Puttakkana Makkalu: ಮಹಾ ತಿರುವಿನತ್ತ ಪುಟ್ಟಕ್ಕನ ಮಕ್ಕಳು; ಒಂದೇ ಸಮಯಕ್ಕೆ ಬಯಲಾಯ್ತು ಎರಡು ರಹಸ್ಯಗಳು

Written by Soma Shekar

Published on:

---Join Our Channel---

Puttakkana Makkalu: ಕಿರುತೆರೆಯಲ್ಲಿ ವರ್ಷಕ್ಕೂ ಅಧಿಕ ಸಮಯ ನಂಬರ್ ಒನ್ ಸೀರಿಯಲ್ ಆಗಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu) ಸಮಯ ಬದಲಾದ ಮೇಲೆ ನಂಬರ್ ಒನ್ ಸ್ಥಾನದಿಂದ ಹೊರಗೆ ಬಂದರೂ ಹೊಸ ಟ್ವಿಸ್ಟ್ ಗಳ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಈಗ ಸೀರಿಯಲ್ ನಲ್ಲಿ ಮಹಾ ತಿರುವೊಂದನ್ನ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

ಮುರುಳಿ ಮತ್ತು ವಿನುತ ಮದುವೆ ಸಮಯದಲ್ಲಿ ಸಿಂಗಾರಮ್ಮನ ಅಸಲಿಯತ್ತು ತಿಳ್ಕೊಂಡ ಸಹನಾ‌ ಒಂದು ಪತ್ರ ಬರೆದು ಎಲ್ಲಾ ವಿಷಯಗಳನ್ನು ಅದರಲ್ಲಿ ತಿಳಿಸಿ ಚೋಟು ಸಹಾಯದಿಂದ ಸ್ನೇಹ ಕೈಸೇರೋ ಹಾಗೆ ಮಾಡಿದ್ದಾಳೆ. ಸ್ನೇಹ ತನ್ನ ಬ್ಯಾಗ್ ನಲ್ಲಿದ್ದ ಪತ್ರ ತೆಗೆದು ಓದಿದ್ದಾಳೆ.

ಪತ್ರದಲ್ಲಿ ಇರುವ ವಿಷಯದ ಜೊತೆಗೆ ಅದ್ರಲ್ಲಿ ಇರೋ ಹ್ಯಾಂಡ್ ರೈಟಿಂಗ್ ಸಹನಾದು (Sahana) ಅನ್ನೋ ಅನುಮಾನ ಬಂದಿರುವ ಸ್ನೇಹ ಸುಮಾಗೆ ಫೋನ್ ಮಾಡಿ ಸಹನಾ ಬರೆದಿರೋದನ್ನ ಫೋಕಸ್ ಮಾಡಿ ಫೋಟೋಗಳನ್ನು ಕಳಿಸು ಅಂತ ಹೇಳಿದ್ದಾಳೆ.

ಈಗ ಹ್ಯಾಂಡ್ ರೈಟಿಂಗ್ ನೋಡಿದ ಮೇಲೆ ಸ್ನೇಹಾಗೆ (Sneha) ಸಹನಾ ಬದುಕಿದ್ದಾಳೆ ಅನ್ನೋದು ಗೊತ್ತಾಗುತ್ತಾ? ಅದೇ ವೇಳೆ ಪತ್ರದಲ್ಲಿ ಇರೊ ವಿಚಾರವನ್ನ ನೋಡಿದ ಮೇಲಾದ್ರೂ ಬಂಗಾರಮ್ಮನ ರೂಪದಲ್ಲಿರೋ ಸಿಂಗಾರಮ್ಮನ ನಾಟಕ ಪತ್ತೆ ಹಚ್ತಾಳಾ?? ಅನ್ನೋದನ್ನ ಕಾದು ನೋಡಬೇಕಾಗಿದೆ.

Varsham Movie: ವರ್ಷಂಗೆ ಹೀರೋ ಆಗಿ ಪ್ರಭಾಸ್ ನಿರ್ದೇಶಕನ ಮೊದಲ ಆಯ್ಕೆ ಆಗಿರ್ಲಿಲ್ಲ, ಈ ಸಿನಿಮಾ ರಿಜೆಕ್ಟ್ ಮಾಡಿ ಸ್ಟಾರ್ ಯಾರು?

Leave a Comment