Puttakkana Makkalu: ಅಣ್ಣಯ್ಯ ಅಬ್ಬರಕ್ಕೆ ನಂಬರ್ 01 ಸ್ಥಾನ ಅಲ್ಲ ಟಾಪ್ 5 ರಿಂದಲೇ ಹೊರ ಬಿದ್ದ ಪುಟ್ಟಕ್ಕ

Written by Soma Shekar

Published on:

---Join Our Channel---

Puttakkana Makkalu : ಕನ್ನಡ ಕಿರುತೆರೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu) ಈಗ ಏಕಾಏಕೀ ಟಾಪ್ ಐದರಿಂದಲೇ ಹೊರ ಬಂದಿದೆ ಅನ್ನೋದು ಸೀರಿಯಲ್ ಅಭಿಮಾನಿಗಳಿಗೆ ಮಾತ್ರ ಸಖತ್ ಶಾಕ್ ನೀಡಿದೆ. ಲಕ್ಷ್ಮೀ ನಿವಾಸ ಸೀರಿಯಲ್ ಒಂದೆರಡು ಸಲ ಪುಟ್ಟಕ್ಕನ ಮಕ್ಕಳ ಜೊತೆ ಪೈಪೋಟಿ ಮಾಡಿತ್ತಾದರೂ ಅನಂತರ ಪುಟ್ಟಕ್ಕನ ಮಕ್ಕಳು ಮತ್ತೆ ನಂಬರ್ ಒನ್ ತಾನೇ ಆಗಿತ್ತು.‌

ಪ್ರತಿದಿನ ರಾತ್ರಿ 7:30 ಕ್ಕೆ ಪ್ರಸಾರ ಆಗ್ತಿದ್ದ ಈ ಸೀರಿಯಲ್ ನ ಸಮಯ ಈ ವಾರದ ಆರಂಭದಿಂದ ಬದಲಾಗಿದೆ. ಹೊಸ ಸೀರಿಯಲ್ ಅಣ್ಣಯ್ಯ (Annayya Serial) ಬಂದ ಕಾರಣ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಟೈಮ್ ನ ಹೊಸ ಸೀರಿಯಲ್ ಗೆ ನೀಡಿದ್ದು, ಈಗ ಪುಟ್ಟಕ್ಕನ ಮಕ್ಕಳು ಪ್ರತಿದಿನ ಸಂಜೆ‌ 6:30 ಕ್ಕೆ ಪ್ರಸಾರ ಆಗ್ತಿದೆ. ‌ಆದರೆ ಸಮಯದ ಈ ಬದಲಾವಣೆ ಸೀರಿಯಲ್ ಗೆ ದೊಡ್ಡ‌ ಹೊಡೆತವನ್ನೇ ನೀಡಿದ ಹಾಗಿದೆ.

ಈ ವಾರ ಸೀರಿಯಲ್ ಟಿಆರ್‌ಪಿ ಲಿಸ್ಟ್ ಹೊರಗೆ ಬಂದ ಸುದ್ದಿಯಲ್ಲಿ ಟಾಪ್ ಐದರಲ್ಲಿ ಪುಟ್ಟಕ್ಕನ ಮಕ್ಕಳು ಇಲ್ಲ ಎನ್ನುವುದು ಶಾಕಿಂಗ್ ಎನಿಸಿದೆ. ನಿರಂತರವಾಗಿ ನಂಬರ್ ಒನ್ ಆಗಿದ್ದ ಸೀರಿಯಲ್ ಒಂದೇ ವಾರದಲ್ಲಿ ಟಾಪ್ ಐದರ ರೇಸ್ ನಿಂದ ಹೊರಗೆ ಬಂದಿದ್ದೇಕೆ ಅನ್ನೋದು ಅನೇಕರಿಗೆ ಅಚ್ಚರಿ ಮೂಡಿಸಿದ್ದರೂ, ಸಮಯ ಬದಲಾವಣೆ ಇದಕ್ಕೆ ಕಾರಣ ಇರಬಹುದು.

ಪ್ರತಿದಿನ ಹಿಂದಿನ ಸಮಯಕ್ಕೆ ನೋಡುತ್ತಿದ್ದವರಿಗೆ ಹೊಸ ಸಮಯದಲ್ಲಿ ನೋಡುವುದು ನೆನಪಾಗದೇ ಇರಬಹುದು. ಮುಂದಿನ ವಾರಗಳಲ್ಲಿ ಮತ್ತೆ ಪುಟ್ಟಕ್ಕನ ಮಕ್ಕಳು ತನ್ನ ಹಿಂದಿನ ಚಾರ್ಮ್ ಅನ್ನು ಮರಳಿ ಪಡೆದು ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬರುತ್ತಾ ಅನ್ನೋದನ್ನ ನಾವು ಕಾದು ನೋಡಬೇಕಾಗಿದೆ.

Viral Video: ಪತಿಯಿಂದ ಮಾಸಿಕ 6 ಲಕ್ಷ‌ ರೂ. ಜೀವನಾಂಶ ಕೇಳಿದ ಮಹಿಳೆ: ಬೇಕಾದ್ರೆ ನೀನೇ ಸಂಪಾದನೆ ಮಾಡೆಂದ ನ್ಯಾಯಾಧೀಶರು

Leave a Comment