Chandan Nivedita: ತಮ್ಮ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ರು ಚಂದನ್ ಮತ್ತು ನಿವೇದಿತಾ, ಥ್ರಿಲ್ ಆದ್ರು ಫ್ಯಾನ್ಸ್

Written by Soma Shekar

Published on:

---Join Our Channel---

Chandan Nivedita ಕನ್ನಡದ ಜನಪ್ರಿಯ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದು ಅನಂತರ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ (Chandan Nivedita) ವಿಚ್ಚೇದನ ಪಡೆದು ಬೇರೆಯಾದ ವಿಚಾರವು ಸಾಕಷ್ಟು ದೊಡ್ಡ ಸುದ್ದಿಯಾಗಿತ್ತು, ಒಂದಷ್ಟು ಚರ್ಚೆಗಳಿಗೆ ಕಾರಣವಾಗಿತ್ತು. ಈಗ ಈ ಜೋಡಿ ಅಭಿಮಾನಿಗಳಿಗೆ ಹೊಸ ವಿಷಯ ತಿಳಿಸಿದ್ದಾರೆ.

ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಒಂದಲ್ಲಾ ಒಂದು ಗಾಸಿಪ್ ನಿಂದಾಗಿ ಸುದ್ದಿಯಾಗಿ, ಟ್ರೋಲ್ ಸಹಾ ಆಗ್ತಿದ್ರು. ವಿಚ್ಚೇದನದ ನಂತರ ಕೂಡಾ ಅದು ಹಾಗೆ ಮುಂದುವರೆದಿತ್ತು. ವಿಚ್ಚೇದನದ ನಂತರ ಕೆರಿಯರ್ ಕಡೆಗೆ ಹೆಚ್ಚು ಗಮನ ನೀಡಿರೋ ಈ ಇಬ್ಬರೂ ಈಗ ತೆರೆಯ ಮೇಲೆ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.‌

ಚಂದನ್ ಶೆಟ್ಟಿ, ನಿವೇದಿತಾ ಗೌಡ ಜೊತೆಯಾಗಿ ನಟಿಸುತ್ತಿರು ಹೊಸ ಸಿನಿಮಾ ಮುದ್ದು ರಾಕ್ಷಸಿಯ (Muddu Rakshasi) ಪೋಸ್ಟರ್ ಬಿಡುಗಡೆ ಆಗಿದೆ. ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಿರುವ ಈ ಸಿನಿಮಾಕ್ಕೆ ಪುನೀತ್ ಶ್ರೀನಿವಾಸ ಚಿತ್ರಕಥೆ ಬರೆದು, ಅವರೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾಕ್ಕೆ ಮೊದಲು ಕ್ಯಾಂಡಿಕ್ರಶ್ ಎನ್ನುವ ಟೈಟಲ್ ನೀಡಲಾಗಿತ್ತು. ಈಗ ಮುದ್ದು ರಾಕ್ಷಸಿ ಎನ್ನುವ ಹೆಸರನ್ನು ಸಿನಿಮಾದ ಟೈಟಲ್ ಅಂತ ಹೇಳಲಾಗಿದೆ. ಈ ಸಿನಿಮಾದ ಕೆಲಸಗಳು ಚಂದನ್ ಮತ್ತು ನಿವೇದಿತಾ ಅವರ ವಿಚ್ಚೇದನಕ್ಕೂ ಮೊದಲೇ ಶುರುವಾಗಿತ್ತು ಎನ್ನಲಾಗಿದೆ.

Kannada Serial TRP: ಪುಟ್ಟಕನಿಗೆ ಮತ್ತೆ ಸಿಗದ ಸ್ಥಾನ, ಹೊಸ ಸೀರಿಯಲ್ ಗಳ ಅಬ್ಬರ, ಟಾಪ್ 5 ರಲ್ಲಿ ಕಲರ್ಸ್ ನ ಸೀರಿಯಲ್ ಗಳು

Leave a Comment