Ranveer Singh: ಬಾಲಿವುಡ್ ನ ಕ್ಯೂಟ್ ಕಪಲ್ ಎಂದೇ ಹೆಸರಾದವರು ರಣ್ವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ. ಇವರು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿ ಅನಂತರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟವರು ಈ ಜೋಡಿ. 2018 ರಲ್ಲಿ ವೈವಾಹಿಕ ಜೀವನದ ಶುಭಾರಂಭವನ್ನು ಮಾಡಿದ ಈ ಜೋಡಿಗೆ ದೊಡ್ಡ ಸಂಖ್ಯೆಯ ಹಿಂಬಾಲಕರು ಇದ್ದಾರೆ ಎನ್ನುವುದು ಸತ್ಯವಾದ ವಿಚಾರವಾಗಿದೆ. ಆಗಾಗ ಇವರ ಕುರಿತಾಗಿ ಸುದ್ದಿಗಳು ಆಗುತ್ತಲೇ ಇರುತ್ತದೆ.
ಈ ಜೋಡಿಯ ಮದುವೆಯ ನಂತರ ಕೆಲವು ಸಲ ಒಂದಷ್ಟು ಸುದ್ದಿಗಳು ಹರಿದಾಡಿ ದೀಪಿಕಾ ಮತ್ತು ರಣ್ವೀರ್ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರ ನಡುವೆ ವೈಮನಸ್ಸು ಮೂಡಿದೆ, ದೂರಾಗುವ ನಿರ್ಧಾರವನ್ನು ಮಾಡಿದ್ದಾರೆ ಎನ್ನುವ ವಿಷಯಗಳು ಅಚ್ಚರಿ ಮೂಡಿಸಿತ್ತಾದರೂ ಈ ಜೋಡಿ ಮಾತ್ರ ಅದೆಲ್ಲಾ ಕೇವಲ ವದಂತಿಗಳು ಮಾತ್ರವೇ ಹೊರತು ಅದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಸ್ಪಷ್ಟನೆ ಯನ್ನು ನೀಡುತ್ತಾ ಬಂದಿದ್ದಾರೆ.
ಎಲ್ಲವುಗಳ ನಡುವೆಯೇ ರಣ್ವೀರ್ ಮತ್ತು ದೀಪಿಕಾ ತಮ್ಮ ಜೀವನಕ್ಕೆ ಹೊಸ ಅತಿಥಿ ಯನ್ನು ಆಹ್ವಾನಿಸಲು ಸಜ್ಜಾಗುತ್ತಿದ್ದಾರೆ. ಆದರೆ ಈಗ ಇವೆಲ್ಲವುಗಳ ನಡುವೆ ಹೊಸದೊಂದು ಸುದ್ದಿ ಹೊರ ಬಂದು ಅಭಿಮಾನಿಗಳಿಗೆ ದೊಡ್ಡ ಶಾಕ್ ಅನ್ನು ನೀಡಿದೆ. ರಣ್ವೀರ್ ಸಿಂಗ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಆದಂತಹ ಒಂದು ಬದಲಾವಣೆ ಈಗ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.
ರಣ್ವೀರ್ ಅವರ ಖಾತೆಯಲ್ಲಿ 2023 ಕ್ಕಿಂತ ಮೊದಲಿನ ಫೋಟೋಗಳು ಡಿಲೀಟ್ ಆಗಿದೆ. ಅದರಲ್ಲಿ ನಟನ ಮದುವೆಯ ಫೋಟೋಗಳು ಸಹಾ ಇತ್ತು ಎನ್ನಲಾಗಿದೆ. ರಣ್ವೀರ್ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಸುದ್ದಿಯಾಗಿದ್ದು, ಮದುವೆಯ ಫೋಟೋಗಳನ್ನು ಏಕೆ ಡಿಲೀಟ್ ಮಾಡಿಬಿಟ್ರು ಅಂತ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾರಣ ತಿಳಿಯಲು ಹಾತೊರೆಯುತ್ತಿದ್ದಾರೆ.