Shah Rukh Khan: ವೃದ್ಧನ ಮೇಲೆ ದರ್ಪ, ನಾಚಿಕೆ ಆಗಬೇಕು; ಶಾರೂಖ್ ವರ್ತನೆಗೆ ರೊಚ್ಚಿಗೆದ್ದ ನೆಟ್ಟಿಗರು

Written by Soma Shekar

Published on:

---Join Our Channel---

Shah Rukh Khan: ಬಾಲಿವುಡ್ ನ (Bollywood) ಸ್ಟಾರ್ ನಟ ಶಾರೂಖ್ ಖಾನ್ (Shah Rukh Khan) ಅವರು ಸ್ವಿಟ್ಜರ್ಲೆಂಡ್‌‌ ನಲ್ಲಿ ನಡೆದಂತಹ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು. 77 ನೇ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ ನಲ್ಲಿ (77 th Locarno Film Festival) ಪ್ರಶಸ್ತಿ ಸ್ವೀಕರಿಸಿದ ನಟ ಅನಂತರ ತಮ್ಮ ಭಾಷಣದ ಮೂಲಕ ಜನರ ಮನಸ್ಸನ್ನು ಗೆದ್ದರು.

ಆದರೆ ಅನಂತರ ನಡೆದ ಒಂದು ಘಟನೆಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಎಲ್ಲೆಡೆ ಇದು ಹರಿದಾಡಿದೆ. ಅಲ್ಲದೇ ಈ ವೀಡಿಯೋ ನೋಡಿದ ನಂತರ ನಟ ಶಾರುಖ್ ಅವರನ್ನು ಟ್ರೋಲ್ ಮಾಡಲಾಗುತ್ತಿದ್ದು, ಶಾರೂಖ್ ಖಾನ್ ವರ್ತನೆಗೆ ಟೀಕೆಗಳು ಹರಿದು ಬರುತ್ತಿದೆ.

ಶಾರುಖ್ ಪ್ರಶಸ್ತಿ ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಪಾಪರಾಜಿಗಳಿಗೆ ಪೋಸ್ ನೀಡುವ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲೇ ನಿಂತಿದ್ದಂತಹ ಒಬ್ಬ ವೃದ್ಧನನ್ನು ತನ್ನ ಎರಡು ಕೈಗಳಿಂದ ಹಿಂದಕ್ಕೆ  ತಳ್ಳಿದ್ದಾರೆ. ಈ ವೀಡಿಯೋ ನೋಡಿದ ಅವರ ಅಭಿಮಾನಿಗಳೇ ಶಾಕ್ ಆಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕರು ನಟನ ಇಂತಹ ವರ್ತನೆಗೆ ಬೇಸರಗೊಂಡಿದ್ದಾರೆ.

ನೆಟ್ಟಿಗರು, ಇಂತಹ ವರ್ತನೆಗೆ ನಾಚಿಕೆಯಾಗಬೇಕು, ಆತ ಒಳ್ಳೆಯವನಲ್ಲ ಅಂತ ಮೊದಲೇ ಗೊತ್ತಿತ್ತು, ವಯಸ್ಸಿಗೆ ಮರ್ಯಾದೆ ಕೊಡೋದು ಗೊತ್ತಿಲ್ವಾ, ಶಾರೂಖ್ ಕೂಡಾ‌ ವೃದ್ಧ ಎಂದು ಟೀಕಿಸಿದರೆ, ಅಭಿಮಾನಿಗಳು ಅದೆಲ್ಲಾ ತಮಾಷೆ ಅಷ್ಟೇ ಎಂದು ತಮ್ಮ‌ ನೆಚ್ಚಿನ ನಟನ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

Venu Swamy : ಇವರ ಬಾಳು 3 ವರ್ಷ ಅಷ್ಟೇ, ನಾಗಚೈತನ್ಯ ಶೋಭಿತಾ ಎಂಗೇಜ್ಮೆಂಟ್ ಬೆನ್ನಲ್ಲೇ ವೇಣುಸ್ವಾಮಿ ಶಾಕಿಂಗ್ ಭವಿಷ್ಯ

Leave a Comment