Rajanikanth: ಐಶ್ವರ್ಯ ರೈ ನನ್ನ ಸಿನಿಮಾ ಹಿರೋಯಿನ್ ಎಂದಾಗ ರಜನೀ ಮೇಲೆ ಸಿಟ್ಟಾಗಿದ್ದ ರಾಜಸ್ಥಾನದ ವ್ಯಕ್ತಿ

Written by Soma Shekar

Published on:

---Join Our Channel---

Rajanikanth : ತಮಿಳು ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ಭಾರತೀಯ ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾಗಿರುವ ರಜನಿಕಾಂತ್ (Rajanikanth) ಅವರಿಗೀಗ 73 ವರ್ಷ ವಯಸ್ಸು. ಆದರೂ ಅವರ ಸ್ಟಾರ್ ಡಂ ಮತ್ತು ಸ್ಟೈಲ್ ಗೆ ಇಂದಿಗೂ ಕೂಡಾ ಅಭಿಮಾನಿಗಳು ಫಿದಾ ಆಗುತ್ತಾರೆ. ರಜನಿಕಾಂತ್ ಅವರ ಎನರ್ಜಿ ಮತ್ತು ಚಾರ್ಮ್ ಪ್ರತಿಯೊಬ್ಬರಿಗೂ ಖುಷಿಯನ್ನು ನೀಡುತ್ತದೆ. 2023ರಲ್ಲಿ ರಜನೀಕಾಂತ್ ಅವರು ನಟಿಸಿದ ಜೈಲರ್ ಸಿನಿಮಾ (Jailer Movie) ಬ್ಲಾಕ್ ಬಸ್ಟರ್ ಆಗುವ ಮೂಲಕ ರಜನಿಕಾಂತ್ ಅವರ ಕ್ರೇಜ್ ಯಾವ ಮಟ್ಟಕ್ಕಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಆದರೆ ಕೆಲವು ವರ್ಷಗಳ ಹಿಂದೆ ರಜನಿಕಾಂತ್ ಅವರನ್ನು ಕೆಲವರು ಹೀರೋ ರೀತಿಯಲ್ಲಿ ನೋಡುತ್ತಿರಲಿಲ್ಲ ಎನ್ನುವ ವಿಚಾರವಾಗಿ ಸ್ವತಃ ನಟ ರಜನೀಕಾಂತ್ ಅವರೇ ಸಮಾರಂಭ ಒಂದರಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದರು. ರಾಜಸ್ಥಾನದ ವ್ಯಕ್ತಿಯೊಬ್ಬರ ಜೊತೆ ನಡೆದಂತಹ ಸಂಭಾಷಣೆಯಲ್ಲಿ ಆ ವ್ಯಕ್ತಿ ಹೇಳಿದ ಅಚ್ಚರಿಯ ಮಾತುಗಳನ್ನು ಕುರಿತಾಗಿ ರಜನಿಕಾಂತ್ ಅವರು ತಿಳಿಸಿದಾಗ ಎಲ್ಲರೂ ನಗುವಂತಾಗಿತ್ತು. ರಜನಿಕಾಂತ್ ಮತ್ತು ಐಶ್ವರ್ಯ ರೈ ಅವರು ಎಂಥಿರನ್ (Anthiran) ಸಿನಿಮಾದಲ್ಲಿ ಜೋಡಿಯಾಗಿ ನಟಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ.

60 ವರ್ಷಕ್ಕೂ ಹೆಚ್ಚಿನ ವಯಸ್ಸಾದ ನಂದು ಲಾಲ್ ಎನ್ನುವ ವ್ಯಕ್ತಿ, ರಜನಿ ಸರ್ ನಿಮ್ಮ ಕೂದಲಿಗೆ ಏನಾಯ್ತು ಎನ್ನುವ ಪ್ರಶ್ನೆಯನ್ನು ಕೇಳಿದರಂತೆ. ಅದಕ್ಕೆ ರಜನಿಕಾಂತ್ ಅವರು, ಕೂದಲು ಉದುರಿ ಹೋಗಿದೆ ಅಂತ ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ವ್ಯಕ್ತಿ ನಿವೃತ್ತಿ ಜೀವನದಲ್ಲಿ ಮಜಾ ಮಾಡ್ತಾ ಇದ್ದೀರಾ ಬಿಡಿ ಅಂತ ಹೇಳಿದ್ದಾರೆ. ಆಗ ರಜನಿಕಾಂತ್ ಅವರು ಇಲ್ಲ, ಹೊಸದೊಂದು ಸಿನಿಮಾದಲ್ಲಿ ಮಾಡ್ತಿದಾನೆ ಅದರಲ್ಲಿ ಐಶ್ವರ್ಯ ರೈ (Aishwarya Rai) ಹೀರೋಯಿನ್ ಅಂತ ಹೇಳಿದ್ದಾರೆ.

ಆಗ ಆ ವ್ಯಕ್ತಿ ವಾವ್ ಐಶ್ವರ್ಯ ರೈ ಬಹಳ ಒಳ್ಳೆಯ ನಟಿ. ಹಾಗಾದ್ರೆ ಆ ಸಿನಿಮಾದಲ್ಲಿ ಹೀರೋ ಯಾರು ಅಂತ ರಜನಿಕಾಂತ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ರಜನಿಕಾಂತ್ ನಾನೇ ಹೀರೋ ಅಂದಾಗ ಆ ವ್ಯಕ್ತಿಗೆ ಅದನ್ನು ನಂಬೋದಕ್ಕೆ ಸಾಧ್ಯವಾಗಲಿಲ್ಲ ಅಂತ ರಜನೀಕಾಂತ್ ಹೇಳಿದ್ದಾರೆ. ನಂತರ ಆ ವ್ಯಕ್ತಿಯ ಮಕ್ಕಳು ನಂದು ಲಾಲ್ ಅವರಿಗೆ, ರಜನಿಕಾಂತ್ ಅವ್ರೇ ಹೀರೋ ಅಂತ ಹೇಳಿದ ನಂತರವೂ ಸಹಾ ಆ ವ್ಯಕ್ತಿ ಸುಮಾರು 10 ನಿಮಿಷ ರಜನೀಕಾಂತ್ ಅವರನ್ನ ನೋಡ್ತಾ ಇದ್ರೇ ಹೊರತುಣ ಏನು ಮಾತನಾಡಲಿಲ್ಲವಂತೆ, ನನ್ನನ್ನೇ ದಿಟ್ಟಿಸಿ ನೋಡ್ತಾ ಅವರು ಬೈ ಬೈ ಹೇಳಿ ಹೊರಟರು.

ನಂತರ ಪಕ್ಕದ ರೂಮಿನಿಂದ ಧ್ವನಿ ಕೇಳಿಸುತ್ತಿತ್ತು ಐಶ್ವರ್ಯ ರೈಗೆ ಏನಾಯ್ತು? ಅಭಿಷೇಕ್ ಬಚ್ಚನ್ ಗೆ ಏನಾಯ್ತು? ಅನಿತಾ ಬಚ್ಚನ್ ಗಾದ್ರು ಏನಾಗಿದೆ ? ಇವನ ಜೊತೆಗೆ ಐಶ್ವರ್ಯ ರೈನ ಹೀರೋಯಿನ್ ಆಗೋಕೆ ಬಿಟ್ಟಿದ್ದಾರಲ್ಲ ಅಂತ ಅವರು ಮಾತನಾಡಿಕೊಳ್ಳುತ್ತಿದ್ದರು ಎಂದು ನಡೆದ ಘಟನೆಯನ್ನು ರಜನಿಕಾಂತ್ ಅವರು ಎಂಥಿರನ್ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಹಂಚಿಕೊಂಡಿದ್ದು ಮಾತ್ರವೇ ಅಲ್ಲದೇ ತನ್ನ ಜೊತೆ ನಟಿಸಿದ್ದಕ್ಕಾಗಿ ಐಶ್ವರ್ಯ ರೈ ಗೆ ಧನ್ಯವಾದಗಳನ್ನು ಹೇಳಿದ್ದರು.

Leave a Comment