Rani Mukerji: ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ (Amitab Bachchan) ಅವರಿಗೆ ಈಗ ವಯಸ್ಸು 81 ಆದರೂ, ಇಂದಿನ ನವ ಹಾಗೂ ಯುವ ನಟರಿಗೆ ಸಹಾ ಗಟ್ಟಿ ಪೈಪೋಟಿಯನ್ನು ನೀಡುವ ನಟ ಎನಿಸಿಕೊಂಡಿದ್ದು, ಇತ್ತೀಚಿಗೆ ತೆರೆಗೆ ಬಂದ ಕಲ್ಕಿ ಸಿನಿಮಾದಲ್ಲಿನ ಅಶ್ವತ್ಥಾಮನ ಪಾತ್ರದ ಮೂಲಕ ಅಮಿತಾಬ್ ಮತ್ತೊಮ್ಮೆ ಮಿಂಚಿದ್ದಾರೆ. ಅಮಿತಾಬ್ ಅವರ ಪಾತ್ರಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ.
ಕಲ್ಕಿ ಸಿನಿಮಾ ಆಗಾಗಲೇ 1,000 ಕೋಟಿ ರೂ. ಗಳ ಕಲೆಕ್ಷನ್ ಮಾಡಿದೆ. ದೈತ್ಯ ಪ್ರತಿಭೆ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುವ ಅವಕಾಶ ಬಂದರೆ ಬಹಳಷ್ಟು ಜನರು ಹಿಂದೇಟು ಹಾಕುತ್ತಾರೆ. ಇಂತಹ ನಟನ ಮುಂದೆ ನಟಿಸಲು ಹೆದರುವ ನಟರೂ ಸಹಾ ಇದ್ದಾರೆ. ಇನ್ನು ದಿಗ್ಗಜ ನಟನ ಜೊತೆಗೆ ಲಿಪ್ ಲಾಕ್ ಮಾಡುವ ದೃಶ್ಯ ಎಂದಾಗ ನಟಿಯರ ಪರಿಸ್ಥಿತಿ ಹೇಗಿರಬೇಡ.
ಹೌದು, ಬಾಲಿವುಡ್ ನಟಿ ರಾಣಿ ಮುಖರ್ಜಿಗೆ (Rani Mukerji) ಇಂತಹುದೊಂದು ಸನ್ನಿವೇಶ ಎದುರಾಗಿತ್ತು. 2005 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬ್ಲಾಕ್ ಸಿನಿಮಾದಲ್ಲಿ ಅಮಿತಾಬ್ ಮತ್ತು ರಾಣಿ ಮುಖರ್ಜಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಇವರ ನಡುವಿನ ಒಂದು ಚುಂಬನ ದೃಶ್ಯವಿತ್ತು. ರಾಣಿ ಮತ್ತು ಅಮಿತಾಬ್ ನಡುವೆ ವಯಸ್ಸಿನ ನಡುವೆ ಅಜಗಜಾಂತರ ವ್ಯತ್ಯಾಸವಿದ್ದುದ್ದರಿಂದ ನಟಿಗೆ ಹಿಂಜರಿಕೆ ಇತ್ತು.
ಈ ಚುಂಬನದ ದೃಶ್ಯಕ್ಕಾಗಿ ರಾಣಿ ಮುಖರ್ಜಿ ಅವರು ಎರೆಡೆರಡು ಬಾರಿ ಹಲ್ಲುಜ್ಜಿ ಸಿದ್ಧವಾಗಿದ್ದರಂತೆ. ಒಂದು ಸಣ್ಣ ದೃಶ್ಯಕ್ಕಾಗಿ ರಾಣಿ ಮುಖರ್ಜಿ ಭಾರಿ ತಯಾರಿಯನ್ನೇ ನಡೆಸಿದ್ದರಂತೆ. ಹಿರಿಯ ಹಾಗೂ ಅದ್ಭುತ ಪ್ರತಿಭಾವಂತ ನಟನಾದ ಅಮಿತಾಬ್ ಬಚ್ಚನ್ ಜೊತೆ ಕಿಸ್ ಮಾಡಲು ಒಂದು ಕ್ಷಣ ಭಯಗೊಂಡಿದ್ದ ರಾಣಿ ಅನಂತರ ಧೈರ್ಯ ತಂದುಕೊಂಡು ಆ ದೃಶ್ಯದಲ್ಲಿ ನಟಿಸಿದ್ದಾಗಿ ಹೇಳಿಕೊಂಡಿದ್ದಾರೆ.
Abhishek Bachchan: ನನ್ನೆಲ್ಲಾ ಸಂಘರ್ಷಕ್ಕೆ ನಮ್ಮಪ್ಪನೇ ಕಾರಣ, ಮನಸ್ಸಿನ ನೋವು ಬಿಚ್ಚಿಟ್ಟ ಅಭಿಷೇಕ್ ಬಚ್ಚನ್