SeethaRama Serial: ಡಾ. ಅನಂತ ಲಕ್ಷ್ಮೀ ಮುಂದೆ ಸಿಹಿ ಜನ್ಮ ರಹಸ್ಯ ಬಯಲು; ಮಹಾಸತ್ಯ ಹೇಳಿ ಬಿಟ್ಲು ಸೀತಾ

Written by Soma Shekar

Published on:

---Join Our Channel---

SeethaRama Serial: ಕಿರುತೆರೆಯ ಜನಪ್ರಿಯ ಸೀರಿಯಲ್ ಸೀತಾರಾಮದಲ್ಲಿ (SeethaRama Serial) ಸೀರಿಯಲ್ ಆರಂಭ ಆದಾಗಿನಿಂದಲೂ ಸಹಾ ಸಿಹಿ ಸೀತಾ ಸ್ವಂತ ಮಗಳಾ? ಸಿಹಿಯ ತಂದೆ ಯಾರು? ಸೀತಾಳ ಗಂಡ ಯಾರು? ಸೀತಾ ಸಿಹಿಯ ವಿಚಾರವಾಗಿ ಮುಚ್ಚಿಟ್ಟಿರುವ ಸತ್ಯಗಳೇನು ಎನ್ನುವ ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಇತ್ತು. ಈಗ ಅದಕ್ಕೆ ಉತ್ಥರ ಸಿಗುವ ಸಮಯ ಬಂದಿದೆ.

ಬಹುತೇಕ ಈ ವಾರದ ಶುಕ್ರವಾರದ ಎಪಿಸೋಡ್ ನಲ್ಲಿ ಸಿಹಿಯ ಜನ್ಮ ರಹಸ್ಯ ಹೊರಗೆ ಬರೋದು ಖಚಿತ ಎನಿಸಿದೆ. ಸೀತಾ ಹಣದ ಅವಶ್ಯಕತೆಯಿಂದಾಗಿ ಬಾಡಿಗೆ ತಾಯಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಮೇಘಾಶ್ಯಾಮ್ ಮತ್ತು ಅವರ ಪತ್ನಿಯ ಮಗು ಸೀತಾ ಗರ್ಭದಲ್ಲಿ ಬೆಳೆದಿತ್ತು. ಆದ್ರೆ ಮಗು ಹುಟ್ಟಿದ ಮೇಲೆ‌ ಮೇಘ ಶ್ಯಾಮ್ ಕುಟುಂಬ ಆ ಮಗುವನ್ನ ತಗೊಂಡು ಹೋಗೋಕೆ ಬಂದಿಲ್ಲ.

ಮಗುವನ್ನ ಅನಾಥಾಶ್ರಮಕ್ಕೆ ಬಿಡೋದು ಯಾಕೆ ಅಂತ ಸೀತಾ ತಾನೇ ತಾಯಿಯಾಗಿ ಸಾಕಿದ್ದಾಳೆ. ಈ ಎಲ್ಲಾ ಸತ್ಯ ಡಾ. ಅನಂತ ಲಕ್ಷ್ಮಿ ಮತ್ತು ಸೀತಾಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಈಗ ಸೀತಾ ಡಾ. ಅನಂತಲಕ್ಷ್ಮೀ ಹತ್ರ ಈ ವಿಚಾರವನ್ನು ನೆನಪು ಮಾಡಿಕೊಂಡಿದ್ದು ಮಾತ್ರ ಅಲ್ಲ ಅದನ್ನ ಯಾರಿಗೂ ಹೇಳಬೇಡಿ, ಸತ್ಯ ಗೊತ್ತಾದ್ರೆ ಸಿಹಿಗೆ ಸಹಾ ಅವಳಿಗೂ ಬೇಸರ ಆಗುತ್ತೆ ಅಂತ ರಿಕ್ವೆಸ್ಟ್ ಮಾಡಿಕೊಂಡಿದ್ದಾಳೆ.

ಈಗ ಮೇಘಶ್ಯಾಮ್ ಗೆ ಸಿಹಿನ ನೋಡಿದ ಮೇಲೆ ತನಗೂ ಮಗು ಬೇಕು ಎನಿಸಿದೆ. ಇನ್ನು ಸಿಹಿನೇ ತನ್ನ ಮಗಳು ಅಂತ ಗೊತ್ತಾದ್ರೆ ಮೇಘ ಶ್ಯಾಮ್ ಏನು ಮಾಡಬಹುದು? ಸಿಹಿನ ತನ್ನ ಮನೆಗೆ ಕರ್ಕೊಂಡು ಹೋಗ್ತಾನಾ? ಅವನ ಹೆಂಡ್ತಿ ಆ ಮಗುವನ್ನ ಒಪ್ಪಿಕೊಳ್ತಾಳಾ? ಸಿಹಿ ಸೀತಾಳಿಂದ ದೂರ ಆಗ್ತಾಳಾ? ಕಾದು ನೋಡಬೇಕಾಗಿದೆ.

Bhagylakshmi Serial: ಅಮ್ಮನ ಕೈಗೆ ಸಿಕ್ಕಿ ಬಿದ್ದ ತಾಂಡವ್; ಮಗನಿಗೆ ಯಾವ ಶಿಕ್ಷೆ ಕೊಡ್ತಾಳೆ ಕುಸುಮಾ ದೇವಿ ?

Leave a Comment