Bigg Boss Kannada: ಈ ಬಾರಿ ಬಿಗ್ ಬಾಸ್ ನಿಂದ ಕಿಚ್ಚ ಔಟ್? ರಿಷಬ್ ಶೆಟ್ಟಿ ಮಾಡಲಿದ್ದಾರಂತೆ ನಿರೂಪಣೆ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss) ಹಿಂದಿ ಓಟಿಟಿ ಮೂರನೇ ಸೀಸನ್ ಮುಕ್ತಾಯಗೊಂಡಿದೆ. ಪ್ರಾದೇಶಿಕ ಭಾಷೆಗಳಲ್ಲಿ ಹೊಸ ಸೀಸನ್ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.‌ ಈ ಬಾರಿ ಕನ್ನಡದಲ್ಲಿ ಸೀಸನ್ 11 ಯಾವಾಗ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಕನ್ನಡ ಬಿಗ್ ಬಾಸ್ ಹೊಸ ಸೀಸನ್ ಯಾವಾಗ ಅಂತ ಕಾಯ್ತಾ ಇದ್ದವರಿಗೆ ಈಗ ಹೊಸ ಶಾಕಿಂಗ್ ಸುದ್ದಿಯೊಂದು ಹರಿದಾಡಿದೆ.

ಕನ್ನಡ ಬಿಗ್ ಬಾಸ್ ನ ಹೊಸ ಸೀಸನ್ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಸುದ್ದಿಯ ನಡುವೆಯೇ ಈ ಬಾರಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ (Bigg Boss Kannada) ನಿರೂಪಣೆ ಮಾಡೋದಿಲ್ಲ ಎನ್ನುವ ವಿಚಾರವೊಂದು ಹರಿದಾಡುತ್ತಾ ಎಲ್ಲರಿಗೂ ದೊಡ್ಡ ಶಾಕ್ ನೀಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚು ಸುದೀಪ್ (Sudeep) ಅವರು ಬಿಗ್ ಬಾಸ್ ನಿಂದ ಹೊರ ಬಂದಿದ್ದಾರೆ ಎನ್ನುವ ವಿಚಾರವು ಎಲ್ಲರ ಗಮನ ಸೆಳೆದು ವೈರಲ್ ಆಗ್ತಿದೆ.

ಇದೇ ವೇಳೆ ಈ ಬಾರಿ ಬಿಗ್ ಬಾಸ್ ನಿರೂಪಣೆಗೆ ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ ಅಥವಾ ಲ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ (Rishab Shetty) ಈ ಇಬ್ಬರಲ್ಲಿ ಒಬ್ಬರು ನಿರೂಪಣೆ ಮಾಡ್ತಾರೆ ಅಂತ ಸಹಾ ಹೇಳಲಾಗ್ತಿದೆ. ರಮೇಶ್ ಅರವಿಂದ್ ಅವರು ಕಿರುತೆರೆಯಲ್ಲಿ ಈಗಾಗಲೇ ಕೆಲವು ಜನಪ್ರಿಯ ಶೋಗಳ ನಿರೂಪಣೆ ಮಾಡಿದ್ದಾರೆ. ಇತ್ತೀಚಿಗೆ ಮುಗಿದ ಮಹಾನಟಿ ಶೋನಲ್ಲಿ ಅವರು ತೀರ್ಪುಗಾರರಾಗಿದ್ದರು.

ರಿಷಬ್ ಅವರು ನಿರೂಪಣೆ ಮಾಡುವುದಾದರೆ ಇದು ಅವರ ಮೊದಲ ರಿಯಾಲಿಟಿ ಶೋ ನ ನಿರೂಪಣೆ ಆಗಲಿದೆ. ಒಟ್ಟಿನಲ್ಲಿ ಹರಡಿರುವ ಈ ಸುದ್ದಿಯ ಸತ್ಯಾಸತ್ಯತೆ ಏನು ಎನ್ನುವುದನ್ನು ತಿಳಿಯಲು ಕಾದು ನೋಡಬೇಕಾಗಿದೆ. ಸೆಪ್ಟೆಂಬರ್ ನ ಕೊನೆಯ ವೇಳೆಗೆ ಬಿಗ್ ಬಾಸ್ ಕಿರುತೆರೆಗೆ ಬರುವ ಸಾಧ್ಯತೆಗಳು ಇವೆ ಎನ್ನುವ ನಿರೀಕ್ಷೆ ಇದೆ.

Olympics: ಭಾರತಕ್ಕೆ ಮತ್ತೊಂದು ಶಾಕ್, ಅಶಿಸ್ತು ತೋರಿದ ಕ್ರೀಡಾಪಟು ಪ್ಯಾರಿಸ್ ನಿಂದ ಗಡೀಪಾರು

Leave a Comment