Saif Ali Khan: ತೆಲುಗು ಸ್ಟಾರ್ ನಟನ ಹೊಸ ಸಿನಿಮಾದ ಭರ್ಜರಿ ಅವಕಾಶ ಬಾಚಿಕೊಂಡ ಸೈಫ್ ಕರೀನಾ ದಂಪತಿ

Written by Soma Shekar

Published on:

---Join Our Channel---

Saif Ali Khan: ಬಾಲಿವುಡ್ ನ ನಟ ಸೈಫ್ ಅಲಿ ಖಾನ್ (Saif Ali Khan) ಈಗಾಗಲೇ ತೆಲುಗಿನಲ್ಲಿ ಸ್ಟಾರ್ ನಟ, ಜ್ಯೂ. ಎನ್‌ಟಿಆರ್‌ ನಾಯಕನಾಗಿರುವ ದೇವರ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈಗ ಅದರ ಬೆನ್ನಲ್ಲೇ ನಟನಿಗೆ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ ಎನ್ನುವ ವಿಷಯ ಸುದ್ದಿಯಾಗಿದೆ.

ಹೌದು, ಈ ಬಾರಿ ಸೈಫ್ ಗೆ ಮಾತ್ರವೇ ಅಲ್ಲದೇ ಅವರ ಪತ್ನಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ (Kareena Kapoor) ಅವರಿಗೂ ಆಫರ್ ಅನ್ನು ನೀಡಲಾಗಿದೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ದೇವರ ಸಿನಿಮಾ ಬಿಡುಗಡೆಗೂ ಮೊದಲೇ ಸೈಫ್ ಗೆ ಮತ್ತೊಂದು ಅವಕಾಶವು ದೊರೆತಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಾಯಕನಾಗಿರುವ ಸ್ಪಿರಿಟ್ ಸಿನಿಮಾದಲ್ಲಿ ನಟಿಸುವ ಆಫರ್ ಅನ್ನು ಸೈಫ್ ಮತ್ತು ಕರೀನಾಗೆ ನೀಡಲಾಗಿದೆ ಎನ್ನುವ ಸುದ್ದಿಯೊಂದು ಈಗ ಟಾಲಿವುಡ್ ನಲ್ಲಿ ಹರಿದಾಡಿದೆ. ಸೈಫ್ ಅಲಿ ಖಾನ್ ಅವರು ಈ ಹಿಂದೆ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದರು. ‌

ಸ್ಪಿರಿಟ್ ಸಿನಿಮಾ ಟೀಮ್ ಸೈಫ್ ದಂಪತಿಯನ್ನು ಭೇಟಿ ಮಾಡಿದ್ದು, ಕಥೆಯನ್ನು ಹೇಳಿದ್ದಾರೆ ಎನ್ನುವುದು ಸುದ್ದಿ. ಅಲ್ಲದೇ ಸಿನಿಮಾ ಕಥೆ ಕೇಳಿದ ನಂತರ ಸೈಫ್ ಮತ್ತು ಕರೀನಾ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಸಹಾ ಹೇಳಲಾಗಿದೆ. ಇನ್ನು ಈ ವಿಷಯದ ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು.

Shiva Rajkumar: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಆರಾಧ್ಯ: ಐಶ್ವರ್ಯ ರೈ ಮಗಳ ಸಂಸ್ಕಾರಕ್ಕೆ ಜನ ಮೆಚ್ಚುಗೆ

Leave a Comment