SeethaRama Serial: ಸೀತಾರಾಮ ಸೀರಿಯಲ್ ನಲ್ಲಿ (SeethaRama Serial) ಸಿಹಿಯನ್ನು (Sihi) ಬೋರ್ಡಿಂಗ್ ಶಾಲೆಗೆ ಸೇರಿಸಲಾಗಿದೆ. ಆದರೆ ಅಲ್ಲಿ ಸಿಹಿ ಖುಷಿಯಾಗಿಲ್ಲ, ಅವಳು ಸರಿಯಾದ ಟೈಮ್ ಗೆ ಊಟ ಮಾಡ್ತಿಲ್ಲ, ನಿದ್ದೆ ಮಾಡ್ತಿಲ್ಲ ಅನ್ನೋ ವಿಷಯಗಳನ್ನ ಕೇಳಿದ ರಾಮ್ ಚಡಪಡಿಸಿದ್ದಾನೆ. ಮಗಳನ್ನ ನೋಡಲೇಬೇಕಂತ ಬೋರ್ಡಿಂಗ್ ಸ್ಕೂಲ್ ಹತ್ರ ಬಂದಿದ್ದಾನೆ. ವಿಸಿಟಿಂಗ್ ಟೈಮ್ ನಲ್ಲೇ ಮಕ್ಕಳನ್ನ ಭೇಟಿ ಮಾಡಬೇಕು ಅನ್ನೋ ಶಿಸ್ತಿನ ನಿಯಮ ಇರೋದ್ರಿಂದ ರಾಮ್ ಗೆ ಸಿಹಿಯನ್ನು ಭೇಟಿ ಮಾಡೋಕೆ ಆಗಿಲ್ಲ.
ರಾಮ್ (Ram) ಹೊರಗಡೆ ಇಂದಾನೇ ಸಿಹಿಯನ್ನು ನೋಡಿ ಮಾತನಾಡಿಸಿದ್ದಾನೆ. ಸಿಹಿ ಕೂಡಾ ಅಲ್ಲಿಂದಲೇ ನಿಂತು ಅಪ್ಪ ಅಮ್ಮನನ್ನ ನೋಡಿ ಖುಷಿಯಾಗಿದ್ದಾಳೆ. ಮಗಳನ್ನು ನೋಡಿದ ನಂತರ ರಾಮ್ ಮತ್ತು ಸೀತಾ (Seetha) ಅಲ್ಲಿಂದ ಹೊರಡುವಾಗಲೇ, ರಾಮ್ ಕಾರ್ ಡೋರ್ ತೆಗೆದು ಇನ್ನೇನು ಕಾರೊಳಗೆ ಹೋಗಬೇಕು ಅನ್ನೋವಾಗ್ಲೇ ಮೇಘ ಶ್ಯಾಮ್ ಕಾಣಿಸಿಕೊಂಡಿದ್ದಾರೆ.
ಡಾ. ಮೇಘ ಶ್ಯಾಮ್ ಕಾಣಿಸಿದ ಕೂಡಲೇ ರಾಮ್ ಅವರನ್ನ ನೋಡಿದ್ದಾರೆ. ಶ್ಯಾಮ್ ಕೂಡಾ ರಾಮ್ ನ ಬಹಳ ಅಚ್ಚರಿಯಿಂದ ನೋಡಿದ್ದಾರೆ. ಕಥೆಯಲ್ಲಿ ಟ್ವಿಸ್ಟ್ ಏನಂದ್ರೆ ರಾಮ್ ಮತ್ತು ಶ್ಯಾಮ್ ಗೆ ಪರಿಚಯ ಇದೆ. ಯಾಕಂದ್ರೆ ಇವರ ಅಮ್ಮಂದಿರು ಸ್ನೇಹಿತೆಯರಾಗಿದ್ದವರು. ಆದ್ದರಿಂದ ಒಂದರ್ಥದಲ್ಲಿ ರಾಮ್ ಮತ್ತು ಶ್ಯಾಮ್ ಸಹಾ ಸ್ನೇಹಿತರು ಅಂತಾನೇ ಹೇಳಬಹುದು.
ಮೇಘ ಶ್ಯಾಮ್ ಹೆಂಡತಿ ಶಾಲಿನಿಯ ತಂಗಿಯೇ ರಾಮ್ ನ ಎಕ್ಸ್ ಚಾಂದಿನಿ. ಈಗ ಮೇಘ ಶ್ಯಾಮ್ ಗೆ ಈಗ ಸಿಹಿ ರಾಮ್ ಮತ್ತು ಸೀತಾ ಮಗಳು ಅನ್ನೋದೇ ಗೊತ್ತಾಗಬಹುದು. ಆದರೆ ಸೀತಾ ಮಾತ್ರ ಮೇಘ ಶ್ಯಾಮ್ ಹೆಸರು ಕೇಳಿದಾಗಲೇ ಶಾಕ್ ಆಗಿದ್ಲು… ಈಗ ಅವರನ್ನ ಎದುರಿಗೆ ನೋಡಿದಾಗ ಇನ್ನಷ್ಟು ಆತಂಕ ಪಟ್ಟಿದ್ದಾಳೆ. ಇದೆಲ್ಲಾ ಕೂಡಾ ಸಿಹಿಯ ಜನ್ಮ ರಹಸ್ಯದ ಜೊತೆ ಬೆಸೆದುಕೊಂಡಿದೆ ಅನ್ನೋದ್ರಲ್ಲಿ ಅನುಮಾನ ಇಲ್ಲ.