Saanya Iyer: ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್; ಇಲ್ಲಿದೆ ಫೋಟೋಗಳು

Written by Soma Shekar

Published on:

---Join Our Channel---

Saanya Iyer : ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ ಒಂದು ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ (Bigg Boss Kannada 9) ಸ್ಪರ್ಧಿಯಾಗಿದ್ದವರು ನಟಿ ಸಾನ್ಯಾ ಅಯ್ಯರ್. ಅದಕ್ಕೂ ಮೊದಲು ಸಾನ್ಯಾ (Saanya Iyer) ಅವರು ಬಾಲನಟಿಯಾಗಿ ಕಿರುತೆರೆಗೆ ಪರಿಚಯರಾಗಿದ್ದರು. ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಸಾನ್ಯಾ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ನಟಿಯಾಗಿದ್ದರು.

ಬಿಗ್ ಬಾಸ್ ಒಟಿಟಿ ಅನಂತರ ಟಿವಿ ಬಿಗ್ ಬಾಸ್ ಎರಡೂ ಕಡೆಗಳಲ್ಲೂ ಸಾನ್ಯಾ ಅವರು ಸಾಕಷ್ಟು ಸದ್ದು ಮಾಡಿದರು. ಬಿಗ್ ಬಾಸ್ ನಿಂದಾಗಿ ಸಾನ್ಯಾ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು ಮತ್ರು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಕರ ಸಂಖ್ಯೆ ಸಹಾ ಹೆಚ್ಚಾಯಿತು.

ಬಿಗ್ ಬಾಸ್ ನಿಂದ ಪಡೆದ ಜನಪ್ರಿಯತೆಯ ನಂತರ ನಟಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಗೌರಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಯನ್ನು ನೀಡೋದಕ್ಕೆ ನಟಿ ಸಿದ್ಧವಾಗಿದ್ದಾರೆ.

ಗೌರಿ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಸಿನಿಮಾದಲ್ಲಿ ಸಾನ್ಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕೆಲಸದ ನಡುವೆಯೇ ಬಿಡುವಿನ ವೇಳೆಯಲ್ಲಿ ಸಾನ್ಯಾ ತಮ್ಮ ತಾಯಿಯ ಜೊತೆಗೆ ಪ್ರವಾಸವನ್ನು ಕೈಗೊಂಡಿದ್ದಾರೆ.

ಇತ್ತೀಚಿಗೆ ನಟಿ ಸಾನ್ಯಾ ತಮ್ಮ ತಾಯಿ ದೀಪಾ ಅಯ್ಯರ್ ಅವರ ಜೊತೆಗೆ ಶ್ರೀ ಕ್ಷೇತ್ರ ಹೊರನಾಡು (Horanadu) ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಭೇಟಿಯನ್ನು ನೀಡಿದ್ದು, ಭಕ್ತಿಯಿಂದ ಅನ್ನಪೂರ್ಣೇಶ್ವರಿ ದೇವಿಯ ದರ್ಶನವನ್ನು ಮಾಡಿದ್ದಾರೆ. ಹೊರನಾಡಿನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ತಮ್ಮ ಫೋಟೋ ಶೂಟ್ ನ ಸುಂದರವಾದ ಫೋಟೋಗಳು ಮತ್ತು ತಾವು ಪ್ರವಾಸಕ್ಕೆ ಹೋದ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ.

Leave a Comment