Gauthami Jadhav: ತಾಜ್ ಮಹಲ್ ಮುಂದೆ ಪತಿಯೊಡನೆ ಪ್ರೇಮ ಪಕ್ಷಿಯಂತೆ ಹಾರಾಡಿದ ಸತ್ಯ ಸೀರಿಯಲ್ ನ ನಾಯಕಿ ಗೌತಮಿ

Written by Soma Shekar

Published on:

---Join Our Channel---

Gauthami Jadhavi : ಕನ್ನಡ ಕಿರುತೆರೆಯಲ್ಲಿ ಒಂದು ವಿಭಿನ್ನವಾದ ಗೆಟಪ್ ನಿಂದಲೇ ಎಲ್ಲರ ಗಮನ ಸೆಳೆದಿರುವ ನಟಿ ಗೌತಮಿ ಜಾಧವ್ (Gauthami Jadhav) ಅವರು. ಗೌತಮಿ ಜಾಧವ್ ಅಂದ್ರೆ ಅನೇಕರಿಗೆ ತಟ್ಟನೆ ನೆನಪಾಗದೇ ಇರಬಹುದು. ಆದರೆ ಸತ್ಯ ಸೀರಿಯಲ್ ನ ನಾಯಕಿ ಸತ್ಯ ಅಂದ್ರೆ ಕೂಡಲೇ ಎಲ್ಲರಿಗೂ ಈ ನಟಿ ನೆನಪಾಗ್ತಾರೆ. ಗೌತಮಿ ಅವರು ಸೀರಿಯಲ್ ನಲ್ಲಿ ಈಗ ಖಡಕ್ ಪೋಲಿಸ್ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಕಾಸರಗೋಡು (Abhishek Kasaragodu) ಅವರು ಕನ್ನಡ ಸಿನಿಮಾ ರಂಗದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ. ಗೌತಮಿ ಅವರನ್ನು ಸೀರಿಯಲ್ ನಲ್ಲಿ ಸತ್ಯ ಪಾತ್ರದಲ್ಲಿ ನೋಡಿರುವ ಪ್ರೇಕ್ಷಕರು ನಟಿಯ ರಿಯಲ್ ಲುಕ್ ನೋಡಿದಾಗ ಅಚ್ಚರಿ ಪಡುತ್ತಲೇ ಇರುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಗೌತಮಿ ಜಾಧವ್ ಅವರು ಆಗಾಗ ಅಂದವಾಗಿ ಸೀರೆಯುಟ್ಟು ಬಹಳ ವಿಶೇಷವಾದ ಫೋಟೋ ಶೂಟ್ ಗಳನ್ನ ಮಾಡಿಸಿ ಅಭಿಮಾನಿಗಳು ಮತ್ತು ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಾರೆ. ಅವರ ಲುಕ್ ಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತದೆ.

ಈಗ ನಟಿಯು ತಮ್ಮ ಪತಿಯ ಜೊತೆಗೆ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಿರುವಂತಹ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ತಾಜ್ ಮಹಲ್ ಮುಂದೆ ರಮ್ಯವಾದ ಪರಿಸರದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇದನ್ನು ನೋಡಿ ಖುಷಿಯಾಗಿದ್ದಾರೆ.

ಗೌತಮಿ ಜಾಧವ್ ಅವರು ಶೇರ್ ಮಾಡಿದ ಫೋಟೋ ಗಳಿಗೆ ಕಾಮೆಂಟ್ ಗಳನ್ನು ಮಾಡಿದ್ದಾರೆ ನೆಟ್ಟಿಗರು ಮತ್ತು ನಟಿಯ ಅಭಿಮಾನಿಗಳು. ಕಾಮೆಂಟ್ ಗಳಲ್ಲಿ ಸೂಪರ್ ಜೋಡಿ, ಸುಂದರವಾದ ಜೋಡಿ ಎಂದೆಲ್ಲಾ ಹೊಗಳಿಕೆಯನ್ನು ನೀಡಿದ್ದಾರೆ.

ಗೌತಮಿ ಜಾಧವ್ ಅವರು ಸೀರಿಯಲ್ ಮಾತ್ರವೇ ಅಲ್ಲದೇ ಕೆಲವು ಸಿನಿಮಾಗಳಲ್ಲಿ ಸಹಾ ನಟಿಸಿದ್ದಾರೆ‌. ಆದರೆ ಅವರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿರುವುದು ಮಾತ್ರ ಸತ್ಯ ಪಾತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸತ್ಯ ಪಾತ್ರ ಕಿರುತೆರೆಯ ಪ್ರೇಕ್ಷಕರ ವಿಶೇಷ ಮೆಚ್ಚುಗೆಯ ಪಾತ್ರವಾಗಿದೆ.

Leave a Comment