Vijayalakshmi: ಮೌನಕ್ಕೆ ಜಾರಿದ ದರ್ಶನ್ ಪತ್ನಿ, ಘಟನೆಯ ಬೆನ್ನಲ್ಲೇ ದರ್ಶನ್ ಗೆ ಶಾಕ್ ಕೊಟ್ರಾ ವಿಜಯಲಕ್ಷ್ಮಿ

Written by Soma Shekar

Published on:

---Join Our Channel---

Vijayalakshmi: ಚಿತ್ರದುರ್ಗದ ರೇಣುಕಾ ಸ್ವಾಮಿಯ ಕೊ ಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನ ಸ್ಟಾರ್ ನಟ ದರ್ಶನ್ (Darshan) ಬಂಧನವಾಗಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಬ್ಬರು ಸೆಲೆಬ್ರಿಟಿಗಳು ಪೋಸ್ಟ್ ಶೇರ್ ಮಾಡಿದ್ದಾರೆ‌. ನಟಿ ಸಂಜನಾ ಗಲ್ರಾನಿ ದರ್ಶನ್ ಬಿಡುಗಡೆ ಆಗಬೇಕೆಂದು ಪ್ರಾರ್ಥನೆ ಮಾಡಿದ್ದೇನೆಂದೂ, ನಟ ಚೇತನ್ ಅವರು ಇಂತಹ ರಿಯಲ್ ಲೈಫ್ ಖಳನಾಯಕರನ್ನು ಸೃಷ್ಟಿಸಿದ್ದು ನಮ್ಮ ತಪ್ಪು ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಈ ವಿಚಾರವಾಗಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆಯನ್ನು ನೀಡಿಲ್ಲ. ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಕರ್ಮ ರಿಟರ್ನ್ಸ್ ಎಂದು ಪೋಸ್ಟ್ ಹಾಕಿಕೊಂಡರೂ ಅನಂತರ ಅವರು ಮೌನಕ್ಕೆ ಶರಣಾಗಿದ್ದಾರೆ.‌ ವಿಷಯದ ಗಂಭೀರತೆಯನ್ನು ಅರಿತುಕೊಂಡಿರುವ ವಿಜಯಲಕ್ಷ್ಮಿ ಅವರು ಈಗ ಮೌನವಾಗಿರುವಂತೆ ಕಂಡಿದೆ.

ಅಷ್ಟೇ ಅಲ್ಲ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯ ಪ್ರೊಫೈಲ್ ಫೋಟೊ ವನ್ನು ಸಹಾ ತೆಗೆದು ಹಾಕಿದ್ದಾರೆ‌.. ಅದು ಮಾತ್ರವೃ ಅಲ್ಲದೇ ಅವರು ದರ್ಶನ್ ಅವರನ್ನೂ ಸೇರಿದಂತೆ ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನೂ ಅನ್ ಫಾಲೋ ಮಾಡಿದ್ದು, ಈಗ ಅವರು ಶೂನ್ಯ ಫಾಲೋಯಿಂಗ್ ಹೊಂದಿದ್ದಾರೆ. ವಿಜಯಲಕ್ಷ್ಮಿ ಅವರು ಬೇಸರದಿಂದಲೇ ಇಂತಹುದೊಂದು ನಿರ್ಧಾರವನ್ನು ಮಾಡಿರುವ ಹಾಗೆ ಕಾಣುತ್ತಿದೆ.

ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎನ್ನುವ ಸುದ್ದಿಗಳು, ಮೀಮ್ಸ್ ಗಳು ಹರಿದಾಡಿದ ಕೂಡಲೇ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಗಳು ಹರಿದು ಬರುತ್ತಿದೆ.. ಒಂದಷ್ಟು ಜನ ವಿಜಯಲಕ್ಷ್ಮಿ ಅವರ ನಿರ್ಧಾರ ಸರಿಯಾಗಿಯೇ ಇದೆ ಎಂದು ಕಾಮೆಂಟ್ ಗಳನ್ನು ಮಾಡಿದರೆ ಇನ್ನೂ ಕೆಲವರು ಇದು ತಪ್ಪು ಎಂದು ಸಹಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Leave a Comment