Samantha : ಟಾಲಿವುಡ್ ನ ಸ್ಟಾರ್ ನಟಿ ಸಮಂತಾ (Samantha) ನಾಗಚೈತನ್ಯರಿಂದ ದೂರವಾದ ಮೇಲೆ ಒಂಟಿಯಾಗಿ ಇದ್ದಾರೆ. ಆದರೆ ಇನ್ನೊಂದು ಕಡೆ ನಾಗಚೈತನ್ಯ ಈಗಾಗಲೇ ಶೋಭಿತಾ ಧೂಳಿಪಾಳ (Sobita Dhulipala) ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಿದ್ಧತೆಯಲ್ಲಿದ್ದಾರೆ. ಇವೆಲ್ಲವುಗಳ ನಡುವೆ ಸನಂತಾ ತಮ್ಮ ಮಾಜಿ ಪತಿಯ ಭಾವೀ ಪತ್ನಿಯ ಸಿನಿಮಾ ಪ್ರಮೋಟ್ ಮಾಡಿದ್ದಾರೆ.
ಇತ್ತೀಚಿಗೆ ಶೋಭಿತಾ ಧೂಳಿಪಾಳ ನಟಿಸಿರುವ ಬಾಲಿವುಡ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಹೈದ್ರಾಬಾದ್ ನಲ್ಲಿ ನಡೆದಿದ್ದು, ಇದರಲ್ಲಿ ತೆಲುಗಿನ ಸ್ಟಾರ್ ಗಳು ಭಾಗಿಯಾಗಿದ್ದರು. ಆ ಸ್ಟಾರ್ ಗಳಲ್ಲಿ ನಟಿ ಸಮಂತಾ ಅವರು ಸಹಾ ಇದ್ದರು. ಧರ್ಮ ಪ್ರೊಡಕ್ಷನ್ಸ್ ಹಾಗೂ ಎಟರ್ನಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್, ಆಲಿಯಾ ಭಟ್, ಶಹೀನಾ ಭಟ್, ಸೋನ್ ಮಿಶ್ರಾ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಶೋಭಿತಾ ಧೂಳಿಪಾಳ ನಟಿಸಿದ್ದಾರೆನ್ನುವ ವಿಚಾರ ಗೊತ್ತಿದ್ದರೂ ಸಹಾ ಸಮಂತಾ ಭಾಗಿಯಾಗಿದ್ದರು. ಸಮಂತಾ ಆಲಿಯಾಗಾಗಿ (Alia Bhat) ಕಾರ್ಯಕ್ರಮಕ್ಕೆ ಬಂದಿದ್ದರು, ಆದರೆ ಶೋಭಿತಾ ಇದ್ದಾರೆ ಎನ್ನುವ ಕಾರಣಕ್ಕೆ ನಟಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರಬಹುದಿತ್ತು. ಆದರೆ ಸಮಂತಾ ಹಾಗೆ ಮಾಡದೇ ಈವೆಂಟ್ ನಲ್ಲಿ ಹಾಜರಿದ್ದರು.
ಸಮಂತಾ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಗಳು ಹರಿದು ಬರುತ್ತಿದೆ. ಸಿನಿಮಾ ಅಂತ ಬಂದಾಗ ಸ್ಯಾಮ್ ತಮ್ಮ ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ಬರ್ತಾರೆ ಎಂದು ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನು ಮಾಡುತ್ತಾ ತಮ್ಮ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.
Bigg Boss Kannada 11 ಮನೆಗೆ ಮಹಿಳಾ ಆಯೋಗ? ಶೀಘ್ರದಲ್ಲೇ ಬಿಗ್ ಬಾಸ್ ನಲ್ಲಿ ಮಹತ್ವದ ಬದಲಾವಣೆ