Actress Amulya: ಕುಟುಂಬ ಸಮೇತ ನಂಜುಂಡೇಶ್ವರನ ದರ್ಶನ ಮಾಡಿದ ಸ್ಯಾಂಡಲ್ವುಡ್ ಬೆಡಗಿ ಅಮೂಲ್ಯ

Written by Soma Shekar

Published on:

---Join Our Channel---

Actress Amulya: ಸ್ಯಾಂಡಲ್ವುಡ್ ನ ಸ್ಟಾರ್ ನಟಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದವರು ನಟಿ ಅಮೂಲ್ಯ (Actress Amulya). ಮದುವೆಯ ನಂತರ ಮನೆ, ಮಕ್ಕಳು ಅಂತ ನಟಿ ಖಾಸಗಿ ಜೀವನಕ್ಕೆ ಹೆಚ್ಚು ಒತ್ತನ್ನು ನೀಡಿದ್ದು, ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಅಮೂಲ್ಯ ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹಾ ಅವರನ್ನು ಅಭಿಮಾನಿಸುವವರ ಸಂಖ್ಯೆ ಮಾತ್ರ ಕೊರತೆಯಿಲ್ಲ ಎಂದೇ ಹೇಳಬಹುದಾಗಿದೆ.

ಅಮೂಲ್ಯ ಅವರು ಸಿನಿಮಾಗಳಿಂದ ದೂರ ಇದ್ದರೂ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳಿಗೆ ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ಲಕ್ಷಗಳ ಸಂಖ್ಯೆಯಲ್ಲಿ ಅಭಿಮಾನಿಗಳು ಹಿಂಬಾಲಿಸುತ್ತಾರೆ.

ಇತ್ತೀಚಿಗೆ ನಟಿ ಅಮೂಲ್ಯ ಅವರು ತಮ್ಮ ಪತಿ, ಮಕ್ಕಳು ಹಾಗೂ ತಮ್ಮ ಕುಟುಂಬ ಸಹಿತವಾಗಿ ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ನಂಜನಗೂಡಿಗೆ ಭೇಟಿ ನೀಡಿದ್ದು, ಅಲ್ಲಿ ನಂಜುಂಡೇಶ್ವರನ ಮಂದಿರದಲ್ಲಿ ಶ್ರೀ ನಂಜುಂಡೇಶ್ವರನ ದರ್ಶನವನ್ನು ಮಾಡಿ ಪುನೀತರಾಗಿದ್ದಾರೆ.

ನಟಿಯು ನಂಜನಗೂಡಿನ ಮಂದಿರಕ್ಕೆ ಭೇಟಿ ನೀಡಿದ ಅಪೂರ್ವ ಕ್ಷಣಗಳ ಫೋಟೋಯಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನಟಿಯು ಅಭಿಮಾನಿಗಳು ಮಾತ್ರವೇ ಅಲ್ಲದೇ ನೆಟ್ಟಿಗರು ಸಹಾ ಇದಕ್ಕೆ ಮೆಚ್ಚುಗೆಗಳನ್ನು ನೀಡಿದ್ದಾರೆ.

ನಟಿ ಅಮೂಲ್ಯ ಅವರು ಆಗಾಗ ವಿಶೇಷ ಸಂದರ್ಭಗಳ, ಕಾರ್ಯಕ್ರಮಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಫೋಟೋಗಳು ಬಹಳ ಬೇಗ ವೈರಲ್ ಆಗುತ್ತವೆ.

Leave a Comment