Hamsa Lekha: ಕನ್ನಡದ ಹೆಸರಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ್ರಾ ಹಂಸಲೇಖ? ಹೊರ ಬಿತ್ತು ಆಕ್ರೋಶ

Written by Soma Shekar

Published on:

---Join Our Channel---

Hamsa Lekha : ನಾದಬ್ರಹ್ಮ ಖ್ಯಾತಿಯ ಹಂಸಲೇಖ (Hamsa Lekha) ಅವರು ಸಮಾರಂಭವೊಂದರಲ್ಲಿ ಮಾತನಾಡಿದ ವಿಷಯವೊಂದು ವೈರಲ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಂಸಲೇಖ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬ್ರಾಹ್ಮಣ ಸಮುದಾಯದ (Brahmin Community) ಬಗ್ಗೆ ಹಂಸಲೇಖ ಆಡಿದ ಮಾತು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇಷ್ಟಕ್ಕೂ ಹಂಸಲೇಖ ಅವರು ಹೇಳಿದ್ದಾರೂ ಏನು ಎನ್ನುವುದಾದರೆ, ಹಂಸಲೇಖ ಅವರು ಮಾತನಾಡುತ್ತಾ, ಕನ್ನಡದ ಪ್ರಾದೇಶಿಕ ಪಕ್ಷವನ್ನು ಕಟ್ಟುವುದು ಸುಲಭವಲ್ಲ. ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ಆರ್ ಎಸ್​ ಎಸ್​ ನ (RSS) ಚಿಂತನ ಗಂಗಾ ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ಓದಿದ್ದೆ.

ಅದು ಆರ್​ ಎಸ್​ ಎಸ್​ ಅವರ ಸಂವಿಧಾನ. ಆ ಪುಸ್ತಕ ಎಷ್ಟು ಕೆಲಸ ಮಾಡುತ್ತೆ ಅಂದ್ರೆ ಅದು ದೇಶದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧದವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ (Chintana Ganga) ಮೂಲಕ ಮೆಸೇಜ್ ಕಳುಹಿಸುತ್ತಾರೆ, ಅದು ಬೇರೆ ವಿಚಾರ ಬಿಡಿ ಎನ್ನುವ ಮಾತುಗಳನ್ನು ಹೇಳಿದ್ದಾರೆ ಹಂಸಲೇಖ.

ಕನ್ನಡದ ಪಕ್ಷ ಕಟ್ಟುವವರಿಗೂ ಅಂತದೊಂದು ಮಾರ್ಗಸೂಚಿ ಅವಶ್ಯಕತೆ ಇದೆ. ಅದು ಚಿಂತನ ಗಂಗಾದ ರೀತಿ ಇರದೇ ನಾಡನ್ನ ಕಟ್ಟುವಂತೆ ಇರ್ಬೇಕು. ಪ್ರತಿ ಕನ್ನಡಿಗ ಸಂವಿಧಾನದ ಜೊತೆ ಕನ್ನಡದ ಠರಾವನ್ನು ಇರಿಸಿಕೊಳ್ಳಬೇಕು ಎಂದು ಹಂಸಲೇಖ ಈ ವಿಡಿಯೋದಲ್ಲಿ ಹೇಳಿದ್ದು ಇದನ್ನು ನೋಡಿ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ.

Lakshmi Nivasa Serial: ಇದು ಜಸ್ಟ್ ಲಕ್ಷ್ಮೀ ನಿವಾಸ ಅಲ್ಲ ಇದೊಂದು ನಿಗೂಢ ನಿವಾಸ, ಇಷ್ಟೆಲ್ಲಾ ಗುಟ್ಟುಗಳು ರಟ್ಟಾಗೋದು ಯಾವಾಗ ?

Leave a Comment