಸಂಬಂಧ ತಪ್ಪೇನಲ್ಲ, ಖ್ಯಾತ ನಟಿಯ ಸಂಚಲನ ಹೇಳಿಕೆ