Sathya Serial: ಪ್ರೇಕ್ಷಕರ ಅಚ್ಚುಮೆಚ್ಚಿನ ಸತ್ಯ ಸೀರಿಯಲ್ ಇವತ್ತೇ ಮುಕ್ತಾಯ; ವಿಷಯ ಕೇಳಿ ಭಾವುಕರಾದ ಪ್ರೇಕ್ಷಕರು

Written by Soma Shekar

Published on:

---Join Our Channel---

Sathya Serial: ಕನ್ನಡ ಕಿರುತೆರೆಯಲ್ಲಿ ಹೊಸ ಸೀರಿಯಲ್ ಗಳು ಬರ್ತಿದೆ ಅಂದಾಗ ಹಳೆ ಸೀರಿಯಲ್ ಗಳಿಗೆ ತೆರೆ ಎಳೆಯಬೇಕಾಗುತ್ತೆ. ಯಾಕಂದ್ರೆ ಹೊಸ ಸೀರಿಯಲ್ ಗೆ ಸಮಯವನ್ನು ನೀಡಬೇಕಾಗಿರುತ್ತೆ. ಈಗ ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ಜನಪ್ರಿಯ ಸೀರಿಯಲ್ ಸತ್ಯ ಕ್ಲೈಮಾಕ್ಸ್ ಗೆ (Sathya Serial)ಬಂದು ಸೇರಿದೆ. ಇದನ್ನ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.

ಹೌದು, ಸತ್ಯ ಸೀರಿಯಲ್ ಆರಂಭದಿಂದಲೇ ಕಿರುತೆರೆಯಲ್ಲಿ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಪ್ರಸಾರ ಕಂಡ ಕೆಲವೇ ವಾರಗಳಲ್ಲಿ ಟಾಪ್ ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿತ್ತು. ಸತ್ಯ ಪಾತ್ರ ಮಹಿಳೆಯರ ವಿಶೇಷ ಗಮನವನ್ನು ಸೆಳೆದಿತ್ತು ಹಾಗೂ ಸೂಪರ್ ಹಿಟ್ ಆಗಿತ್ತು.

ಮೆಕ್ಯಾನಿಕ್ ಆಗಿ ಕುಟುಂಬದ‌ ಜವಾಬ್ದಾರಿ ಹೊತ್ತು, ದುಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಸತ್ಯ ಅಕ್ಕ ದಿವ್ಯ ಮಾಡಿದ ತಪ್ಪಿನಿಂದ ಕೋಟೆ ಮನೆ ಸೊಸೆಯಾದ್ಲು. ಅಲ್ಲಿ ಎಲ್ಲರ ಮನಸ್ಸನ್ನ ಗೆದ್ದು, ಅತ್ತೆಯ ಮೆಚ್ಚಿನ ಸೊಸೆಯಾಗಿ, ಓದಿ ಪೋಲಿಸ್ ಅಧಿಕಾರಿಯಾಗಿಯೂ ಹೆಸರನ್ನು ಮಾಡಿದ ಸತ್ಯ ಈಗ ಕೋಟೆ ಮನೆಗೆ ವಾರಸುದಾರನ ಕೊಡೋಕೆ ಸಿದ್ಧವಾಗಿದ್ದಾಳೆ.

ಆದರೆ ದಿವ್ಯ ಮತ್ತು ಕೀರ್ತನಾ ನಟನೆ ಅವಳಿಗೆ ಗೊತ್ತಾಗದೇ ಅವರನ್ನ ಒಳ್ಳೆಯವರು ಅಂತಾನೇ ಅನ್ಕೊಂಡು ಮೋಸ ಹೋಗಿದ್ದಾಳೆ. ಮುಂದೇನಾಗುತ್ತೆ ಅನ್ನೋವಾಗ್ಲೇ ವಾಹಿನಿ ಮಹಾ ಸಂಚಿಕೆಯ ಮೂಲಕ ಸತ್ಯ ಸೀರಿಯಲ್ ಕ್ಲೈಮಾಕ್ಸ್ ಎನ್ನುವ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದೆ.‌ಇದನ್ನ ನೋಡಿ ಸೀರಿಯಲ್ ಮುಗೀತಿದೆ ಅಂತ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

ಇದೇ ವೇಳೆ ಕೆಲವು ನೆಟ್ಟಿಗರು ಅಸಲಿಗೆ ಸತ್ಯ ಅವರ ಅಪ್ಪನ ಕೊಲೆ ಮಾಡಿದವರು ಯಾರು? ಚಿದಗ್ನಿ ಬಾಯಿನ ನಿಯಂತ್ರಣ ಮಾಡ್ತಿದ್ದ ದೊಡ್ಡವರು ಅನ್ನೋ ಪಾತ್ರದ ರಹಸ್ಯ ಏನಾಯ್ತು? ಕಥೆಯಲ್ಲಿನ ಈ ವಿಷಯಗಳನ್ನು ಬಿಟ್ಟು ಮುಗಿಸ್ತಾ ಇದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ.‌ ಇದೇ ವೇಳೆ ಇನ್ನೂ ಕೆಲವರು ಕೊನೆಗೂ ಮುಗೀತಲ್ವಾ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

Jr NTR ಸಂಭ್ರಮದಿ ನಡೆದ Jr.NTR ಸಿನಿಮಾ ಮುಹೂರ್ತ, ಕೊನೆಗೂ ಪ್ರಶಾಂತ್ ನೀಲ್ ಸಿನಿಮಾ ಅಪ್ಡೇಟ್ ಹೊರ ಬಂತು

Leave a Comment